»   » ಪೂಜಾಗಾಂಧಿಗೆ ಚುಂಬನ ನಿರಾಕರಿಸಿದ ರಘು

ಪೂಜಾಗಾಂಧಿಗೆ ಚುಂಬನ ನಿರಾಕರಿಸಿದ ರಘು

Posted By:
Subscribe to Filmibeat Kannada

ಶಿವಗಣಪತಿ ನಿರ್ದೇಶಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ರಘು ಮುಖರ್ಜಿ ತನ್ನ ಸಹನಟಿ ಪೂಜಾಗಾಂಧಿಗೆ ಚುಂಬನ ನೀಡಲು ನಿರಾಕರಿಸಿದ್ದಾರೆ. ಚಿತ್ರದಲ್ಲಿ ತುಟಿಗೆ ತುಟಿ ಚುಂಬಿಸುವ ಸಖತ್ ಹಾಟ್ ದೃಶ್ಯವಿದೆಯಂತೆ. ಈ ಸನ್ನಿವೇಶವನ್ನು ಒಲ್ಲೆ ಎಂದಿದ್ದಾರೆ ರಘು ಮುಖರ್ಜಿ.

ಸಲ್ಮಾನ್ ಖಾನ್ ತರಹ ದೇಹ ಪ್ರದರ್ಶಿಸುವುದು ಚುಂಬನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದು ರಘು ಮುಖರ್ಜಿಗೆ ಇಷ್ಟವಿಲ್ಲವಂತೆ. ಹಾಗಾಗಿ ಚಿತ್ರಕ್ಕೆ ಸಹಿ ಹಾಕುವ ಮುನ್ನವೇ ಚುಂಬನ, ಬಟ್ಟೆ ಕಳಚುವ ಸನ್ನಿವೇಶ, ದೃಶ್ಯಗಳಲ್ಲಿ ನಟಿಸುವುದಿಲ್ಲ ಎಂದು ನಿರ್ದೇಶಕರಿಗೆ ಸ್ಪಷ್ಟವಾಗಿ ತಿಳಿಸಿರುತ್ತೇನೆ ಎನ್ನುತ್ತಾರೆ ರಘು ಮುಖರ್ಜಿ.

ಚುಂಬನ, ದೇಹ ಪ್ರದರ್ಶಿಸುವುದು ತೀರಾ ಖಾಸಗಿ ವಿಷಯ. ಇದೆಲ್ಲಾ ಬೆಡ್ ರೂಂಗೆ ಸಂಬಂಧಿಸಿದ್ದು ಸಾರ್ವಜನಿಕರ ತೋರ್ಪಡಿಕೆಗಾಗಿ ಅಲ್ಲ ಎನ್ನುತ್ತಾರೆ ಸಂಸಾರಸ್ಥ ರಘು. ನಿರ್ದೇಶಕ ಶಿವಗಣಪತಿಗೂ ಈ ಎಲ್ಲಾ ವಿಷಯಗಳನ್ನ್ನು ಮನದಟ್ಟು ಮಾಡಿದ್ದರಂತೆ. ಆದರೂಅವರು ಯಾವುದಕ್ಕೂ ಇನ್ನೊಮ್ಮೆ ಟ್ರೈ ಮಾಡೋಣ ಎಂದರಂತೆ. ಆದರೆ ರಘು ಮುಖರ್ಜಿ ನಯವಾಗಿ ಇದನ್ನು ತಿರಸ್ಕರಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada