»   » ಲೈಫು ಇಷ್ಟೇನೇ ಪ್ರೊಡ್ಯೂಸರ್ ವಿರುದ್ಧ ಪೊಲೀಸ್ ಕೇಸ್

ಲೈಫು ಇಷ್ಟೇನೇ ಪ್ರೊಡ್ಯೂಸರ್ ವಿರುದ್ಧ ಪೊಲೀಸ್ ಕೇಸ್

Posted By:
Subscribe to Filmibeat Kannada

ನಟ ದಿಗಂತ್, ರಮ್ಯಾ ಬಾರ್ನ, ಸಿಂಧು, ಸಂಯುಕ್ತ ಬೆಳವಾಡಿ ಮುಖ್ಯಭೂಮಿಕೆಯಲ್ಲಿರುವ 'ಲೈಫು ಇಷ್ಟೇನೇ' ಚಿತ್ರದ ನಿರ್ಮಾಪಕರುಗಳ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸೆನ್ಸಾರ್ ಮಂಡಳಿ ಗಮನಕ್ಕೆ ತರದೆ ಚಿತ್ರಕ್ಕೆ ಕೆಲವು ದೃಶ್ಯಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.

ಸೆನ್ಸಾರ್ ಮಂಡಳಿ ಸೆನ್ಸಾರ್ ಮಾಡಿದ ದೃಶ್ಯಗಳನ್ನು ಮತ್ತೆ ಸೇರಿಸುವುದು ಶಿಕ್ಷಾರ್ಹ ಅಪರಾಧ. ಆದರೆ ಲೈಫು ಇಷ್ಟೇನೇ ಚಿತ್ರಕ್ಕೆ ಸೆನ್ಸಾರ್ ಮಾಡಲಾಗಿದ್ದ ದೃಶ್ಯಗಳನ್ನು ಚಿತ್ರ ಬಿಡುಗಡೆಯಾದ ಮೂರು ವಾರಗಳ ಬಳಿಕ ಪುನಃ ಸೇರಿಸಲಾಗಿತ್ತು.

ಚಿತ್ರದ ಕಾಲಾವಧಿ ಹೆಚ್ಚಾಯಿತು ಎಂಬ ಕಾರಣಕ್ಕೆ 12 ನಿಮಿಷಗಳ ದೃಶ್ಯಗಳಿಗೆ ಕತ್ತರಿ ಹಾಕಿತ್ತು. ಚಿತ್ರ ಬಿಡುಗಡೆಯಾಗಿ ಮೂರು ವಾರಗಳ ನಂತರ 12 ನಿಮಿಷಗಳ ದೃಶ್ಯಗಳನ್ನು ಮರುಜೋಡಣೆ ಮಾಡಲಾಗಿತ್ತು. ಈ ವಿಷಯ ಸೆನ್ಸಾರ್ ಮಂಡಳಿ ಗಮನಕ್ಕೆ ಬಂದಿದೆ.

ಈ ಸಂಬಂಧ ಸೆನ್ಸಾರ್ ಮಂಡಳಿಯ ಪ್ರಾದೇಶಿಕ ಅಧಿಕಾರಿ ಕೆ ನಾಗರಾಜ್ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಚಿತ್ರದ ನಿರ್ಮಾಪಕರಾದ ಸೈಯದ್ ಸಲಾಂ, ಮಂಜುನಾಥ ಗೌಡ ಹಾಗೂ ಉಪೇಂದ್ರ ಶೆಟ್ಟಿ ವಿರುದ್ಧ ದೂರು ನೀಡಿದ್ದಾರೆ. ಸಿನಿಮಾ ಫೋಟೋಗ್ರಫಿ ಕಾಯಿದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
The regional censor board officer Nagaraj K has filed a police complaint for violations of the censor board rules. In the third week 12 minutes of length have been increased and not brought to the notice of the Regional Censor Board. A case has been filed at the Upparpet Police stations on producers Syed Salam, Manjunatha Gowda and Upednra Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada