For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ದೀಪಿಕಾ ಜೊತೆ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹೊಸ ಒಪ್ಪಂದ: ಏನದು?

  |

  ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಮತ್ತು ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಇತ್ತೀಚಿಗಷ್ಟೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಇಬ್ಬರು ಒಟ್ಟಿಗೆ ಕಾಣಿಸಿಕೊಂಡ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಪಿ.ವಿ ಸಿಂಧು ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಕಂಚು ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದರು. ಪಿವಿ ಸಿಂಧುಗೆ ಭಾರತದಲ್ಲಿ ಅದ್ದೂರಿ ಸ್ವಾಗತ ದೊರೆತಿತ್ತು. ಇದೀಗ ಅನೇಕ ಸಿನಿ ಸೆಲೆಬ್ರಿಟಿಗಳು ಪಿವಿ ಸಿಂಧು ಅವರಿಗಾಗಿ ವಿಶೇಷ ಔತಣ ಏರ್ಪಡಿಸುತ್ತಿದ್ದಾರೆ. ಇತ್ತೀಚಿಗಷ್ಟೆ ಮೆಗಾಸ್ಟಾರ್ ಕುಟುಂಬ ಪಿವಿ ಸಿಂಧು ಅವರಿಗಾಗಿ ವಿಶೇಷ ಸಂಭ್ರಮ ಕೂಟ ಹಮ್ಮಿಕೊಂಡಿದ್ದರು. ಔತಣ ಕೂಟದಲ್ಲಿ ಅನೇಕರು ಭಾಗಿಯಾಗಿದ್ದರು.

  ಇದೀಗ ಪಿವಿ ಸಿಂಧು ಬಾಲಿವುಡ್ ಸ್ಟಾರ್ ನಟಿ ದೀಪಿಕಾ ಜೊತೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ. ಅಂದಹಾಗೆ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳಲು ಒಂದು ಬಲವಾದ ಕಾರಣವಿದೆ ಎನ್ನುವ ಸುದ್ದಿ ವೈರಲ್ ಆಗಿದೆ. ಸಿಂಧು ಮತ್ತು ದೀಪಿಕಾ ನಡುವೆ ಒಂದು ಒಪ್ಪಂದವಾಗಿದೆ ಎನ್ನುವ ಮಾತು ಬಾಲಿವುಡ್ ನಲ್ಲಿ ಹರಿದಾಡುತ್ತಿದೆ. ಅಷ್ಟಕ್ಕೂ ಇಬ್ಬರ ನಡುವಿನ ಡೀಲ್ ಏನಿರಬಹುದು ಅಂತ ಯೋಚಿಸುತ್ತಿದ್ದೀರಾ?.. ಪಿ.ವಿ ಸಿಂಧು ಅವರ ಜೀವನಾಧಾರಿತ ಸಿನಿಮಾ ತೆರೆಮೇಲೆ ಬರಲು ಸಿದ್ಧವಾಗುತ್ತಿದೆಯಂತೆ. ಸಿಂಧು ಬಯೋಪಿಕ್ ನಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

  ಇತ್ತೀಚಿಗಷ್ಟೆ ಮತ್ತೋರ್ವ ಪ್ರಸಿದ್ಧ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಅವರ ಬಯೋಪಿಕ್ ತೆರೆಮೇಲೆ ಬಂದಿತ್ತು. ಸೈನಾ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ನಟಿ ಪರಿಣಿತಿ ಚೋಪ್ರಾ ಕಾಣಿಸಿಕೊಂಡಿದ್ದರು. ಇದೀಗ ಸಿಂಧು ಬಯೋಪಿಕ್ ಸರದಿ ಎನ್ನಲಾಗುತ್ತಿದೆ.

  ಈಗಾಗಲೇ ಕ್ರೀಡಾ ಆಧಾರಿತ ಅನೇಕ ಬಯೋಪಿಕ್ ಗಳು ಬಾಲಿವುಡ್ ನಲ್ಲಿ ಬಿಡುಗಡೆಯಾಗಿವೆ ಮತ್ತು ತಯಾರಾಗುತ್ತಿವೆ. ಅನೇಕ ಬಯೋಪಿಕ್ ಗಳು ಸೂಪರ್ ಸಕ್ಸಸ್ ಕಂಡಿವೆ. ಅಭಿಮಾನಿಗಳ ಮೆಚ್ಚುಗೆಯ ಜೊತೆಗೆ ಬಾಕ್ಸ್ ಆಫೀಸ್ ನಲ್ಲೂ ಉತ್ತಮ ಕಮಾಯಿ ಮಾಡಿವೆ. ಇದೀಗ ಪಿ.ವಿ ಸಿಂಧು ಬಯೋಪಿಕ್ ಸದ್ದು ಮಾಡುತ್ತಿದ್ದು ಭಾರಿ ಕುತೂಹಲ ಮೂಡಿಸಿದೆ.

  ಅಂದಹಾಗೆ ಪಿ.ವಿ ಸಿಂಧು ಈ ಹಿಂದೆ ತನ್ನ ಬಯೋಪಿಕ್ ನಲ್ಲಿ ದೀಪಿಕಾ ಕಾಣಿಸಿಕೊಳ್ಳಬೇಕು ಎಂದು ಹೇಳಿದ್ದರು. ಅಂದರಂತೆ ಈಗ ದೀಪಿಕಾ, ಸಿಂಧು ಆಗಿ ತೆರೆಮೇಲೆ ಬರಲಿದ್ದಾರೆ ಎನ್ನಲಾಗುತ್ತಿದೆ. ಇಬ್ಬರು ಒಪ್ಪಂದ ಮಾಡಿಕೊಂಡಿದ್ದು, ದೀಪಿಕಾ, ಪಿವಿ ಸಿಂಧು ಪಾತ್ರದಲ್ಲಿ ನಟಿಸುವ ಜೊತೆಗೆ ಸ್ವತಃ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಿದ್ದಾರೆ ಎನ್ನಲಾಗುತ್ತಿದೆ. ಜೊತೆಗೆ ಲಾಭದಲ್ಲಿ ಸಿಂಧು ಅವರಿಗೂ ಶೇರ್ ಇರಲಿದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಅಂದಹಾಗೆ ಈ ಸಿನಿಮಾ ಕೇವಲ ಹಿಂದಿಯಲ್ಲಿ ಮಾತ್ರ ಮೂಡಿಬರುತ್ತಿದೆಯಂತೆ.

  ಬಯೋಪಿಕ್ ತಯಾರಿಸಲು ಪ್ರಸಿದ್ಧ ನಿರ್ದೇಶಕರಿಗಾಗಿ ಹುಡುಕಾಟ ನಡೆಯುತ್ತಿದೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಪಿ.ವಿ ಸಿಂಧು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ್ದಾರೆ. ದೀಪಿಕಾ ಕೂಡ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದಾರೆ. ಸಿಂಧು ಬಯೋಪಿಕ್ ನಲ್ಲಿ ದೀಪಿಕಾ ನಟಿಸಿದರೇ ವಿಶ್ವದಾದ್ಯಂತ ಗಮನ ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಅಂದಹಾಗೆ ಎಲ್ಲವೂ ಅಂದುಕೊಂಡಂತೆ ಆದರೆ ಸದ್ಯದಲ್ಲೇ ಪಿ.ವಿ ಸಿಂಧು ಬಯೋಪಿಕ್ ಸೆಟ್ಟೇರಲಿದೆ.

  English summary
  Bollywood Actress Deepika Padukone to Star in PV Sindhu's Biopic. PV Sindhu deal with Deepika Padukone.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X