For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತು

  |

  ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಮತ್ತು ಸಲ್ಮಾನ್ ಖಾನ್ ಪ್ರೀತಿ ವಿಚಾರ 90ರ ದಶಕದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಅಂದು ಮಾತ್ರವಲ್ಲ ಐಶ್ ಮತ್ತು ಸಲ್ಲು ಪ್ರೀತಿ ಪ್ರೇಮದ ವಿಚಾರ ಇಂದಿಗೂ ಸದ್ದು ಮಾಡುತ್ತಲೇ ಇರುತ್ತೆ. ಐಶ್ವರ್ಯಾ ಮತ್ತು ಸಲ್ಮಾನ್ ಇಬ್ಬರು ಇನ್ನೇನು ಮದುವೆಯಾಗಲಿದ್ದಾರೆ ಎಂಬಷ್ಟರಲ್ಲೇ ಎಲ್ಲವೂ ತಲೆಕೆಳಗಾಗಿತ್ತು. ಇಬ್ಬರ ಬ್ರೇಕಪ್ ಸುದ್ದಿ ಅಭಿಮಾನಿಗಳಿಗೆ ಮತ್ತು ಚಿತ್ರರಂಗಕ್ಕೆ ಶಾಕ್ ನೀಡಿತ್ತು.

  Salman Khan ಜೊತೆ ಐಶ್ವರ್ಯ ರೈ ಬ್ರೇಕಪ್ ಮಾಡಿಕೊಳ್ಳಲು ಇದೇ ಕಾರಣವಾಯ್ತಾ? | Filmibeat Kannada

  ಬ್ರೇಕಪ್ ಬಳಿಕ ಈ ವಿಚಾರವಾಗಿ ಸಾಕಷ್ಟು ಸುದ್ದಿಗಳು ಹರಿದಾಡಲು ಶುರುವಾಯಿತು. ಇಂದಿಗೂ ಅನೇಕ ಕಾರಣಗಳು ಕೇಳಿಬರುತ್ತಿರುತ್ತೆ. ಆದರೆ ಈ ಬಗ್ಗೆ ಸ್ವತಃ ಐಶ್ವರ್ಯಾ ರೈ ಅವರೇ ಪ್ರತಿಕ್ರಿಯೆ ನೀಡಿದ್ದಾರೆ. ಬ್ರೇಕಪ್ ಮಾಡಿಕೊಂಡು ವರ್ಷದ ಬಳಿಕ ಐಶ್ವರ್ಯ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ. ಐಶ್ವರ್ಯಾ ಮಾತುಗಳು ಸಲ್ಮಾನ್ ಅಭಿಮಾನಿಗಳಿಗೆ ಅಚ್ಚರಿ ಜೊತೆಗೆ ಶಾಕ್ ನೀಡಿತ್ತು.

  ಐಶ್ವರ್ಯಾ, ಸಲ್ಮಾನ್ ಖಾನ್ ಬಗ್ಗೆ ಮತ್ತು ಕುಡಿದು ನೀಡುತ್ತಿದ್ದ ಹಿಂಸೆ, ಕ್ರೂರ ವರ್ತನೆ ಬಗ್ಗೆ ಸಮಯ ಸಿಕ್ಕಾಗಲೆಲ್ಲಾ ಬಹಿರಂಗ ಪಡಿಸಿದ್ದಾರೆ. ಮುಂದೆ ಓದಿ...

  1997ರಲ್ಲಿ ಪ್ರೀತಿ ಪ್ರಾರಂಭ

  1997ರಲ್ಲಿ ಪ್ರೀತಿ ಪ್ರಾರಂಭ

  ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ನಡುವೆ ಪ್ರೀತಿ ಪ್ರಾರಂಭವಾಗಿದ್ದು 1997ರಲ್ಲಿ. ಹಮ್ ದಿಲ್ ದೇ ಚುಕೆ ಸನಮ್ ಚಿತ್ರೀಕರಣ ಸಮಯದಲ್ಲಿ. ಈ ಸಿನಿಮಾ ಮೂಲಕ ಐಶ್ ಮತ್ತು ಸಲ್ಮಾನ್ ಇಬ್ಬರು ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಈ ಸಿನಿಮಾ ಸಮಯದಲ್ಲಿ ಪ್ರಾರಂಭವಾದ ಸ್ನೇಹ ಬಳಿಕ ಪ್ರೀತಿಗೆ ತಿರುಗಿ ಇಬ್ಬರು ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದರು.

  2001ರಲ್ಲಿ ಬ್ರೇಕಪ್

  2001ರಲ್ಲಿ ಬ್ರೇಕಪ್

  ಅಷ್ಟರಲ್ಲಾಗಲೇ ಸಲ್ಮಾನ್ ಮತ್ತು ಐಶ್ವರ್ಯಾ ಪ್ರೀತಿಯ ವಿಚಾರ ಜಗಜ್ಜಾಹೀರಾಗಿತ್ತು. ಇನ್ನೇನು ಇಬ್ಬರು ಮದುವೆ ಆಗಲಿದ್ದಾರೆ ಅಂತನೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಆ ಒಂದು ರಾತ್ರಿ ನಡೆದ ಘಟನೆ ಇಬ್ಬರನ್ನು ಶಾಶ್ವತವಾಗಿ ದೂರ ಆಗುವಂತೆ ಮಾಡಿತ್ತು. ಐಶ್ವರ್ಯಾ ಅವರ ಅಪಾರ್ಟ್ಮೆಂಟ್‌ಗೆ ತಡರಾತ್ರಿ ತೆರಳಿದ್ದ ಸಲ್ಮಾನ್ ಬಾಗಿಲು ಬಡಿಯಲು ಪ್ರಾರಂಭಿಸುತ್ತಾರೆ. ಬೆಳಗ್ಗೆ 3 ಗಂಟೆವರೆಗೂ ಬಾಗಿಲು ತಟ್ಟಿದ ಸಲ್ಮಾನ್‌ಗೆ ಬಳಿಕ ಮನೆಯೊಳಗೆ ಬರಲು ಪ್ರವೇಶ ನೀಡುತ್ತಾರೆ ಐಶ್ವರ್ಯಾ. ಇಬ್ಬರ ಈ ಗಲಾಟೆಯ ಸುದ್ದಿ ಅಂದು ದೊಡ್ಡಮಟ್ಟದಲ್ಲಿ ಸಂಚಲನ ಮೂಡಿಸಿತ್ತು.

  2002ರಲ್ಲಿ ಬ್ರೇಕಪ್ ಬಗ್ಗೆ ಮೌನ ಮುರಿದ ಐಶ್ವರ್ಯಾ

  2002ರಲ್ಲಿ ಬ್ರೇಕಪ್ ಬಗ್ಗೆ ಮೌನ ಮುರಿದ ಐಶ್ವರ್ಯಾ

  ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ಇಬ್ಬರೂ ದೂರ ದೂರ ಆದ ಬಳಿಕ ಸಾಕಷ್ಟು ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಆದರೆ 2002ರಲ್ಲಿ ಸ್ವತಃ ಐಶ್ವರ್ಯಾ ರೈ ಅವರೇ ಈ ಬಗ್ಗೆ ಬಹಿರಂಗ ಪಡಿಸಿದರು. ಸಲ್ಮಾನ್ ಅವರ ಕ್ರೂರ ವರ್ತನೆ ಬಗ್ಗೆ ವಿವರಿಸಿದ್ದರು.

  ಸಲ್ಮಾನ್ ನೀಡಿದ ಹಿಂಸೆಯ ಬಗ್ಗೆ ಐಶ್ವರ್ಯಾ ಹೇಳಿಕೆ

  ಸಲ್ಮಾನ್ ನೀಡಿದ ಹಿಂಸೆಯ ಬಗ್ಗೆ ಐಶ್ವರ್ಯಾ ಹೇಳಿಕೆ

  'ಕಳೆದ ಮಾರ್ಚ್ ನಲ್ಲಿ (2002ರ ಸಂದರ್ಶನ) ಸಲ್ಮಾನ್ ಮತ್ತು ನಾನು ಬ್ರೇಕಪ್ ಮಾಡಿಕೊಂಡೆವು. ನಾವು ಬೇರೆ ಆದ ಬಳಿಕ ನನ್ನ ಬಗ್ಗೆ ತುಂಬಾ ಕೆಟ್ಟದಾಗಿ ಮಾತನಾಡಲು ಪ್ರಾರಂಭಿಸಿದರು. ಅಲ್ಲದೆ ನನ್ನ ಸಹ ನಟರೊಂದಿಗೆ ಸಂಬಂಧ ಹೊಂದಿದ್ದಾರೆಂದು ಅನುಮಾನಿಸಿದ್ದರು. ಅಭಿಷೇಕ್ ಬಚ್ಚನ್‌ನಿಂದ ಶಾರುಖ್ ಖಾನ್ ವರೆಗೂ ಸಂಬಂಧ ಕಲ್ಪಿಸಿದ್ದರು. ದೈಹಿಕವಾಗಿ ನನಗೆ ಹಿಂಸೆ ನೀಡಿದ್ದಾರೆ. ಆದರೆ ನಾನು ಏನು ಆಗಿಲ್ಲ ಎಂಬಂತೆ ಕೆಲಸಕ್ಕೆ ಹೋಗುತ್ತಿದ್ದೆ. ಒಂದು ವೇಳೆ ಸಲ್ಮಾನ್ ಕರೆ ಸ್ವೀಕರಿಸದಿದ್ದರೆ ಅವರೇ ದೈಹಿಕವಾಗಿ ಗಾಯಮಾಡಿಕೊಳ್ಳುತ್ತಿದ್ದರು' ಎಂದು ಬಹಿರಂಗ ಪಡಿಸಿದ್ದರು.

  ಕುಡಿದು ಹಿಂಸೆ ನೀಡುತ್ತಿದ್ದ ಸಮಯದಲ್ಲೂ ಜೊತೆಯಲ್ಲಿದ್ದೆ

  ಕುಡಿದು ಹಿಂಸೆ ನೀಡುತ್ತಿದ್ದ ಸಮಯದಲ್ಲೂ ಜೊತೆಯಲ್ಲಿದ್ದೆ

  'ಸಲ್ಮಾನ್ ಖಾನ್ ಕುಡಿತದ ಚಟದ ಬಗ್ಗೆಯೂ ಐಶ್ವರ್ಯಾ ಬಹಿರಂಗ ಪಡಿಸಿದ್ದಾರೆ. 'ನಾನು ಅವರು ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಹಂತವನ್ನು ಸಹಿಸಿಕೊಂಡಿದ್ದೀನಿ. ಆದರೆ ಅದಕ್ಕೆ ಪ್ರತಿಯಾಗಿ ನನಗೆ ಸಿಕ್ಕಿದ್ದು, ನಿಂದನೆ ಮತ್ತು ಹಿಂಸೆ. ದೈಹಿಕವಾಗಿ ಮತ್ತು ಭಾವನಾತ್ಮಕವಾದ ಹಿಂಸೆ. ಹಾಗಾಗಿ ನಾನು ಎಲ್ಲಾ ಸ್ವಾಭಿಮಾನಿ ಮಹಿಳೆಯರಂತೆ ಅವರೊಂದಿಗಿನ ನನ್ನ ಸಂಬಂಧವನ್ನು ಕೊನೆಗೊಳಿಸಿದೆ' ಎಂದು ಸಲ್ಮಾನ್ ಕೆಟ್ಟ ವರ್ತನೆಯ ಬಗ್ಗೆ ವಿವರವಾಗಿ ಬಹಿರಂಗ ಪಡಿಸಿದ್ದರು.

  ಸಂತೋಷದ ಜೀವನ ನಡೆಸುತ್ತಿರುವ ಐಶ್ವರ್ಯಾ

  ಸಂತೋಷದ ಜೀವನ ನಡೆಸುತ್ತಿರುವ ಐಶ್ವರ್ಯಾ

  ಬ್ರೇಕಪ್ ರದ್ದಾಂತದ ಬಳಿಕ ಐಶ್ವರ್ಯಾ 2007ರಲ್ಲಿ ಅಭಿಷೇಕ್ ಬಚ್ಚನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸದ್ಯ ಐಶ್ವರ್ಯಾ ರೈ ನಟ ಅಭಿಷೇಕ್ ಬಚ್ಚನ್ ಜೊತೆ ಸುಖಕರ ಜೀವನ ನಡೆಸುತ್ತಿದ್ದಾರೆ. ಇಬ್ಬರ ದಾಂಪತ್ಯಕ್ಕೆ ಮುದ್ದಾದ ಮಗಳು ಕೂಡ ಇದ್ದಾರೆ. ಇನ್ನು ಸಲ್ಮಾನ್ ಖಾನ್ ಸಹ ತನ್ನ ವೃತ್ತಿ ಜೀವನದಲ್ಲಿ ಮುಂದುವರೆದಿದ್ದಾರೆ. ಆದರೆ ಇನ್ನು ಮದುವೆಯಾಗದೆ ಏಕಾಂಗಿ ಜೀವನ ನಡೆಸುತ್ತಿದ್ದಾರೆ.

  English summary
  When Actress Aishwarya rai Bachchan broke her silence on Salman Khan's alcoholic misbehaviour.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X