»   »  ನಿರ್ದೇಶಕ ರತ್ನಜ ವರ್ಸಸ್ ಸೂಪರ್ ಸ್ಟಾರ್ ರಜನಿ!

ನಿರ್ದೇಶಕ ರತ್ನಜ ವರ್ಸಸ್ ಸೂಪರ್ ಸ್ಟಾರ್ ರಜನಿ!

Subscribe to Filmibeat Kannada

ನಿರ್ದೇಶಕ ರತ್ನಜ ಮತ್ತೆ ಸಿಡಿದೆದ್ದಿದ್ದಾರೆ.ಹಾಗಂತ ಮತ್ತೆ ಪತ್ರಕರ್ತರ ಮೇಲೆ ಎಂದುಕೊಂಡರೆ ತಪ್ಪು. ಈಗ ಅವರು ಕೋಪಗೊಂಡಿರುವುದು ಸೋಮೇಶ್ವರ ಮತ್ತು ಹಳೇಬೀಡಿನಲ್ಲಿ ಶೂಟಿಂಗ್‌ಗೆ
ಅನುಮತಿ ನೀಡದಿರುವ ಕುರಿತು.

ಹೌದು, ಅಲ್ಲಿಯ ಪೊಲೀಸ್ ಹಾಗೂ ರಕ್ಷಣಾ ಇಲಾಖೆಯ ಬಗ್ಗೆ ರತ್ನಜ ಬೇಸರದ ಸಿಟ್ಟು ತೋರಿದ್ದಾರೆ. ನಾವು ಕನ್ನಡಿಗರು ಕನ್ನಡ ಸಿನಿಮಾ ಮಾಡುತ್ತೇವೆ ಎಂದರೆ ಇವರು ಕಿರಿಕಿರಿ ಮಾಡುತ್ತಾರೆ. ಅದೂ ಕನ್ನಡ ಕುರಿತು ಬರೆದ ಹಾಡಿದು ಎಂದರೂ ಒಪ್ಪಲಿಲ್ಲ.

ಆದರೆ ಅದೇ ಸ್ಥಳದಲ್ಲಿ ರಜನಿಕಾಂತ್ ಬಂದು ಶೂಟಿಂಗ್ ಮಾಡುತ್ತೇನೆ ಎಂದರೆ ಕಣ್ಣುಮುಚ್ಚಿಕೊಂಡು, ಜಾಗ ಕೊಡುತ್ತಾರೆ. ಒಂದು ಹಾಡು ಮತ್ತು ಪಂಚಾಯಿತಿಕಟ್ಟೆ ದೃಶ್ಯವನ್ನು ಚಿತ್ರಿಸಿದ್ದನ್ನು ಕೆಲವು ದಿನಗಳ ಹಿಂದೆ ರಜನಿ ಚಿತ್ರವೊಂದರಲ್ಲಿ ನೋಡಿದೆ. ಇದು ಯಾವ ನ್ಯಾಯ ಎಂದು ಕಣ್ಣು, ಕಿವಿ, ಮೂಗು, ಬಾಯಲ್ಲಿನೀರು ಸುರಿಸುತ್ತಿದ್ದಾರೆ! ಅಂದಹಾಗೆ ರತ್ನಜ ನಿರ್ದೇಶಿಸುತ್ತಿರುವ ಚಿತ್ರದ ಹೆಸರು ಪ್ರೇಮಿಸಂ. ಅರ್ಧಭಾಗ ಶೂಟಿಂಗ್ ಮುಗಿದಿದೆ, ಇನ್ನರ್ಧ ಉಳಿದಿದೆ.

(ಸ್ನೇಹಸೇತು:ವಿಜಯಕರ್ನಾಟಕ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada