»   » ರಾಮ ರಾಮ, ರಮ್ಯಾಗೆ ಕೋಪ ಬಂದಿದೆ!

ರಾಮ ರಾಮ, ರಮ್ಯಾಗೆ ಕೋಪ ಬಂದಿದೆ!

Posted By: Staff
Subscribe to Filmibeat Kannada
Ramya is fuming again
ರಮ್ಯಾ ಕೋಪ ಮಾಡಿಕೊಳ್ಳುವುದು ಅಂತಹ ವಿಶೇಷವಲ್ಲದಿದ್ದರೂ ಈ ಬಾರಿ ಬಂದಿರುವ ಕೋಪ ಅಂತಿಥದ್ದಲ್ಲ. ತೆಲುಗು ನಟ ರಾಮ್ ಚರಣ್ ಮದುವೆಯ ಜೊತೆ ತಮ್ಮ ಹೆಸರು ಕೆಲ ಟಿವಿ ಮಾಧ್ಯಮಗಳು ತಳಕು ಹಾಕಿದ್ದನ್ನು ನೋಡಿ ರಮ್ಯಾ ಕೆಂಡಾಮಂಡಲವಾಗಿದ್ದಾರೆ.

ತೆಲುಗು ನಟ ರಾಮ್ ಚರಣ್ ಇತ್ತೀಚೆಗೆ 'ಚಿರುತ' ಚಿತ್ರದ ನಾಯಕಿ ನೇಹಾ ಶರ್ಮಾಳೊಂದಿಗೆ ಮದುವೆಯಾದರು ಎಂದು ಕೂಡ ಗಾಳಿಸುದ್ದಿ ಹಬ್ಬಿತ್ತು. ಮದುವೆ ನಡೆದಿರುವುದು ಕಪೋಲಕಲ್ಪಿತ ಎಂದು ರಾಮ್ ಅಪ್ಪ ಚಿರಂಜೀವಿಯಾದಿಯಾಗಿ ಎಲ್ಲರೂ ಅಲ್ಲಗಳೆದಿದ್ದಾರೆ. ಅದೇ ಸಮಯದಲ್ಲಿ ರಾಮ್ ಸ್ನೇಹಿತೆಯಾಗಿರುವ ರಮ್ಯಾ ಆತನೊಂದಿಗೆ ತನನಂ ತನನಂ ನಡೆಸುತ್ತಿದ್ದಾರೆ ಎಂದು ಕೆಲ ಟಿವಿ ಚಾನಲ್ ಗಳು ಪುಕಾರು ಎಬ್ಬಿಸಿದ್ದವು. ಅನಾವಶ್ಯಕವಾಗಿ ರಾಮ್ ಜೊತೆ ತಮ್ಮ ಹೆಸರನ್ನು ತಂದಿದ್ದು ರಮ್ಯಾಗೆ ಶ್ಯಾನೆ ಕೋಪ ತರಿಸಿದೆ.

ರಮ್ಯಾಳ ಕೋಪವೂ ಸಾತ್ವಿಕವಾದದ್ದೇ. ಕನ್ನಡದ ಜೊತೆ ತೆಲುಗು ಮತ್ತು ತಮಿಳು ಚಿತ್ರದಲ್ಲಿಯೂ ಸಾಕಷ್ಟು ಬಿಜಿಯಾಗಿರುವ ರಮ್ಯಾ, "ತೆಲುಗು ನಟ ರಾಮ್ ಮತ್ತು ನಾನು ಉತ್ತಮ ಗೆಳೆಯರೆನ್ನುವುದನ್ನು ಅಲ್ಲಗಳೆಯುವುದಿಲ್ಲ. ಅವರನ್ನು ಆಗಾಗ ಭೇಟಿಯಾಗುತ್ತಿರುತ್ತೇನೆ. ನಟನಾ ತರಗತಿಯನ್ನು ಇಬ್ಬರೂ ಒಟ್ಟಾಗಿ ಪಡೆಯುತ್ತಿದ್ದೇವೆ. ಇಷ್ಟ ಮಾತ್ರಕ್ಕೆ ನಮ್ಮಿಬ್ಬರಲ್ಲಿ ಇಲ್ಲದ ಸಂಬಂಧ ಹುಟ್ಟುಹಾಕುವುದು ಅರ್ಥಹೀನ. ನಾವಿಬ್ಬರೂ ಕೇವಲ ಸ್ನೇಹಿತರು ಮಾತ್ರ." ಎಂದು ಉತ್ತರ ನೀಡಿದ್ದಾರೆ.

ಸದ್ಯಕ್ಕೆ ರಮ್ಯಾ ಗೋಲ್ಡನ್ ಸ್ಟಾರ್ ಗಣೇಶ ಜೊತೆ ಕನ್ನಡ ಚಿತ್ರ ಬೊಂಬಾಟ್‌ನಲ್ಲಿ ಅಭಿನಯಿಸುತ್ತಿದ್ದಾರೆ.ಉಪೇಂದ್ರ ಜತೆಯಲ್ಲಿ ಭೀಮೂಸ್ ಬ್ಯಾಂಗ್ ಬ್ಯಾಂಗ್ ಹಾಗೂ ಸುದೀಪ್ ಜತೆ ಇನ್ನೊಂದು ಚಿತ್ರದಲ್ಲಿ ಕೂಡ ರಮ್ಯಾ ಕಾಣಿಸಲಿದ್ದಾರೆ.

(ದಟ್ಸ್ ಸಿನಿ ವಾರ್ತೆ)

ರಾಂಗಾದ ರಮ್ಯಾಳ ರಂಗಾರಂಗು ಚಿತ್ರಗಳು
ಲಕ್ಕಿ ಸ್ಟಾರ್ ಜತೆ ನಿರ್ದೇಶಕ ಸಿಂಗ್ ಬಾಬು ಬ್ಯಾಂಗ್
ಗೋಲ್ಡನ್ ಸ್ಟಾರ್, ಲಕ್ಕಿ ಸ್ಟಾರ್ ಜೋಡಿ ಬೊಂಬಾಟ್
ಮೆಗಾಸ್ಟಾರ್ ಚಿರಂಜೀವಿ ಪುತ್ರನ ಚೊಚ್ಚಲ ಚಿತ್ರ 'ಚಿರುತ"!

Read more about: ramya, ram, ganesh, golden star, bombat, telugu film
English summary
Ramya is fuming again

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada