Don't Miss!
- News
ಕೆಲವೇ ಕ್ಷಣಗಳಲ್ಲಿ ತುಮಕೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ, ಸಿದ್ಧತೆ ಹೇಗಿದೆ ತಿಳಿಯಿರಿ
- Technology
ಟೆಲಿಗ್ರಾಮ್ನಲ್ಲಿ ವಾಟ್ಸಾಪ್ ಅನ್ನೇ ಮೀರಿಸುವ ಫೀಚರ್ಸ್!; ಬಳಕೆದಾರರಿಗೆ ಸಾಕಷ್ಟು ಅನುಕೂಲ
- Finance
ಅದಾನಿ ಡಾಲರ್ ಬಾಂಡ್ ವಿರುದ್ಧ ಸಾಲ ನೀಡಲು ಸ್ಟಾಡರ್ಡ್ ಚಾರ್ಟೆಡ್ ನಕಾರ: ವರದಿ
- Sports
ಬಾರ್ಡರ್-ಗವಾಸ್ಕರ್ ಟ್ರೋಫಿ: ಭಾರತವನ್ನು ಮಣಿಸಲು ಆಸಿಸ್ ತಂಡಕ್ಕೆ ಮಿಚೆಲ್ ಜಾನ್ಸನ್ ಸಲಹೆ
- Automobiles
ಸೆಲ್ಟೋಸ್ನ ಗೇರ್ಬಾಕ್ಸ್ನಲ್ಲಿ ದೋಷ ಕಂಡು ಬಂದಾಗ ಉಚಿತವಾಗಿ ಬದಲಾಯಿಸಿ ಕೊಟ್ಟ ಕಿಯಾ
- Lifestyle
ಮಕ್ಕಳನ್ನು 'ಅಮ್ಮ' ದಡಾರದಿಂದ ರಕ್ಷಿಸಲು ಇದೇ ತಿಂಗಳು ತಪ್ಪದೆ ಕೊಡಿಸಿ MR ಲಸಿಕೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನೀಲಿ ವೈಬ್ ಸೈಟುಗಳಲ್ಲಿ ಸುಮಾ ಗುಹಾ ಫೋಟೋ!
ರಮೇಶ್ ಜೊತೆ ನಟಿಸಿದ್ದ ಸುಮಾ ಗುಹಾ ಅಭಿನಯಕ್ಕಿಂತ ಹೆಚ್ಚಾಗಿ ತಮ್ಮ ಮೈಮಾಟ ಪ್ರದರ್ಶನ ಹಾಗೂ ಹಾಟ್ ಲುಕ್ ನಿಂದಲೇ ಹೆಚ್ಚು ಸುದ್ದಿಯಾಗಿದ್ದರು. ಆದರೆ ಅವರೆಲ್ಲೂ ಎಲ್ಲೆ ಮೀರಿ ವರ್ತಿಸಿರಲಿಲ್ಲ. ಹೀಗಿರುವಾಗ ಹಾಟ್ ಆಗಿ ಕಾಣಿಸಿಕೊಂಡಿದ್ದೇ ತಪ್ಪಾಯ್ತು ಎಂಬಂತೆ ಈಗ ಅವರ ಸ್ಥಿತಿಯಾಗಿದೆ. ಕಾಣಿಸಬಾರದ ಜಾಗದಲ್ಲಿ ಅವರ ಫೋಟೋ ಮೂಡಿಬಂದಿದೆ.
ಗ್ಲಾಮರಸ್ ಆಗಿ ಪೋಸ್ ಕೊಟ್ಟಿದ್ದ ಸುಮಾ ಗುಹಾರ ಬಹಳಷ್ಟು ಫೊಟೋಗಳು ದುರ್ಬಳಕೆಯಾಗಿ ಎಸ್ಕಾರ್ಟ್, ಅಂದರೆ ಹೈಟೆಕ್ ನೀಲಿ ವೆಬ್‌ಸೈಟ್ ಸೇರಿವೆ. ಸದ್ಯ 'ಅಟ್ಟಹಾಸ' ಚಿತ್ರದಲ್ಲಿ ಅರ್ಜುನ್ ಸರ್ಜಾ ಪತ್ನಿಯಾಗಿ ನಟಿಸುತ್ತಿರುವ ಸುಮಾ ಇದನ್ನು ತಿಳಿದು ಅಚ್ಚರಿ ಹಾಗೂ ಶಾಕ್ ಎರಡನ್ನೂ ಏಕಕಾಲಕ್ಕೆ ಅನುಭವಿಸುತ್ತಿದ್ದಾರೆ. ತಕ್ಷಣವೇ ಮುಂಬಯಿ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ ಸುಮಾ.
ಇದೀಗ ದೂರು ದಾಖಲಿಸಿರುವ ಸುಮಾ ಗುಹಾ, ಮುಂಬಯಿ ಪೊಲೀಸರಿಂದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭರವಸೆ ಸಿಕ್ಕಿ ಮೇಲೆ ಸಮಾಧಾನವಾಗಿದ್ದಾರೆ. "ಈಗಷ್ಟೇ ಚಿತ್ರರಂಗದಲ್ಲಿ ಮೇಲೇರುತ್ತಿರರುವ ನನಗೆ ಇದು ತುಂಬಾ ಬೇಸರ ತಂದಿದೆ. ಇದನ್ನೆಲ್ಲ ಯಾರು, ಯಾಕೆ ಮಾಡುತ್ತಿದ್ದಾರೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ಆದರೆ ನನಗೆ ಈ ಬಗ್ಗೆ ಗೊತ್ತಿರಲೇ ಇಲ್ಲ. ಗೊತ್ತಾದ ತಕ್ಷಣ ಕಾರ್ಯಪ್ರವೃತ್ತಳಾಗಿದ್ದೇನೆ" ಎಂದು ಅಳಲು ತೋಡಿಕೊಂಡಿದ್ದಾರೆ.
ಮುಂದುವರಿದ ಸುಮಾ ಗುಹಾ "ನಮ್ಮದು ಮರ್ಯಾದಸ್ಥ ಕುಟುಂಬ. ನನ್ನ ತಂದೆ ಡಾಕ್ಟರ್, ತಾಯಿ ಟೀಚರ್, ಸಹೋದರ ಎಂಜಿನಿಯರ್. ನಾನು ಜೆನೆಟಿಕ್ ಎಂಜಿನಿಯರಿಂಗ್ ನಲ್ಲಿ ಪಿಜಿ ಮಾಡಿದ್ದೇನೆ. ಈ ಮೊದಲು ನಾನು ಹವ್ಯಾಸಕ್ಕಾಗಿ ಮಾಡೆಲ್ ಆಗಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದೆ. 'ದೊರೈ' ತಮಿಳು ಚಿತ್ರದ ಸ್ಕ್ರೀನ್ ಟೆಸ್ಟ್‌ನಲ್ಲಿ ಪಾಲ್ಗೊಂಡಿದ್ದ ನಾನು ಆ ಮೂಲಕ ಬಣ್ಣದ ಬದುಕು ಪ್ರಾರಂಭಿಸಿದೆ" ಎಂದಿದ್ದಾರೆ.
ಒಟ್ಟಿನಲ್ಲಿ ಈ ರೀತಿ ನೀಲಿ ವೈಬ್ ಸೈಟ್ ಗಳಲ್ಲಿ ನನ್ನ ಫೋಟೋ ಬಂದಿರುವುದನ್ನು ನನಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಪೊಲೀಸರಿಗೆ ದೂರು ಕೊಟ್ಟಿರುವುದರಿಂದ ಈಗ ಕೂಲ್ ಆಗಿರುವೆನಾದರೂ ಗೊತ್ತಾದ ತಕ್ಷಣ ಬಹಳಷ್ಟು ಅತ್ತುಬಿಟ್ಟೆ. ಹೀಗಾಗಬಾತದಿತ್ತು, ಯಾಕೆ ಹೀಗಾಯ್ತು ಎಂಬ ನೋವು ಸದಾ ನನ್ನನ್ನು ಕಾಡಲಿದೆ" ಎಂದು ಸಾಕಷ್ಟು ದುಃಖದಿಂದ ನುಡಿದಿದ್ದಾರೆ ಸುಮಾ ಗುಹಾ. (ಏಜೆನ್ಸೀಸ್)