»   » ಬನಿಯನ್ ಜಾಹೀರಾತಿನಲ್ಲಿ ಕಾಣಿಸಲಿರುವ ನಟಿ ಸಮಂತಾ

ಬನಿಯನ್ ಜಾಹೀರಾತಿನಲ್ಲಿ ಕಾಣಿಸಲಿರುವ ನಟಿ ಸಮಂತಾ

Posted By:
Subscribe to Filmibeat Kannada

ತೆಲುಗು ಚಿತ್ರರಂಗದ ಅತ್ಯಂತ ಬೇಡಿಕೆಯುಳ್ಳ ತಾರೆಯರಲ್ಲಿ ಒಬ್ಬರು ಸಮಂತಾ ರುತ್ ಪ್ರಭು. ಚೆನ್ನೈ ಮೂಲದ ಈ ಬೆಡಗಿ ಟಾಲಿವುಡ್ ನಲ್ಲಿ ಮುಟ್ಟಿದ್ದೆಲ್ಲಾ ಚಿನ್ನ. 2015ರಲ್ಲಿ ಒಂದಷ್ಟು ಚಿತ್ರಗಳನ್ನು ಒಪ್ಪಿಕೊಂಡಿರುವ ಈ ಚೆಲುವೆ ಈಗ ಜಾಹೀರಾತುಗಳಲ್ಲೂ ಮಿಂಚುತ್ತಿದ್ದಾರೆ.

ಇತ್ತೀಚೆಗಷ್ಟೆ ಪಾದರಕ್ಷೆಯೊಂದರ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೊಂದು ಬ್ರ್ಯಾಂಡ್ ನ ರಾಯಭಾರಿಯಾಗುತ್ತಿದ್ದಾರೆ. ಆದರೆ ವಿಶೇಷ ಏನೆಂದರೆ ಅದೊಂದು ಬಲು ಜನಪ್ರಿಯ ಬನಿಯನ್ ಕಂಪನಿ ಎಂಬುದು. [ನಟಿ ಸಮಂತಾ ಜಿಮ್ ನಲ್ಲಿ ರಿಮ್ ಜಿಮ್ ಫೋಟೋ]

ಈ ರೀತಿಯ ಬನಿಯನ್ ಕಂಪನಿಗಳಿಗೆ ಸಲ್ಮಾನ್ ಖಾನೋ, ಅಕ್ಷಯ್ ಕುಮಾರೋ ಅಥವಾ ಇನ್ಯಾರನ್ನಾದರೂ ಸಂಪರ್ಕಿಸುವುದನ್ನು ಬಿಟ್ಟು ಸಮಂತಾ ಬೆನ್ನಿಗೇಕೆ ಬಿತ್ತೋ ಈ ಕಂಪನಿ ಗೊತ್ತಿಲ್ಲ. ಆದರೆ ಇದಕ್ಕಾಗಿ ಭರ್ಜರಿ ಆಫರನ್ನು ಕೊಡುತ್ತಿದೆಯಂತೆ ಬನಿಯನ್ ಕಂಪನಿ.

Actress Samantha endorsing Banian Ad

ಈ ಜಾಹೀರಾತಿಗೆ ಸಹಿ ಹಾಕಲು ಸಮಂತಾಗೆ ಆರು ಕೋಟಿ ಕೊಡುವುದಾಗಿ ಮುಂದೆ ಬಂದಿದೆಯಂತೆ ಕಂಪನಿ. ಎಲ್ಲವೂ ಓಕೆ ಆದರೆ ಮಾರ್ಚ್ ನಲ್ಲೇ ಶೂಟಿಂಗ್. ಇನ್ನೇನು ಬೇಸಿಗೆಕಾಲ ಶುರುವಾಗುವ ಸಮಯಕ್ಕೆ ಸಮಂತಾ ಬನಿಯನ್ ನಲ್ಲಿ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.

ಎರಡು ವರ್ಷಗಳ ಒಡಂಬಡಿಗೆ ಸಮಂತಾ ಸಹಿ ಹಾಕಿದ್ದಾರೆ ಎಂಬುದು ಇನ್ನೊಂದು ಮೂಲದ ಮಾಹಿತಿ. ಅದೆಲ್ಲಾ ಸರಿ ಇಷ್ಟಕ್ಕೂ ಇದ್ಯಾವ ರೀತಿ ಬನಿಯನ್ ಎಂಬುದು ತಿಳಿದುಬಂದಿಲ್ಲ. ಮಹಿಳೆಯರಿಗೆಂದೇ ಹೊಸದಾಗಿ ವಿನ್ಯಾಸ ಮಾಡಿದ ಬನಿಯನ್ ಇರಬಹುದೇ?

ಈ ಹಿಂದೆ ಸಮಂತಾ ಅವರು ಕೋಕಕೋಲ, ಚಿಕ್ ಶಾಂಪೂ, ಓಡೋನಿಲ್ ರೂಮ್ ಫ್ರೆಶ್ ನರ್, ಡಾಬರ್ ವಾಟಿಕಾ ಹೇರ್ ಆಯಿಲ್, ಲಕ್ಸ್ ಮತ್ತು ಪಾರಾಗನ್ ಉತ್ಪನ್ನಗಳ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್)

English summary
Samantha now signed to become brand ambassador for a banian company for two years. Top company officials are in talks with Samantha and deal is finalised for Rs 6 crores. Samantha will be participating in the ad shoot next month.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada