twitter
    For Quick Alerts
    ALLOW NOTIFICATIONS  
    For Daily Alerts

    2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು

    |

    ಮನರಂಜನಾ ಲೋಕದಲ್ಲಿ ಒಟಿಟಿ ವೇದಿಕೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾಗಳು ನೇರವಾಗಿ ಆಲ್ ಲೈನ್ ನಲ್ಲಿ ರಿಲೀಸ್ ಆಗಿರುವ ಮೂಲಕ ಪ್ರೇಕ್ಷಕರು ಕುಳಿತಲ್ಲೇ ಸಿನಿಮಾ ವೀಕ್ಷಿಸಿ ಆನಂದಿಸುತ್ತಿದ್ದಾರೆ. ಸಿನಿಮಾಗಳ ಜೊತೆ ವೆಬ್ ಸರಣಿಗಳು ಸಹ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.

    ಲಾಕ್ ಡೌನ್ ನಿಂದ ಚಿತ್ರಮಂದಿರಗಳು ಪ್ರದರ್ಶನ ನಿಲ್ಲಿಸಿದ ಕಾರಣ ಒಟಿಟಿಗೆ ಬೇಡಿಕೆ ಹೆಚ್ಚಾಯಿತು. ರಿಲೀಸ್ ಗೆ ರೆಡಿಯಿದ್ದ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ರಿಲೀಸ್ ಆದವು. ಲಾಕ್ ಡೌನ್ ಸಮಯದಲ್ಲಿ ಅನೇಕ ಸಿನಿಮಾಗಳು ನೇರವಾಗಿ ಆನ್ ಲೈನ್ ನಲ್ಲಿ ತೆರೆಗೆ ಬಂದಿವೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಿದರೂ ಸಹ ಒಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಒಟಿಟಿ ನಿಧಾನವಾಗಿ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಿದೆ.

    ಈ ವರ್ಷ ಭಾರತದಲ್ಲಿ ಅನೇಕ ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಕೆಲವು ಸಿನಿಮಾಗಳು ಪ್ರೇಕ್ಷಕರ ಮನಗೆದ್ದರೆ, ಇನ್ನು ಕೆಲವು ಸಿನಿಮಾಗಳು ಪ್ರೇಕ್ಷಕರನ್ನು ರಂಜಿಸಲು ಸೋತಿವೆ. ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಸಿನಿಮಾಗಳ ಪಟ್ಟಿ ಇಲ್ಲಿದೆ.

    2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು2020: ನೆಟ್‌ಫ್ಲಿಕ್ಸ್‌ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

    ದಿಲ್ ಬೆಚಾರ

    ದಿಲ್ ಬೆಚಾರ

    ಈ ವರ್ಷ ಒಟಿಟಿಯಲ್ಲಿಸದ್ದು ಮಾಡಿದ ಸಿನಿಮಾಗಳಲ್ಲಿ ದಿಲ್ ಬೆಚಾರ ಮೊದಲ ಸ್ಥಾನದಲ್ಲಿದೆ. ಸುಶಾಂತ್ ಸಿಂಗ್ ರಜಪೂತ್ ಅಭಿನಯ ಕೊನೆಯ ಸಿನಿಮಾ ಇದಾಗಿದ್ದು, ಸಾವಿನ ನಂತರ ಒಟಿಟಿಯಲ್ಲಿ ರಿಲೀಸ್ ಆಗಿದೆ. ಹಚ್ಚು ವೀಕ್ಷಣೆ ಪಡೆದ ಸಿನಿಮಾಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಮುಖೇಶ್ ಚಾಬ್ರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ಸುಶಾಂತ್ ಸಿಂಗ್ ಜೊತೆ ನಾಯಕಿಯಾಗಿ ಸಂಜನಾ ಸಾಂಘಿ ಕಾಣಿಸಿಕೊಂಡಿದ್ದಾರೆ.

    ಸೂರರೈ ಪೊಟ್ರು

    ಸೂರರೈ ಪೊಟ್ರು

    ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ 2ನೇ ಸಿನಿಮಾ ಸೂರರೈ ಪೊಟ್ರು. ತಮಿಳು ನಟ ಸೂರ್ಯ ಆಭಿನಯದ ಈ ಸಿನಿಮಾ ನವೆಂಬರ್ 12ರಂದು ರಿಲೀಸ್ ಆಗಿದೆ. ಅಪರ್ಣ ಬಾಲಮುರಳಿ ನಾಯಕಿಯಾಗಿ ನಟಿಸಿದ್ದಾರೆ. ಕ್ಯಾಪ್ಟನ್ ಗೋಪಿನಾಥ್ ಅವರ ಜೀವನ ಆಧಾರಿತ ಸಿನಿಮಾ ಇದಾಗಿದ್ದು, ಈ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

    ಆರು ಟ್ವೀಟ್‌ನಲ್ಲೇ ದಾಖಲೆ ಮೇಲೆ ದಾಖಲೆ ಬರೆದ ವಿಜಯ್ಆರು ಟ್ವೀಟ್‌ನಲ್ಲೇ ದಾಖಲೆ ಮೇಲೆ ದಾಖಲೆ ಬರೆದ ವಿಜಯ್

    ಲುಡೊ ಸಿನಿಮಾ

    ಲುಡೊ ಸಿನಿಮಾ

    ಈ ವರ್ಷ ಒಟಿಟಿಯಲ್ಲಿ ಬಂದ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಮೂರನೇ ಸಿನಿಮಾ ಲೂಡೊ. ಈ ಸಿನಿಮಾ ಸಹ ನವೆಂಬರ್ 12ರಂದು ರಿಲೀಸ್ ಆಗಿದೆ. ಅಭಿಷೇಕ್ ಬಚ್ಚನ್, ರಾಜ್ ಕುಮಾರ್ ರಾವ್ ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅನುರಾಗ್ ಬಸು ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ.

    ಲಕ್ಷ್ಮೀ ಸಿನಿಮಾ

    ಲಕ್ಷ್ಮೀ ಸಿನಿಮಾ

    ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಸಿನಿಮಾ ಹೆಚ್ಚು ವೀಕ್ಷಣೆ ಪಡೆದ ಸಿನಿಮಾಗಳ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ. ಟೈಟಲ್ ನಿಂದ ವಿವಾದ ಸೃಷ್ಟಿಸಿದ್ದ ಈ ಸಿನಿಮಾ ಬಳಿಕ ಬದಲಾದ ಟೈಟಲ್ ಮೂಲಕ ಪ್ರೇಕ್ಷಕ ಮುಂದೆ ಬಂದಿದೆ. ಸಿನಿಮಾ ದೀಪಾವಳಿ ಹಬ್ಬದ ಮುಂಚಿತವಾಗಿ ಒಟಿಟಿಯಲ್ಲಿ ರಿಲೀಸ್ ಆಗಿದೆ.

    ಗುಂಜನ್ ಸಕ್ಸೇನಾ

    ಗುಂಜನ್ ಸಕ್ಸೇನಾ

    ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಪಟ್ಟಿಯಲ್ಲಿ ಗುಂಜನ್ ಸಕ್ಸೇನಾ 5ನೇ ಸ್ಥಾನದಲ್ಲಿದೆ. ಬಯೋಪಿಕ್ ಸಿನಿಮಾವಾಗಿದ್ದು, ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗುಂಜನ್ ಸಕ್ಸೇನಾ ಆಗಿ ನಟಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಶರಣ್ ಶರ್ಮಾ ನಿರ್ದೇಶನ ಮಾಡಿದ್ದಾರೆ.

    2020; ಕನ್ನಡ ಕಿರುತೆರೆಯಲ್ಲಿ ಬುಸುಗುಟ್ಟಿದ ಡಬ್ಬಿಂಗ್ ಧಾರಾವಾಹಿಗಳು2020; ಕನ್ನಡ ಕಿರುತೆರೆಯಲ್ಲಿ ಬುಸುಗುಟ್ಟಿದ ಡಬ್ಬಿಂಗ್ ಧಾರಾವಾಹಿಗಳು

    ಖುದಾ ಹಫೀಜ್

    ಖುದಾ ಹಫೀಜ್

    ಒಟಿಟಿಯಲ್ಲಿ ರಿಲೀಸ್ ಆದ ಅತೀ ಹೆಚ್ಚು ವೀಕ್ಷಣೆ ಪಡೆದ ಸಿನಿಮಾಗಳಲ್ಲಿ ಖುದಾ ಹಫೀಜ್ 6ನೇ ಸ್ಥಾನದಲ್ಲಿದೆ. ವಿದ್ಯತ್ ಜಮ್ವಾಲ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ರೊಮ್ಯಾಂಟಿಕ್, ಆಕ್ಷನ್ ಥ್ರಿಲ್ಲರ್ ಸಿನಿಮಾ ಇದಾಗಿದೆ. 2020ರಲ್ಲಿ ಅತೀ ಹೆಚ್ಚು ವಿಕ್ಷಣೆ ಪಡೆದ ಸಿನಿಮಾಗಳಲ್ಲಿ ಒಂದಾಗಿದೆ. ಫರೂಕ್ ಕಬೀರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

    ಗುಲಾಬೊ ಸಿತಾಬೊ ಮತ್ತು ಮೂಕುತಿ ಅಮ್ಮನ್

    ಗುಲಾಬೊ ಸಿತಾಬೊ ಮತ್ತು ಮೂಕುತಿ ಅಮ್ಮನ್

    2020 ಜೂನ್ ತಿಂಗಳಲ್ಲಿ ರಿಲೀಸ್ ಆದ ಗುಲಾಬೊ ಸಿತಾಬೊ ಸಿನಿಮಾ ಅತೀ ಹೆಚ್ಚು ವೀಕ್ಷಣೆ ಪಡೆದ ಸಿನಿಮಾಗಳಲ್ಲಿ 7ನೇ ಸ್ಥಾನದಲ್ಲಿದೆ. ಅಮಿತಾಬ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇನ್ನೂ 8ನೇ ಸ್ಥಾನದಲ್ಲಿ ನಟಿ ನಯನತಾರಾ ಅಭಿನಯದ ಮೂಕುತಿ ಅಮ್ಮನ್ ಸಿನಿಮಾವಿದೆ.

    Recommended Video

    ಚಿರು ಅಣ್ಣ ಹೇಳಿದ್ದಕ್ಕೆ ನಾನು ಹಾಡು ಬರೆಯೋಕೆ ಸ್ಟಾರ್ಟ್ ಮಾಡಿದ್ದು | Chetan Kumar | Filmibeat Kannada
    ವಿ ಮತ್ತು ಪೊನ್ಮಗಳ್ ವಂದಾಳ್

    ವಿ ಮತ್ತು ಪೊನ್ಮಗಳ್ ವಂದಾಳ್

    9ನೇ ಸ್ಥಾನದಲ್ಲಿ ನಾನಿ ಮತ್ತು ಸುಧೀರ್ ಬಾಬು ಅಭಿನಯದ ವಿ ಸಿನಿಮಾವಿದೆ. ರೊಮ್ಯಾಂಟಿಕ್ ಥ್ರಿಲ್ಲರ್ ಸಿನಿಮಾಗೆ ಮೋಹನ್ ಕೃಷ್ಣ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಿವೇತಾ ಥಾಮಸ್ ಮತ್ತು ಅದಿತಿ ರಾವ್ ಹೈದರಿ ನಾಯಕಿಯರಾಗಿ ಮಿಂಚಿದ್ದಾರೆ. 10ನೇ ಅತೀ ಹೆಚ್ಚು ವೀಕ್ಷಣೆ ಪಡೆದ ಸಿನಿಮಾ ಪೊನ್ಮಗಳ್ ವಂದಾಳ್. ಜ್ಯೋತಿಕಾ ಅಭಿನಯದ ಸಿನಿಮಾ ಇದಾಗಿದ್ದು, ಮೇ ತಿಂಗಳಲ್ಲಿ ಒಟಿಟಿಯಲ್ಲಿ ರಿಲೀಸ್ ಆಗಿದೆ. ಚಿತ್ರದಲ್ಲಿ ಜ್ಯೂತಿಕಾ ವಕೀಲೆಯಾಗಿ ಕಾಣಿಸಿಕೊಂಡಿದ್ದಾರೆ.

    English summary
    2020: Top 10 most watched direct OTT releases in India.
    Wednesday, December 16, 2020, 16:45
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X