»   » ವಿದ್ಯಾ ಬಾಲನ್ ಗೆ ಬೆಕ್ಕು ಕಂಡರೆ ಮೈಯಲ್ಲಾ ನಡುಕ

ವಿದ್ಯಾ ಬಾಲನ್ ಗೆ ಬೆಕ್ಕು ಕಂಡರೆ ಮೈಯಲ್ಲಾ ನಡುಕ

Posted By:
Subscribe to Filmibeat Kannada
ಬಾಲಿವುಡ್ ನ ಬಹಳಷ್ಟು ತಾರೆಗಳಿಗೆ ಸಾಕು ಪ್ರಾಣಿಗಳೆಂದರೆ ಎಲ್ಲಿಲ್ಲದ ಅಕ್ಕರೆ. ಆದರೆ 'ಡರ್ಟಿ ಗರ್ಲ್' ಖ್ಯಾತಿಯ ಊ ಲಾಲಾ ಬೆಡಗಿ ವಿದ್ಯಾ ಬಾಲನ್ ಗೆ ಮಾತ್ರ ಬೆಕ್ಕು ಕಂಡ್ರೆ ಆಗಲ್ಲವಂತೆ. ಅದನ್ನು ಕಂಡರೆ ಮೈಯಲ್ಲಾ ನಡುಕ ಬರುತ್ತದಂತೆ. ಹೋಗಲಿ ಬೆಕ್ಕಿನ ಬಗ್ಗೆ ಯಾಕಿಷ್ಟು ಭಯ ಹೇಳಿ ಎಂದರೂ ಆಕೆ ಮಾತೇ ಹೊರಡದಷ್ಟು ಗಲಿಬಿಲಿಗೊಳಗಾಗುತ್ತಾರೆ.

ಸ್ಟುಡಿಯೋ ಒಂದರಲ್ಲಿ ಚಿತ್ರೀಕರಣದಲ್ಲಿರಬೇಕಾದರೆ ಕೆಲವು ಬೆಕ್ಕುಗಳು ವಿದ್ಯಾರಿಗೆ ಎದುರಾಗಿವೆ. ಅವುಗಳನ್ನು ಕಂಡಿದ್ದೇ ತಡ ಅಲ್ಲೇ ಇದ್ದ ಕುರ್ಚಿಯೊಂದರ ಮೇಲೆ ಹತ್ತಿ ನಿಂತು ದಯವಿಟ್ಟು ಇವನ್ನು ಹೊರಹಾಕಿ ಎಂದು ಗೋಗರೆದರಂತೆ. ಅಲ್ಲಿಂದ ಶುರುವಾದ ಬೆಕ್ಕಿನ ಭಯ ಈಗ ಭೂತಾಕಾರವಾಗಿ ಕಾಡುತ್ತಿದೆಯಂತೆ.

ಬಳಿಕ ಆಕೆ ನೆಮ್ಮದಿಯಾಗಿ ತನ್ನ ವ್ಯಾನಿನೊಳಕ್ಕೆ ಹೋದರಂತೆ. ಅಲ್ಲೂ ಅಷ್ಟೇ ಬೆಕ್ಕುಗಳು ಶತಪಥ ಹಾಕುತ್ತಿದ್ದನ್ನು ಕಂಡು ಕಿಟಾರನೆ ಕಿರುಚಿ ವ್ಯಾನಿನಿಂದ ಹೊರಗೆ ಜಿಗಿದರಂತೆ. ಇದನ್ನು ಕಂಡ ಸಹಾಯಕನೊಬ್ಬ, "ಅಯ್ಯೋ ಮೇಡಂ ನೀವ್ಯಾಕೆ ಒಂದು ಬೆಕ್ಕನ್ನು ಮನೆಯಲ್ಲಿ ಸಾಕಿಕೊಳ್ಳಬಾರದು" ಎಂದು ಉಚಿತ ಸಲಹೆ ಕೊಟ್ಟನಂತೆ.

ಇದರಿಂದ ರಾಂಗ್ ಆದ ವಿದ್ಯಾ, ಮೊದಲು ನನ್ನ ಕಣ್ಣಿಗೆ ಬೆಕ್ಕುಗಳು ಬೀಳದಂತೆ ಮಾಡಿ. ಅವನ್ನು ಕಂಡರೆ ನನಗೆ ಮೈಯಲ್ಲಾ ನಡುಗುತ್ತದೆ ಎಂದು ಬೇಡಿಕೊಂಡರಂತೆ. ಬೆಕ್ಕಿನ ಹೆಜ್ಜೆ ಹಾಕುವ ಬೆಡಗಿಯರಿಗೇ ಬೆಕ್ಕಿಗೆ ಅಂಜಿದರೆಂತೆಯ್ಯಾ ಎಂದು ಬಾಲಿವುಡ್ ಮಂದಿ ಹಾಡಿಕೊಳ್ಳುತ್ತಿದ್ದಾರೆ. (ಏಜೆನ್ಸೀಸ್)

English summary
Bollywood actress Vidya Balan is extremely scared of cats. The actress does not like to even talk on the subject of cats. Vidya Balan have a phobia of cats.
Please Wait while comments are loading...