twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಿತ್ರ ವಿಮರ್ಶೆಗಳಲ್ಲಿ ಈ ತಾರತಮ್ಯ ಏಕೆ?

    By * ಬಾಲರಾಜ್ ತಂತ್ರಿ
    |

    ಹಾಲಿವುಡ್, ಬಾಲಿವುಡ್, ಕೋಲಿವುಡ್‌ಗೆ ಹೋಲಿಸಿದರೆ "ಸ್ಯಾಂಡಲ್ ವುಡ್ " ಚಿತ್ರೋದ್ಯಮ ಒಂದು ಪುಟ್ಟ ಗುಡಿಸಲು ಇದ್ದಹಾಗೆ. ಕನ್ನಡ ಚಿತ್ರಗಳಿಗೆ ಕರ್ನಾಟಕವೇ ಮೂಲ ಮಾರುಕಟ್ಟೆ. ಅದರಲ್ಲೂ ಪರಭಾಷಾ ಚಿತ್ರಗಳ ವಿಪರೀತ ಹಾವಳಿ. ಏಕಕಾಲದಲ್ಲಿ ಬಿಡುಗೊಡೆಗೊಂಡ ಕನ್ನಡ Vs ದೊಡ್ಡ ಬಜೆಟ್ ನ ಪರಭಾಷಾ ಚಿತ್ರಗಳಿಗೆ ಸದಭಿರುಚಿಯ ಕನ್ನಡ ಚಿತ್ರಗಳು ನೆಲಕಚ್ಚಿದ ಹಲವಾರು ಉದಾಹರಣೆಗಳು ನಮ್ಮ ಮುಂದಿವೆ.

    ಕನ್ನಡ ಮಾಧ್ಯಮಗಳ ಜೊತೆಗೆ ಎನ್ ಡಿಟಿವಿ, ರೆಡಿಫ್, ಟೈಮ್ಸ್, ಡೆಕ್ಕನ್ ಸೇರಿದಂತೆ ಹಲವಾರು ಆಂಗ್ಲ ಮಾಧ್ಯಮಗಳಲ್ಲಿ ಕನ್ನಡ ಚಿತ್ರಗಳ ವಿಮರ್ಶೆ ಪ್ರಕಟವಾಗುತ್ತಿದೆ. ಆದರೆ ಮಾಧ್ಯಮಗಳ ( ಎಲೆಕ್ಟ್ರಾನಿಕ್, ಮುದ್ರಣ ಮಾಧ್ಯಮ) ಚಿತ್ರ ವಿಮರ್ಶೆಯನ್ನು ಆಧರಿಸಿ ಪ್ರೇಕ್ಷಕರು ಚಿತ್ರ ನೋಡುವುದೋ/ಬಿಡುವುದೋ ಎಂದು ನಿರ್ಧರಿಸುತ್ತಾರೋ? ಇಲ್ಲಿ ಏಕೆ ಈ ಪ್ರಶ್ನೆಯೆಂದರೆ ಮಾಧ್ಯಮಗಳಲ್ಲಿ ಪ್ರಕಟವಾಗುವ ವಿಮರ್ಶೆಗೆ ವಿರುದ್ಧವಾಗಿ (ದಟ್ಸ್ ಕನ್ನಡ ಸೇರಿದಂತೆ) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಸೋಲು/ಗೆಲುವು ಸಾಧಿಸುತ್ತದೆ ಎನ್ನುವುದು ಎಲ್ಲರೂ ಒಪ್ಪಲೇ ಬೇಕಾದ ಓಪನ್ ಫ್ಯಾಕ್ಟ್.

    ವಿಮರ್ಶೆ ಬರೆಯುವವರು ತಮ್ಮ ಶೈಲಿಗೆ ತಕ್ಕಂತೆ ವಿಮರ್ಶೆ ಬರೆಯುತ್ತಾರೆ. ಒಪ್ಪಿಕೊಳ್ಳೊಣ...ಅವರ ಅಭಿರುಚಿಗೆ ತಕ್ಕಂತೆ ವಿಮರ್ಶೆ ಬರೆಯುವುದಾದರೆ ಮಾಧ್ಯಮಗಳ ಮೂಲಕ ಯಾಕೆ ವಿಮರ್ಶೆ ಅವರು ಬರೆಯಬೇಕು? ಕನ್ನಡ ಚಿತ್ರ ನೋಡುವವರ ಅಭಿರುಚಿ ಇವರಿಗೆ ತಿಳಿಯುವುದಿಲ್ಲವೇ? ಯಾವ ರೀತಿಯ ಚಿತ್ರಗಳನ್ನು (ರಿಮೇಕ್/ಸ್ವಮೇಕ್) ಇಲ್ಲಿಯವರೆಗೆ ಕನ್ನಡಿಗ ಒಪ್ಪಿಕೊಂಡಿದ್ದಾನೆ ಎನ್ನುವುದು ವಿಮರ್ಶೆ ಬರೆಯುವವರಿಗೆ ತಿಳಿದಿರಬೇಕಲ್ಲವೇ? ದರ್ಶನ್ ಚಿತ್ರ ಎಂದಿನಂತೆಯೇ ಲಾಂಗು, ಮಚ್ಚು, ಡೈಲಾಗ್, ಐಟಂ ಸಾಂಗ್, ಮಾಮೂಲಿ ಕಥೆ ಎಂದು ಬರೆಯುವ ವಿಮರ್ಶಕರಿಗೆ ದರ್ಶನ್ ಕನ್ನಡ ಚಿತ್ರ ನಿರ್ಮಾಪಕರ ಪಾಲಿಗೆ "ಬಾಕ್ಸ್ ಆಫೀಸ್ ಕಿಂಗ್" ಎನ್ನುವ ವಿಷಯ ತಿಳಿಯದಿರುವ ವಿಚಾರವೇನು ಅಲ್ಲ.

    ನಿರ್ಮಾಪಕರು ಮುಂದೆ ಬಂದ್ರೆ ಅಲ್ವೇನ್ರೀ ಚಿತ್ರ ನಿರ್ಮಾಣ ಗೊಳ್ಳುವುದು? ಇದಕ್ಕೆ ತಾಜಾ... ಉದಾಹರಣೆಯೆಂದರೆ ದರ್ಶನ್ ಅಭಿನಯದ ಶೌರ್ಯ. ಎರಡೇ ವಾರದಲ್ಲಿ ನಿರ್ಮಾಪಕ ಲಾಭ ಮಾಡಿಕೊಳ್ಳುತ್ತಿದ್ದಾರೆ ಎನ್ನುವುದು ಕಟುಸತ್ಯ( ಮೂರನೇ ವಾರದಲ್ಲಿ ಚಿತ್ರ ಕುಂಠುತ್ತಾ ಸಾಗುತ್ತಿದೆ). ಪಕ್ಷಾತೀತವಾಗಿ ಉತ್ತಮ ವಿಮರ್ಶೆ ಪಡೆದ "ಮತ್ತೆ ಮುಂಗಾರು" ಚಿತ್ರ ಯಾವ ಪಾಟಿ ನೆಲಕ್ಕಚ್ಚಿತು ಎನ್ನುವುದು ಕೂಡಾ ನಿಮಗೆ ತಿಳಿದಿರುವ ವಿಚಾರ (ಇದೊಂದು ಒಳ್ಳೆ ಕಥೆ ಇರುವ ಚಿತ್ರ, ಕನ್ನಡದಲ್ಲಿ ಹೊಸ ಪ್ರಯತ್ನ) ಆದರೆ ಚಿತ್ರ ಪ್ರೇಕ್ಷಕರನ್ನು ಎರಡು ಗಂಟೆಗಳ ಕಾಲ ಸೀಟ್ ನಲ್ಲಿ ಕೂರಿಸುವ ಚಿತ್ರಕಥೆ/ಸಂಭಾಷಣೆ ಹೊಂದಿದೆಯೇ? ಅಥವಾ ಇಂಥಹ ಚಿತ್ರ ಬೇರೆ ಭಾಷೆಯಲ್ಲಿ ಬಂದಿದ್ದರೆ ಕನ್ನಡಿಗರು ಚಿತ್ರ ನೋಡಲು ಮುಗಿ ಬೀಳುತ್ತಿದ್ದರೇನೋ!

    'ಪಂಚರಂಗಿ' ಚಿತ್ರಕ್ಕೆ ಕೆಲವೊಂದು ಮಾಧ್ಯಮಗಳು (ಅಂಗ್ರೇಜಿ) ಬಿಟ್ಟರೆ ಎಲ್ಲಾ ರೀತಿಯಲ್ಲಿ ಉತ್ತಮ ವಿಮರ್ಶೆ ವ್ಯಕ್ತವಾಗಿದೆ. ಚಿತ್ರದಲ್ಲಿ ಕಥೆ ಇಲ್ಲ, ಉತ್ತಮ ಸಂಭಾಷಣೆ ಇಲ್ಲವೇ? ಪ್ರೇಕ್ಷಕರನ್ನು ಎರಡು ಗಂಟೆಗಳ ಕಾಲ ಹಿಡಿದಿಟ್ಟುಕೊಳ್ಳುವುದೆಂದರೆ ಏನು ಸಾಮಾನ್ಯವಾದ ವಿಷಯವೇ? ಆ ಮಟ್ಟಿಗೆ ಭಟ್ಟರು ಯಶಸ್ವಿಯಾಗಲಿಲ್ಲವೇ? "ಭಟ್ಟರು ಕೈಕೊಟ್ಟರು" ಎಂದು ಬಂದಿರುವ ಲೇಖನ ಎಷ್ಟು ಸಮಂಜಸ?

    ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವ ಚಿತ್ರವೊಂದು (ಪಂಚರಂಗಿ) ನೋಡಿಕೊಂಡು ಹೊರಬಂದ ಚಿತ್ರರಸಿಕ ಮಂದಸ್ಮಿತನಾಗಿ ಚಿತ್ರ ಫುಲ್ ಟೈಂಪಾಸ್ ಅನ್ನುತ್ತಿದ್ದರೆ ಯೋಗರಾಜ್ ಭಟ್ಟರಿಗೆ ಅದಕ್ಕಿಂತ ಖುಷಿ ಇನ್ನೊಂದು ಬೇಕಾ? ಕಡಿಮೆ ಬಜೆಟ್ ಚಿತ್ರಗಳು, ಹೈ ಬಜೆಟ್ ಚಿತ್ರಗಳು, ಬರೀ ಕರಾವಳಿ ಲೋಕೇಷನ್ ಗಳು, ನಿದ್ದೆ ಹೊಡಿಸುವ ಸಂಭಾಷಣೆಗಳು, ಸಿನಿಮಾ ಹಾಲ್ ನಲ್ಲಿ ತುಂಬಿದ ಪ್ರದರ್ಶನಗಳು, ಮನೆಗೆ ಬಂದ ಮೇಲೆ ಮಕ್ಕಳ ಬಾಯಲ್ಲಿ ಕೂಡಾ ಚಿತ್ರದ ಸಂಭಾಷಣೆಗಳ ಮಾರ್ದನಿಗಳು...ಕನ್ನಡಕ್ಕೆ ಇರುವ ಸಣ್ಣ ಮಾರುಕಟ್ಟೆ ಬಗ್ಗೆ ತಾರತಮ್ಯ ಬೇಡ. ಕನ್ನಡ ಚಿತ್ರರಂಗ ಉಳಿಯಲಿ ಎಂಬಸದಾಶಯದೊಂದಿಗೆ.

    Tuesday, September 14, 2010, 13:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X