»   » ಕಿಚ್ಚ ಸುದೀಪ್ ಗೆ 'ಕಿಕ್' ತಂದ ತಲೆನೋವು

ಕಿಚ್ಚ ಸುದೀಪ್ ಗೆ 'ಕಿಕ್' ತಂದ ತಲೆನೋವು

Posted By:
Subscribe to Filmibeat Kannada

ಕಿಚ್ಚ ಸುದೀಪ್ ತುಂಬ ನೊಂದುಕೊಂಡಿದ್ದಾರಂತೆ. ಕಾರಣ ಏನು ಅಂತ ಹುಡುಕಿದರೆ ಇದೆಲ್ಲಾ 'ಕಿಕ್'ನಿಂದ ಆದ ಕಿರಿಕ್ ಅನಿಸುತ್ತದೆ. ತೆಲುಗಿನ ಯಶಸ್ವಿ ಚಿತ್ರ 'ಕಿಕ್'ನ್ನು ಕನ್ನಡಕ್ಕೆ ರೀಮೇಕ್ ಮಾಡಲಿರುವ ವಿಚಾರ ಗೊತ್ತು ತಾನೆ. ಇದೀಗ ನಿರ್ಮಾಪಕ ಮತ್ತು ನಿರ್ದೇಶಕರ ಜಗಳದಲ್ಲಿ 'ಕಿಕ್' ಮೂಲೆಗುಂಪಾಗಿದೆ. ಈ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಲು ಸುದೀಪ್ ಒಪ್ಪಿದ್ದರು.

ನಿರ್ಮಾಪಕ ಎನ್ ಕುಮಾರ್ ಮತ್ತು ನಿರ್ದೇಶಕ ಪಿ ಎನ್ ಸತ್ಯ ನಡುವಿನ ಭಿನ್ನಾಭಿಪ್ರಾಯಗಳು ಫಲ ಕಾಣದೆ 'ಕಿಕ್'ಗೆ ಎಳ್ಳುನೀರು ಬಿಟ್ಟಿದ್ದಾರೆ ಎನ್ನುತ್ತವೆ ಮೂಲಗಳು. ಹಾಗಾಗಿ 'ಕಿಕ್' ನ ಆನಂದವನ್ನು ಸುದೀಪ್ ಜಸ್ಟ್ ಮಿಸ್ ಮಾಡಿಕೊಂಡಿದ್ದಾರಂತೆ.

ಚಿತ್ರೀಕರಣವನ್ನು ನಿರ್ದೇಶಕರು ಅನಾವಶ್ಯಕವಾಗಿ ಮುಂದೂಡುತ್ತಿದ್ದಾರೆ. ಜನವರಿಯಿಂದ ಇದುವರೆಗೂ 30 ಚಿತ್ರಗಳು ಬಾಕ್ಸಾಫೀಸ್ ಗೆ ಬಂದು ಬಿದ್ದಿವೆ. ಹೆಚ್ಚಿಗೆ ಬಂಡವಾಳ ಹೂಡಿ ರಿಸ್ಕ್ ತೆಗೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ ಎಂಬುದು ನಿರ್ಮಾಪಕರು ಕೊಡುವ ವಿವರಣೆ.

ಚಿತ್ರಕ್ಕಾಗಿ ನಾಲ್ಕು ತಿಂಗಳಿಂದ ಕೆಲಸ ಮಾಡಿದ್ದೇನೆ. ನನಗೆ ಕೊಡಬೇಕಾದ ಸಂಭಾವನೆ ಇನ್ನೂ ಕೊಟ್ಟಿಲ್ಲ. ಹಾಗಾಗಿ ಚಿತ್ರೀಕರಣವನ್ನು ಮುಂದೂಡಿದ್ದೇನೆ ಎಂಬುದು ನಿರ್ದೇಶಕರ ಉತ್ತರ. ಕಡೆಗೆ ಇಬ್ಬರ ಅಭಿಪ್ರಾಯಗಳು ಒಂದು ಹಂತಕ್ಕೆ ಬರದೆ 'ಕಿಕ್' ಚಿತ್ರ ಹಳ್ಳ ಹಿಡಿದಿದೆ. ಇದೀಗ ನಿರ್ಮಾಪಕ ಕುಮಾರ್ ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಆದರೆ ಹೊಸ ನಿರ್ದೇಶಕರು ಯಾರು ಎಂಬುದು ಸದ್ಯಕ್ಕೆ ಬಗೆಹರಿಯುವ ತರಹ ಕಾಣುತ್ತಿಲ್ಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada