»   » ಚಿತ್ರನಟಿ ರಂಜಿತಾ ಆತ್ಮಹತ್ಯೆಗೆ ಯತ್ನ?

ಚಿತ್ರನಟಿ ರಂಜಿತಾ ಆತ್ಮಹತ್ಯೆಗೆ ಯತ್ನ?

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣದಲ್ಲಿ ಕಾಣಿಸಿಕೊಂಡಿದ್ದ ನಟಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಮಾರ್ಚ್ 2ರಂದು ಆಧ್ಯಾತ್ಮಿಕ ಗುರು ಸ್ವಾಮಿ ನಿತ್ಯಾನಂದ ರಾಸಲೀಲೆಯ ವಿಡಿಯೋವನ್ನು ಸನ್ ನ್ಯೂಸ್ ನ ಪ್ರಸಾರ ಮಾಡಿತ್ತು. ನಿತ್ಯಾನಂತ ರಾಸಲೀಲೆ ಪ್ರಕರಣ ಮಾಧ್ಯಮಗಳಲ್ಲಿ ಪ್ರಮುಖ ಸುದ್ದಿಯಾಗಿರುವ ಹಿನ್ನೆಲೆಯಲ್ಲಿ ನಟಿ ರಂಜಿತಾ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ತಿಳಿದುಬಂದಿದೆ.ಈಗಾಗಲೇ ವಿಚ್ಛೇದಿತ ಸೈನಿಕಾಧಿಕಾರಿಯೊಬ್ಬರನ್ನು ನಟಿ ರಂಜಿತಾ ಮದುವೆಯಾಗಿದ್ದಾರೆ.

ದಿನೇ ದಿನೇ ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರಕರಣ ಹೊಸ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಸ್ವಾಮಿ ನಿತ್ಯಾನಂದನನ್ನು ಬೆದರಿಸಲು ಸ್ವತಃ ರಂಜಿತಾಳೇ ಈ ರಾಸಲೀಲೆ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.ಆದರೆ ದುರದೃಷ್ಟ ಸಂಗತಿಯೆಂದರೆ ರಾಸಲೀಲೆ ವಿಡಿಯೋ ಮಾಧ್ಯಮಗಳ ಕೈಗೆ ಸಿಕ್ಕಿ ರಂಜಿತಾ ಪ್ಲಾನ್ ಎಲ್ಲಾ ಉಲ್ಟಾ ಆಗಿದೆ ಎನ್ನಲಾಗಿದೆ.

ಏತನ್ಮಧ್ಯೆ ಸ್ವಾಮಿ ನಿತ್ಯಾನಂದರ ವಕೀಲ ಎಂ ಶ್ರೀಧರ್ ಅವರು ಮಾತನಾಡುತ್ತಾ, ಸ್ವಾಮಿ ನಿತ್ಯಾನಂದರು ಎಲ್ಲೂ ತಲೆಮರೆಸಿಕೊಂಡು ಓಡಿಹೋಗಿಲ್ಲ. ಅವರು ಕುಂಭಮೇಳದಲ್ಲಿ ಭಾಗವಹಿಸುವ ಸಲುವಾಗಿ 4000 ಭಕ್ತಾದಿಗಳೊಂದಿಗೆ ವಾರಣಾಸಿಯಲ್ಲಿದ್ದಾರೆ. ಮಾರ್ಚ್ 18ರಂದು ಅವರು ಹಿಂತಿರುಗಲಿದ್ದಾರೆ ಎಂದು ತಿಳಿಸಿದ್ದಾರೆ.

ಸ್ವಾಮಿ ನಿತ್ಯಾನಂದ ರಾಸಲೀಲೆ ಪ್ರರಣದ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಶ್ರೀಧರ್, ರಂಜಿತಾ ವೈವಾಹಿಕ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿದ್ದ ಕಾರಣ ಆಕೆ ಮಾನಸಿಕವಾಗಿ ಖಿನ್ನರಾಗಿ ಆಶ್ರಮಕ್ಕೆ ಬಂದಿದ್ದರು. ಬಳಿಕ ಅವರು ನಿತ್ಯಾನಂದ ಅವರ ಪರಭಕ್ತೆಯಾಗಿ ಬದಲಾದರು. ರಾಸಲೀಲೆ ವಿಡಿಯೋ ನಕಲಿಯಾಗಿದ್ದು, ವಿಡಿಯೋದಲ್ಲಿ ಕಾಣಿಸುವ ಮಹಿಳೆ ಕುತ್ತಿಗೆ ಭಾಗವನ್ನು ಸಂಪೂರ್ಣವಾಗಿ ಮುಚ್ಚಿಕೊಂಡೇ ಕಾಣಿಸುವುದರ ಹಿಂದಿನ ರಹಸ್ಯವೇನು ಎಂದು ಅವರು ಪ್ರಶ್ನಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada