»   » ಮದುವೆಯಾದಾಗ ರಾಧಿಕ ಮೈನರ್‌!

ಮದುವೆಯಾದಾಗ ರಾಧಿಕ ಮೈನರ್‌!

Posted By: Super
Subscribe to Filmibeat Kannada

ರಾಧಿಕ ಮದುವೆ ಬಲವಂತದಿಂದ ಆದದ್ದು. ಆಗ ಅವಳು ಅಪ್ರಾಪ್ತ ವಯಸ್ಕಳಾಗಿದ್ದಳು ಎಂದು ಆಕೆಯ ಅಪ್ಪ ದೇವರಾಜ್‌ ಶೆಟ್ಟಿ ಹೇಳುವ ಮೂಲಕ ರಾಧಿಕ ಪಾಣಿಗ್ರಹಣ ಪ್ರಸಂಗ ಹೊಸ ತಿರುವು ಪಡೆದುಕೊಂಡಿದೆ.

ಮಂಗಳೂರಲ್ಲಿ ರಾಧಿಕ ಮನೆ ಎದುರಿಗೇ ಇದ್ದವ ರತನ್‌ ಕುಮಾರ್‌. ಈತನ ತಾಯಿ ಪ್ರೇಮ. ರತನ್‌ ಬಗ್ಗೆ ಸುತ್ತಮುತ್ತಲ ಜನರಿಗೆ ಅಂಥಾ ಒಳ್ಳೆ ಅಭಿಪ್ರಾಯವಿಲ್ಲ. ದುಶ್ಚಟಗಳ ದಾಸನಾದ ರತನ್‌, ನಮ್ಮನ್ನೂ ಹೆದರಿಸಿ ರಾಧಿಕಾಳನ್ನು ಬಲವಂತದಿಂದ ಮದುವೆಯಾದ. ಆಗ ಆಕೆಯ ವಯಸ್ಸು ಹದಿನಾಲ್ಕು ಎನ್ನುತ್ತಿದ್ದಾರೆ ದೇವರಾಜ್‌ ಶೆಟ್ಟಿ. ಸ್ಯಾಂಡಲ್‌ವುಡ್‌ ಓಣಿಗಳ ಪ್ರತಿಧ್ವನಿ ಹೇಳುವಂತೆ ರತನ್‌ ವರ್ತನೆಯಿಂದ ರೋಸಿ ಹೋಗಿರುವ ರಾಧಿಕ ಆತನಿಗೆ ಡೈವೋರ್ಸ್‌ ಕೊಡಲು ವಕೀಲರನ್ನು ಕಂಡಿದ್ದಾರೆ.

ರತನ್‌ ಮೊರೆಯ ಕಾರಣ ಮಂಗಳೂರು ಕೋರ್ಟಿನಿಂದ ಹೊರಟಿದ್ದ ರಾಧಿಕ ಸರ್ಚ್‌ ವಾರೆಂಟ್‌ ಈಗ ಖುಲಾಸೆ. ಬದಲಿಗೆ ರತನ್‌ ಕೈಗೇ ಹೊಸ ವಕೀಲಿ ನೋಟೀಸ್‌ ಬಂದಿದೆ. 'ರಾಧಿಕಾಳನ್ನು ಕೊಲ್ಲಲು ನೀನು ಬೆದರಿಕೆ ಹಾಕಿದ್ದೆ" ಎಂಬುದು ನೋಟೀಸ್‌ನ ಸಾರ. ಅಂದರೆ, ಡೈವೋರ್ಸ್‌ಗೆ ಮೊದಲ ಸೋಪಾನ.

ಅಂದಹಾಗೆ, ಸ್ವಿಮ್‌ಸೂಟಿನ ಸ್ಟಿಲ್‌ಗಳಿಂದಲೇ ಒಂದೂ ಸಿನಿಮಾ ತೆರೆಕಾಣುವ ಮುನ್ನವೇ ಸಂಭಾವನೆಯನ್ನು ಮುಪ್ಪಟ್ಟು ಹೆಚ್ಚಿಸಿಕೊಂಡಿರುವ ರಾಧಿಕಾ ಈಗ ಷೋಡಶಿ !ವಾರ್ತಾ ಸಂಚಯ

Read more about: kannada karnataka cinema sandalwood
English summary
Radhika marriage issue gets a twist : She was minor at the time of marriage

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada