»   » ಜಾತಕದ ಪ್ರಕಾರ ಮಲ್ಲು ಬೆಡಗಿ ಭಾವನಾ ಮದುವೆ

ಜಾತಕದ ಪ್ರಕಾರ ಮಲ್ಲು ಬೆಡಗಿ ಭಾವನಾ ಮದುವೆ

Posted By: ಉದಯರವಿ
Subscribe to Filmibeat Kannada

ಲವ್ ಮ್ಯಾರೇಜ್, ಅಂತರ್ಜಾತೀಯ ಅಥವಾ ಅಂತರ್ಧಮೀಯ ಮದುವೆಯಾದರೆ ಜಾತಕ, ಜನ್ಮಕುಂಡಲಿ ತಲೆನೋವೇ ಇರಲ್ಲ. ಅದೇ ಗುರುಹಿರಿಯರು ನಿಶ್ಚಯಿಸಿದ ಮದುವೆಯಾದರೆ ಜಾತಕಗಳನ್ನು ಜೋತಿಷಿಗಳ ಮೂಲಕ ಜೋಡಿಸಿದ ಮೇಲೇ ಮದುವೆ.

ಈ ರೀತಿ ಜಾತಕ, ಜನ್ಮಕುಂಡಲಿಯನ್ನು ಕೈಯಲ್ಲಿ ಹಿಡಿದುಕೊಂಡು ಓಡಾಡುತ್ತಿರುವವರಿಗೇನೂ ಬರವಿಲ್ಲ. ಸ್ಯಾಂಡಲ್ ವುಡ್ ಚಿತ್ರಗಳಲ್ಲಿ ಅಭಿನಯಿಸಿರುವ ಮಲ್ಲು ಬೆಡಗಿ ಭಾವನಾ ಸಹ ಈಗ ಕೈಯಲ್ಲಿ ಜಾತಕ ಹಿಡಿದು ಓಡಾಡುತ್ತಿದ್ದಾರಂತೆ. [ನಟ ಕಿಚ್ಚ ಸುದೀಪ್ ಕೈಗೆ ಕೋಳ ಯಾಕೆ ಬಿತ್ತೋ?]

Actress Bhavana

ತಮ್ಮ ಜಾತಕಕ್ಕೆ ಸರಿಹೊಂದುವ ಗಂಡಿಗಾಗಿ ಅವರು ಹುಡುಕುತ್ತಿದ್ದಾರೆ ಎನ್ನುತ್ತವೆ ಮೂಲಗಳು. ಈಗಾಗಲೆ ಅವರು ತಮ್ಮ ಮದುವೆ ಬಗ್ಗೆಯೂ ಹೇಳಿಕೊಂಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಾವು ಕೈಹಿಡಿಯಲಿರುವ ಹುಡುಗ ಯಾರು ಎಂದು ಕೇಳಿದ್ದಕ್ಕೆ, "ಮದುವೆಯಾಗುವುದಕ್ಕೆ ಒಂದು ತಿಂಗಳ ಮುಂಚೆ ತಿಳಿಸುತ್ತೇನೆ" ಎಂದು ಜಾಣ ಉತ್ತರ ನೀಡಿದ್ದರು.

ಮಲಯಾಳಂ ನಟ ಅನೂಪ್ ಮೆನನ್ ಹಾಗೂ ಭಾವನಾ ಅವರ ನಡುವೆ ಭಾವನಾತ್ಮಕ ಸಂಬಂಧ ಇದೆ ಎಂಬ ಮಾತುಗಳು ಮಲಯಾಳಂ ಚಿತ್ರರಂಗದಲ್ಲಿ ಕೇಳಿಬರುತ್ತಿವೆ. ಇವರಿಬ್ಬರೂ ಒಟ್ಟಿಗೆ ಕೆಲವು ಚಿತ್ರಗಳಲ್ಲಿ ಅಭಿನಯಿಸಿಯೂ ಇದ್ದಾರೆ.

ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೇಳಿಬಂದಾಗ ಭಾವನಾ, ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್ ಎಂದಿದ್ದರು. ಇನ್ನೊಂದು ಕಡೆ ಅನೂಪ್ ಮೆನನ್ ಮದುವೆಗೆ ಹೆಣ್ಣು ನೋಡುತ್ತಿದ್ದೇನೆ. ಅವರು ಚಿತ್ರರಂಗದಕ್ಕೆ ಸೇರಿದವರಲ್ಲ ಎಂದು ಹೇಳಿ ಗಾಸಿಪ್ ಸುದ್ದಿಗೆ ಬ್ರೇಕ್ ಹಾಕಿದ್ದರು.

Read in English: Who Is Bhavana's Fiance?
English summary
Bhavana, the bubbly actress of Mollywood, is all set to tie the knot by 2015. The actress says that she is a strong believer of astrology; and is waiting for the right time according to her horoscope, to get married.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada