»   » ತಾರೆ ಪ್ರಣೀತಾ ಬಾಲಿವುಡ್ ಕನಸು ನುಚ್ಚು ನೂರು

ತಾರೆ ಪ್ರಣೀತಾ ಬಾಲಿವುಡ್ ಕನಸು ನುಚ್ಚು ನೂರು

By: ಉದಯರವಿ
Subscribe to Filmibeat Kannada

ಸ್ಯಾಂಡಲ್ ವುಡ್ ತಾರೆ ಪ್ರಣೀತಾ ಅವರ ಬಾಲಿವುಡ್ ಕನಸು ನುಚ್ಚು ನೂರಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ಅವರು ಬಾಲಿವುಡ್ ಚಿತ್ರದಲ್ಲಿ ಬಣ್ಣ ಹಚ್ಚಬೇಕಾಗಿತ್ತು. ಆದರೆ ಅವರು ಆಡಿಷನ್ ರೌಂಡ್ ನಲ್ಲೇ ಅವಕಾಶ ಕಳೆದುಕೊಂಡಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

ಬಾಲಿವುಡ್ ಮೂಲಗಳ ಪ್ರಕಾರ, ನೀರಜ್ ಪಾಂಡೆ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲಿ ಅವರು ಅಭಿನಯಿಸಬೇಕಾಗಿತ್ತು. ಈ ಚಿತ್ರದ ನಾಯಕ ನಟ ಆಕ್ಷನ್ ಸ್ಟಾರ್ ಅಕ್ಷಯ್ ಕುಮಾರ್. ಆದರೆ ಪ್ರಣೀತಾ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. [ಪ್ರಣೀತಾ ಸಂಭಾವನೆ ಗಗನಕುಸುಮ]


ಅಕ್ಕಿ ಹಾಗೂ ನೀರಜ್ ಇಬ್ಬರೂ ಈ ಮುಂಚೆ 'ಸ್ಪೆಷಲ್ 26' ಎಂಬ ಚಿತ್ರ ಮಾಡಿ ಗೆದ್ದಿದ್ದಾರೆ. ಆ ಚಿತ್ರ ಎಲ್ಲರ ಮೆಚ್ಚುಗೆಗೂ ಪಾತ್ರವಾಯಿತು. ಈ ಬಾರಿ ನಾಯಕಿ ಪಾತ್ರಕ್ಕೆ ದಕ್ಷಿಣದ ಹೊಸ ಮುಖವನ್ನು ಪರಿಚಯಿಸಲು ಆಡಿಷನ್ ಗೆ ಕರೆಯಲಾಗಿತ್ತು. ಆದರೆ ಪ್ರಣೀತಾ ಅವರು ಆಡಿಷನ್ ಗೆ ತುಂಬಾ ತಡವಾಗಿ ಬಂದರಂತೆ.

ಅದೇ ರೀತಿ ಡೈಲಾಗ್ ಡೆಲಿವರಿಯಲ್ಲೂ ಹಲವಾರು ತಪ್ಪುಗಳನ್ನು ಮಾಡಿದರಂತೆ. ಕಡೆಗೆ ಅವಕಾಶ ಕಳೆದುಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ಈ ಬಗ್ಗೆ ಪ್ರಣೀತಾ ಮಾತ್ರ ಎಲ್ಲೂ ಬಾಯ್ಬಿಡದಿದ್ದರೂ ಅದು ಹೇಗೋ ಏನೋ ಸುದ್ದಿಯಂತೂ ಲೀಕ್ ಆಗಿದೆ.

ಕನ್ನಡದಲ್ಲಿ ತಮ್ಮ ಗ್ಲಾಮರ್ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ಪ್ರಣೀತಾ ಬಳಿಕ ತಮಿಳು, ತೆಲುಗು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದರು. ಆದರೆ ಬಾಲಿವುಡ್ ಕನಸಿಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಮುಂದೆ ಅವರಿಗೆ ಬಾಲಿವುದ್ ನಲ್ಲಿ ಒಳ್ಳೆಯ ಪಾತ್ರ ಸಿಗಲಿ ಎಂದು ಆಶಿಸೋಣ.

English summary
It is said that Kannada actress Pranitha missed Bollywood chance to act with Akshay Kumar. Pranitha was offered a chance for audition, but unfortunately, she was not short-listed, media reports indicated.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada