For Quick Alerts
  ALLOW NOTIFICATIONS  
  For Daily Alerts

  ಗುರುವಿನ ಡೈರೆಕ್ಟರ್ ಸ್ಪೆಷಲ್ :ಕೋಮಲ್ ಔಟ್

  By *ಮಹೇಶ್ ಮಲ್ನಾಡ್
  |

  ಮಠ, ಎದ್ದೇಳು ಮಂಜುನಾಥ ಚಿತ್ರ ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ಹೊಸ ಚಿತ್ರ 'ಡೈರೆಕ್ಟರ್ ಸ್ಪೆಷಲ್' ನಿಂದ ನಾಯಕ ನಟ ಕೋಮಲ್ ಹೊರನಡೆದಿದ್ದಾರೆ. ಚಿತ್ರದ ಕಥೆಯನ್ನು ಪೂರ್ಣವಾಗಿ ಕೇಳಿ, ಅದರ ಗಾತ್ರ, ವಿಸ್ತೀರ್ಣ, ಆಳವನ್ನು ಅರ್ಥೈಸಿಕೊಂಡ ಮೇಲೆ ಇದು ನನ್ನಿಂದ ಸಾಧ್ಯವಿಲ್ಲ. ಈ ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಲಾರೆ ಎಂದು ಅನ್ನಿಸಿತು ಹಾಗಾಗಿ ನಾನು ಈ ಚಿತ್ರದಿಂದ ಹೊರಗುಳಿಯುತ್ತಿದ್ದೇನೆ ಎಂದು ಕೋಮಲ್ ಸುದ್ದಿಗಾರರಿಗೆ ತಿಳಿಸಿದರು.

  ಹಾಸ್ಯ ಪಾತ್ರ ನನಗೆ ಹೊಂದುತ್ತದೆ. ಆದರೆ, ನಮ್ಮವರನ್ನೇ (ನಿರ್ದೇಶಕರು, ಸಿನಿಮಾ ಮಂದಿ) ಅಪಹಾಸ್ಯ ಮಾಡಿ ಅರಗಿಸಿಕೊಳ್ಳುವ ಕೆಪಾಸಿಟಿ ನನಗಿನ್ನು ಬಂದಿಲ್ಲಪ್ಪ ಎಂದು ಕೋಮಲ್ ಮೆಲುದನಿಯಲ್ಲಿ ಪಕ್ಕದವರತ್ತ ಹೇಳಿದ್ದು, ನಮ್ಮ ವರದಿಗಾರರ ಕಿವಿಗೂ ಬಿದ್ದಿದೆ. ಚಿತ್ರಕ್ಕಾಗಿ ಪಡೆದ ಅಡ್ವಾನ್ ಹಣವನ್ನು ಹಿಂದಿರುಗಿಸುತ್ತಿದ್ದೇನೆ. ಈ ಬಗ್ಗೆ ನಿರ್ಮಾಪಕ ಸುರೇಶ್ ಅವರೊಡನೆ ಮಾತನಾಡಿದ್ದೇನೆ. ಅರೆ ಮನಸ್ಸಿನಿಂದ, ಕಟ್ಟುಪಾಡಿಗೆ ಬಿದ್ದು ಚಿತ್ರವನ್ನು ಮಾಡಿದರೆ ಚಿತ್ರದ ಗುಣಮಟ್ಟ ಹಾಳಾಗುತ್ತದೆ. ನಿರ್ದೇಶಕ ಗುರು ಅವರ ಕನಸಿನ ಪಾತ್ರಕ್ಕೂ ಧಕ್ಕೆ ಉಂಟಾಗುತ್ತದೆ.

  'ನನ್ನ ಕೈಲಿ ಆ ರೋಲ್ ಮಾಡೋಕೆ ಆಗೋಲ್ಲ'. ಈಗ ಓಟದ ಸ್ಪರ್ಧೆ ಇದೆ ಅಂದುಕೊಳ್ಳಿ. ಆ ಸ್ಪರ್ಧೆಯಲ್ಲಿ ಗೆಲ್ಲೋ ವಿಶ್ವ್ವಾಸ ಇದ್ದರೆ ಮಾತ್ರ ನಾನು ಪಾಲ್ಗೊಳ್ಳುತ್ತೀನಿ. ಇಲ್ಲಾಂದ್ರೆ ಇಲ್ಲ ಅಷ್ಟೆ. ಚಿತ್ರದಿಂದ ಹೊರಗುಳಿಯುತ್ತಿರುವುದು ನನ್ನ ವೈಯಕ್ತಿಕ ನಿರ್ಧಾರ. 'ಅಣ್ಣ ಜಗ್ಗೇಶ್ ಅಲ್ಲ ಅವರಪ್ಪ ಹೇಳಿದ್ರೂ ನಾ ನಟಿಸಲಾರೆ' ಎಂದು ಪಕ್ಕಾ ಫಿಲ್ಮಿ ಡೈಲಾಂಗ್ ಹೊಡೆದರು ಕೋಮಲ್.

  ಗುರುಪ್ರಸಾದ್ ಪ್ರತಿಕ್ರಿಯೆ: ನಾನು ಕಥೆ ಬದ್ಧ, ಜನಕ್ಕೆ ಏನು ಬೇಕೊ ಅದನ್ನೇ ಕೊಡ್ತೀನಿ. ಯಾರೊಬ್ಬರ ನಿರ್ಗಮನದಿಂದ ನನ್ನ ಆಶಯ ಬದಲಾಗದು. ನಿರ್ದೇಶಕರ ಸಂಘದವರು ಯಾರೋ ಕೋಮಲ್ ಕಿವಿಯೂದಿದ್ದಾರೆ ಎಂಬ ಸುದ್ದಿ ಇದೆಯಲ್ಲಾ ಎಂದಿದ್ದಕೆ ಉತ್ತರಿಸಿದ ಗುರು, ಕನ್ನಡ ಪ್ರೇಕ್ಷಕರಿಗೆ ಹೊಸತನವನ್ನು, ಹೊಸಪ್ರತಿಭೆಯನ್ನು ನೀಡಬೇಕೆಂಬುದು ನನ್ನ ಉದ್ದೇಶ. ನಿರ್ದೇಶಕರ ಸಂಘದಿಂದ ಏನಾದ್ರೂ ಕಿರಿಕಿರಿ ಹೆಚ್ಚಾದರೆ, ಹೊಟ್ಟೆ ಪಾಡಿಗಾಗಿ ಪರಭಾಷೆ ಚಿತ್ರಗಳನ್ನು ಮಾಡೋಕೆ ರೆಡಿ ಎಂದರು.

  ಇತ್ತೀಚೆಗೆ ಜಗ್ಗೇಶ್ ಜಟಾಪಟಿ ಆಗಿ ಅವರ ಗುರು ಸಂಘ ತೊರೆದ ನಂತರ, ಅವರ ಸೋದರ ಕೋಮಲ್ ಕೂಡ ಇನ್ನೊಂದು ರೀತಿ ಗುರು ಗ್ಯಾಂಗ್ ಬಿಡುತ್ತಿರುವುದು ಕನ್ನಡದ ಪಾಲಿಗೆ ದುರ್ದೈವ ಎನ್ನಬಹುದು. ಸರ್ ಎಂ. ವಿಶ್ವೇಶ್ವರಯ್ಯ ಕುರಿತ ಸಾಕ್ಷ್ಯಚಿತ್ರ ಪೂರೈಸಿರುವ ಗುರುವಿಗೆ ಕನ್ನಡದಲ್ಲಿ ಕೋಟಿ ರು ವೆಚ್ಚದಲ್ಲಿ ಅನಿಮೇಷನ್ ಚಿತ್ರ ಸೇರಿದಂತೆ ಕೈತುಂಬಾ ಕೆಲಸವಂತೂ ಇದೆ. ಆದರೆ, "ಗುರುವಿನ ಗೆಳೆಯನಾಗುವ ತನಕ ದೊರೆಯದೆನ್ನ ಮುಕುತಿ" ಎನ್ನುವವರಿಲ್ಲ!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X