»   » ಗಾಢ ಚುಂಬನದಲ್ಲಿ ಸೆರೆಸಿಕ್ಕ ರತ್ನಜ, ಅಮೂಲ್ಯ

ಗಾಢ ಚುಂಬನದಲ್ಲಿ ಸೆರೆಸಿಕ್ಕ ರತ್ನಜ, ಅಮೂಲ್ಯ

Posted By:
Subscribe to Filmibeat Kannada

ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ರತ್ನಜ ಹಾಗೂ ನಟಿ ಅಮೂಲ್ಯ ಪರಸ್ಪರ ಗಾಢವಾಗಿ ಚುಂಬಿಸುತ್ತಿರುವ ದೃಶ್ಯಗಳು ಕನ್ನಡ ಚಿತ್ರೋದ್ಯಮದಲ್ಲಿ ಬಾರಿ ಗುಲ್ಲೆಬ್ಬಿಸಿವೆ. ರತ್ನಜ ಹಾಗೂ ಅಮೂಲ್ಯ ಅವರ ಬಿಸಿಬಿಸಿ ಚುಂಬನ ದೃಶ್ಯಗಳನ್ನು ಕಸ್ತೂರಿ ವಾಹಿನಿ ಈಗಾಗಲೆ ಪ್ರಸಾರ ಮಾಡಿದೆ. ಹಲವು ಆಂಗ್ಲ ಪತ್ರಿಕೆಗಳು ಅಮೂಲ್ಯ, ರತ್ನಜ ಚುಂಬನ ವರದಿಗಳನ್ನು ರಸವತ್ತಾಗಿ ಬಿತ್ತರಿಸಿವೆ.

ವಿಡಿಯೋ: ರತ್ನಜ, ಅಮೂಲ್ಯ ಗಾಢ ಚುಂಚನ

ರತ್ನಜ, ಅಮೂಲ್ಯ ಒಬ್ಬರನ್ನೊಬ್ಬರು ಪರಸ್ಪರ ಚುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಚುಂಬನ ದೃಶ್ಯಗಳು ಎಂಎಂಎಸ್, ಎಸ್ಸೆಮ್ಮೆಸ್ ಮೂಲಕ ಮೊಬೈಲ್ ಫೋನ್ ಗಳಲ್ಲಿ ಹರಿದಾಡುತ್ತಿದ್ದು ಯುವಕರ ನಿದ್ದೆಗೆಡಿಸಿತ್ತಿವೆ. ಈ ಚುಂಬನ ದೃಶ್ಯಗಳು ಬಿಸಿಬಿಸಿ ಬಜ್ಜಿ, ಬೋಂಡಾಗಳಂತೆ ಒಬ್ಬರಿಂದೊಬ್ಬರಿಗೆ ಹರಿದಾಡುತ್ತಿವೆ.

ಕಸ್ತೂರಿ ವಾಹಿನಿ ವರದಿ ಪ್ರಕಾರ,ಚುಂಬನ ದೃಶ್ಯಗಳನ್ನು ಡಿಜಿಟಲ್ ಕ್ಯಾಮೆರಾದಲ್ಲಿ ತೆಗೆಯಲಾಗಿದೆ. ಸೆಪ್ಟೆಂಬರ್ 6, 2009ರಲ್ಲಿ ವಿಡಿಯೋ ಸೇರಿದಂತೆ ಚುಂಬನ ದೃಶ್ಯಳನ್ನು ತೆಗೆಯಲಾಗಿದೆ ಎನ್ನಲಾಗಿದೆ. ವಿಡಿಯೋ ತೆಗೆದ ವ್ಯಕ್ತಿಯ ಹೆಸರನ್ನು ಕಸ್ತೂರಿ ವಾಹಿನಿ ಗುಪ್ತವಾಗಿಟ್ಟಿದೆ.

ವಿಡಿಯೋದಲ್ಲಿ ರತ್ನಜ ಹಾಗೂ ಅಮೂಲ್ಯ ಇಬ್ಬರೂ ಪ್ರಣಯ ಸನ್ನಿವೇಶಗಳಲ್ಲಿದ್ದಾರೆ ಎನ್ನಲಾಗಿದೆ. ಆದರೆ ಈ ವಿಷಯವನ್ನು ರತ್ನಜ ತಳ್ಳಿಹಾಕಿದ್ದ್ದು ವಿಡಿಯೋ ಹಾಗೂ ಛಾಯಾಚಿತ್ರಗಳನ್ನು ತಿರುಚಲಾಗಿದೆ.ತಮ್ಮಿಂದ ಹಣಕ್ಕಾಗಿ ಕೀಳಲು ವ್ಯಕ್ತಿಯೊಬ್ಬ ಈ ರೀತಿ ಮಾಡಿದ್ದಾನೆ ಎಂದು ಅವರು ಆರೋಪಿಸಿದ್ದಾರೆ. ನನ್ನ ಹಾಗೂ ಅಮೂಲ್ಯ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನವಿದು ಎಂದು ರತ್ನಜ ಪ್ರತಿಕ್ರಿಯಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada