For Quick Alerts
  ALLOW NOTIFICATIONS  
  For Daily Alerts

  ಬೆಬೋ ಕರೀನಾ ಕಪೂರ್ ಹಾರ್ವರ್ಡ್ ರಿಟರ್ನ್ಡ್!

  By Srinath
  |
  <ul id="pagination-digg"><li class="previous"><a href="/gossips/20-bollywood-babes-study-circles-aid0135.html">« Previous</a>
  ಬಾಲಿವುಡ್ ಬೆಡಗಿಯರು ಎಷ್ಟೆಲ್ಲ ಓದಿದ್ದಾರೆ ಅಂತ ತಿಳಿದುಕೊಳ್ಳುವ ಯತ್ನವಾಗಿ ಬೆಬೋ ಕರೀನಾ ಕಪೂರ್, ಚಿಕ್ನಿ ಚಮೇಲಿ ಕತ್ರಿನಾ ಕೈಫ್, ಅನುಷ್ಕಾ ಶರ್ಮಾ ಮತ್ತು ಪಿಗ್ಗಿ ಛಾಪ್ಸ್ ಪ್ರಿಯಾಂಕಾ ಛೋಪ್ರಾ ಅವರ ಬೆನ್ನು ಹತ್ತಿದಾಗ...

  ಬೆಬೋ ಕರೀನಾ ಕಪೂರ್ ತನ್ನ ಕಸಿನ್ ರಣಬೀರ್ ಬಳಿಕ ಕಪೂರ್ ಕಾಂದಾನಿನಲ್ಲಿ ಕಾಲೇಜು ಮೆಟ್ಟಿಲು ತುಳಿದಾಕೆ ಇವರೊಬ್ಬರೇ. ವೆಲ್ಹಾಮ್ ಗರ್ಲ್ಸ್ ಬೋರ್ಡಿಂಗ್ ಸ್ಕೂಲ್ ವ್ಯಾಸಂಗದ ಬಳಿಕ, ಮಿಥಿಬಾಯಿ ಕಾಲೇಜಿಗೆ ಸೇರಿಕೊಂಡರು. ಅಲ್ಲಿ 2 ವರ್ಷದ ವ್ಯಾಸಂಗದ ಬಳಿಕ ಮೂರ್ನಾಲ್ಕು ತಿಂಗಳ ಕಂಪ್ಯೂಟರ್ ಕೋರ್ಸಿಗಾಗಿ ಹಾರ್ವರ್ಡ್ ಯೂನಿವರ್ಸಿಟಿಗೆ ಸೇರಿಕೊಂಡರು. ಅಲ್ಲಿಂದ ಮುಂದ ಕಾನೂನು ಕಲಿಕೆಗೆ ಸೇರಿಕೊಂಡರಾದರೂ ಶಿಕ್ಷಣ ಬೋರಿಂಗ್ ಎಂದು ಆಕ್ಟಿಂಗ್ ಮಾಡಿದರು. ಅಂದಿನಿಂದ ಆಕ್ಟಿಂಗ್ ಅನ್ನೇ ಮಾಡುತ್ತಾ ಬಂದಿದ್ದಾರೆ.

  ಚಿಕ್ನಿ ಚಮೇಲಿ ಕತ್ರಿನಾ ಕೈಫ್ ತನ್ನ ಸೊನ್ನೆ ಸೊಂಟ ಬಳಕುತ್ತಾ ಪಡ್ಡೆಗಳನ್ನು ತುದಿಗಾಲಲ್ಲಿ ನಿಲ್ಲಿಸುವಂತಾಗುವುದಕ್ಕೂ ಮುನ್ನ ಕತ್ರಿನಾ ಶಿಕ್ಷಣದಲ್ಲಿಯೂ ಸೊನ್ನೆಯನ್ನೇ ಗಳಿಸುತ್ತಿದ್ದರು. ಅನೇಕ ದೇಶ-ವಿದೇಶಗಳನ್ನು ಸುತ್ತಿದ್ದರೂ ಒಮ್ಮೆಯೂ ಕೈಯಲ್ಲಿ ಪುಸ್ತಕ ಹಿಡಿಯಲಿಲ್ಲ. ಇಂತಿಪ್ಪ ಕತ್ರಿನಾ ಎಂದಿಗೂ ಕಾಲೇಜು ಮೆಟ್ಟಿಲು ತುಳಿಯಲಿಲ್ಲ.

  ಇನ್ನೂ ಪದವೀಧರೆ ಎನಿಸಿಕೊಳ್ಳದ ಅನುಷ್ಕಾ ಶರ್ಮಾ... ಆರ್ಮಿ ಸ್ಕೂಲಿನಲ್ಲಿ ಓದಿದ ನಂತರ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ಬಿಎ ಪದವಿ ವ್ಯಾಸಂಗಕ್ಕಾಗಿ ಮೊದಲ ಹೆಜ್ಜೆ ಎತ್ತಿಟ್ಟರಾದರೂ ಅಲ್ಲೇ ನಿಂತುಬಿಟ್ಟರು. ಇನ್ನೂ ಅನುಷ್ಕಾ ಡಿಗ್ರಿ ಮಾಡಿಲ್ಲ.

  ಪ್ರಿಯಾಂಕಾ ಛೋಪ್ರಾ ಪಿಗ್ಗಿ ಛಾಪ್ಸ್ ಅಂತ ಏಕೆ ಕರೆಯುತ್ತಾರೋ ಅಂತ ಹಾಗೆ ಕರೆಯುವವರೇ ಹೇಳಬೇಕು. ಆದರೂ ಈ ಪಿಗ್ಗಿ ಛಾಪ್ಸ್(!) ಲಖ್ನೋದಲ್ಲಿ ಗರ್ಲ್ಸ್ ಸ್ಕೂಲಿನಲ್ಲಿ ಓದವ್ಳೆ. ಅಲ್ಲಿಂದ ಮಧ್ಯಂತರದಲ್ಲಿ ಎದ್ದುಹೋದ ಪಿಗ್ಗಿ ಛಾಪ್ಸ್ ಸೀದಾ ನ್ಯೂಟನ್ ಹೈಸ್ಕೂಲು ಮತ್ತು ಜಾನ್ ಎಫ್ ಕೆನಡಿ ಹೈಸ್ಕೂಲಿನಲ್ಲೂ ವ್ಯಾಸಂಗ ಮಾಡಿದಳು. ಅಲ್ಲಿಂದ ಮುಂದಕ್ಕೆ ಬರೇಲಿ ಪಿಸಿ ಮುಂಬೈನಲ್ಲಿ ಜೈಹಿಂದ್ ಕಾಲೇಜಿನಲ್ಲೂ ಕಾಣಿಸಿಕೊಂಡಳು. ಆದರೆ ಅಲ್ಲಿದ್ದಾಗಲೇ ಮಿಸ್ ವರ್ಲ್ಡ್ ಪಟ್ಟ ಗಿಟ್ಟಿಸುತ್ತಿದ್ದಂತೆ ಕಾಲೇಜಿಗೆ ಬೈ ಬೈ ಹೇಳಿ ತಾನಿನ್ನು ಪದವೀಧರೆಯಲ್ಲ ಅಂಥ ಜಂಭದಿಂದ ಹೇಳಿಕೊಳ್ಳುತ್ತಾಳೆ.

  <ul id="pagination-digg"><li class="previous"><a href="/gossips/20-bollywood-babes-study-circles-aid0135.html">« Previous</a>
  English summary
  Besides cousin Ranbir, Bebo is the only actor in Kapoor clan who attended college. At Harvard University Bebo went for Law, but soon she realised her inclination towards acting. So she said good-bye to books for acting and preferred an undergraduate status instead.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X