For Quick Alerts
  ALLOW NOTIFICATIONS  
  For Daily Alerts

  ಪ್ರೇಮ್ ಹುಡುಗರಿಂದ ದಶಾವರ ಚಂದ್ರುಗೆ ಗೂಸಾ

  By Rajendra
  |

  ಈ ರೀತಿಯ ಸುದ್ದಿಯೊಂದು ಗಾಂಧಿನಗರದ ಸುಭೇಧಾರ್‌ಛತ್ರಂ ರಸ್ತೆಯಿಂದ ಮೆಜೆಸ್ಟಿಕ್ ಸುತ್ತಮುತ್ತ ಕಳೆದೆರಡು ವಾರಗಳಿಂದ ಹಬ್ಬಿದೆ. ಜೋಗಿ ಪ್ರೇಮ್ ಅವರ ಖಾಸಾ ಶಿಷ್ಯನಾದ ದಶಾವರ ಚಂದ್ರುಗೆ ಧರ್ಮದೇಟು ಬಿದ್ದಿದೆ ಎಂಬ ಸುದ್ದಿ ಕೇಳಿ ಬಂದಿದೆ.

  ಪ್ರೇಮ್ ಕೈಗೆತ್ತಿಕೊಂಡಿರುವ ಹೊಸ ಚಿತ್ರ 'ಅಡ್ಡಾ' ಎಂಬ ಶೀರ್ಷಿಕೆಯೇ ಇದಕ್ಕೆ ಕಾರಣ ಎನ್ನಲಾಗಿದೆ. ಗುರುಶಿಷ್ಯರ ಸಂಬಂಧ ಹದಗೆಟ್ಟಿದ್ದು ಇಬ್ಬರ ನಡುವಿನ ಜಟಾಪಟಿ ಮೂಲಕ ಈಗ ಬೀದಿಗೆ ಬಿದ್ದಿದೆ ಎಂಬ ಮಾತುಗಳು ರೆಕ್ಕೆಪುಕ್ಕ ಸಮೇತ ಹಾರಾಡುತ್ತಿವೆ.

  ಅಡ್ಡಾ ಶೀರ್ಷಿಕೆಯನ್ನು ಪ್ರೇಮ್‌ ಜೊತೆ ಚರ್ಚಿಸದೆ ಸಾ.ರಾ.ಗೋವಿಂದುಗೆ ದಶಾವರ ಚಂದ್ರು ನೀಡಿರುವುದು ಇಷ್ಟೆಲ್ಲಾ ಬೆಳವಣಿಗೆಗಳಿಗೆ ಕಾರಣ ಎನ್ನಲಾಗಿದೆ. ಈ ಸಂಬಂಧ ಪ್ರೇಮ್ ಹಾಗೂ ಚಂದ್ರು ನಡುವೆ ಮಾತಿನ ಚಕಮಕಿ ನಡೆದಿದೆ. ಕೋಪಗೊಂಡ ಪ್ರೇಮ್ ತನ್ನ ಹುಡುಗರಿಂದ ಚಂದ್ರುಗೆ ಗೂಸಾ ಕೊಡಿಸಿದ್ದಾನೆ ಎಂಬ ಗುಸುಗುಸು ಸುದ್ದಿ ಇದೆ.

  ಇನ್ನೊಂದು ಮೂಲಗಳ ಪ್ರಕಾರ, ಇದು ಚಂದ್ರು ಫ್ಯಾಮಿಲಿ ಗಲಾಟೆ. ಚಂದ್ರು ಬಾಮೈದುನನ ಕಡೆಯವರು ಹೊಡೆಸಿದ್ದಾರಂತೆ. ಪ್ರೇಮ್‌ ಹಾಗೂ ಚಂದ್ರು ನಡುವೆ ಅಂತಹ ಸೀರಿಯಸ್ ಏನೂ ಆಗಿಲ್ಲ ಎನ್ನುವರು ಇದ್ದಾರೆ. ಒಟ್ಟಿನಲ್ಲಿ ಗುರು ಶಿಷ್ಯರ ಜಗಳ ಮೂರನೆಯವರಿಗೆ ಲಾಭವಾಗದಿದ್ದರೆ ಅಷ್ಟೇ ಸಾಕು ಎನ್ನುತ್ತಿದೆ ಗಾಂಧಿನಗರ. (ಏಜೆನ್ಸೀಸ್)

  English summary
  Director Prem's Adda title controversy takes new turn. Dasavasa Chandru, a disciple Prem slapped by unknown persons. Sources says the persons are from the director's side.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X