»   » ಎಸ್ಪಿಬಿ ಮನೆ ಮುಂದೆ ಧರಣಿ ಕೂರಲಿರುವ ನಟಿ ಸೋನಾ

ಎಸ್ಪಿಬಿ ಮನೆ ಮುಂದೆ ಧರಣಿ ಕೂರಲಿರುವ ನಟಿ ಸೋನಾ

Posted By:
Subscribe to Filmibeat Kannada

ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್ಪಿಬಿ ಚರಣ್ ತಮ್ಮ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿರುವ ನಟಿ ಸೋನಾ ಹೈಡೆನ್ ಸಾರ್ವಜನಿಕ ಕ್ಷಮೆಗೆ ಆಗ್ರಹಿಸಿದ್ದರು. ಈಗ ಚರಣ್ ಕಡೆಯಿಂದ ಸೂಕ್ತ ಉತ್ತರ ಬರದೆ ಇರುವ ಕಾರಣ ಅವರ ಮನೆ ಮುಂದೆ ಧರಣಿ ಕೂರುವುದಾಗಿ ಬೆದರಿಕೆ ಹಾಕಿದ್ದಾರೆ.

ಎಸ್ಪಿಬಿ ಚರಣ್ ಮೇಲೆ ಅತ್ಯಾಚಾರ ಆರೋಪ ಹೊರಿಸಿದ ಬಳಿಕ ಸಾರ್ವಜನಿಕವಾಗಿ ತಮ್ಮ ಕ್ಷಮೆ ಕೋರಬೇಕು ಎಂದು ಸೋನಾ ಡಿಮ್ಯಾಂಡ್ ಮಾಡಿದ್ದರು. ಇದಕ್ಕಾಗಿ ಹತ್ತು ದಿನಗಳ ಗಡುವು ನೀಡಿದ್ದರು. ಈಗ ಚರಣ್ ಕಡೆಯಿಂದ ನಿರೀಕ್ಷಿತ ಉತ್ತರ ಬಾರದೆ ಇರುವ ಕಾರಣ ಆಕೆ ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.

ಮಹಿಳಾ ಸಂಘಟನೆಗಳ ನೆರವು ಪಡೆದು ಧರಣಿ ನಡೆಸುವುದಾಗಿ ಸೋನಾ ತಿಳಿಸಿದ್ದು, ಎಸ್ಪಿಬಿ ಚರಣ್ ನಿವಾಸದ ಮುಂದಷ್ಟೇ ಅಲ್ಲ, ತಮ್ಮ ವಿರುದ್ಧ ಇಲ್ಲಸಲ್ಲದ ಸುದ್ದಿಗಳನ್ನು ಬರೆದ ಜನಪ್ರಿಯ ತಮಿಳು ಪತ್ರಿಕೆಯೊಂದರ ಕಚೇರಿ ಮುಂದೆಯೂ ಧರಣಿ ನಡೆಸುವುದಾಗಿ ಹೇಳಿದ್ದಾರೆ.

ಚರಣ್ ವಿರುದ್ಧ ಸೋನಾ ರೇಪ್ ಕೇಸ್ ಹಾಕಿದ್ದ ಕಾರಣ, ಪೊಲೀಸರನು ಆತನನ್ನು ಬಂಧಿಸುವ ಸಾಧ್ಯತೆಗಳಿದ್ದವು. ಈ ಹಿನ್ನೆಲೆಯಲ್ಲಿ ಚರಣ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಮದ್ರಾಸ್ ಹೈಕೋರ್ಟ್ ಚರಣ್‌ಗೆ ಮಧ್ಯಂತರ ಜಾಮೀನು ಜಾರಿ ಮಾಡಿದೆ. (ಏಜೆನ್ಸೀಸ್)

English summary
Sona Heiden, who had reportedly agreed for a written apology to public one with SPB Charan, seems to have not received the same from the latter. Hence, she has decided to take her protest to the next level by staging a dharna outside SPB Charan's residence.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada