For Quick Alerts
  ALLOW NOTIFICATIONS  
  For Daily Alerts

  ಎರಡನೇ ಮಗು ನಿರೀಕ್ಷೆಯಲ್ಲಿ ತಾರೆ ಐಶ್ವರ್ಯಾ ರೈ?

  By Rajendra
  |

  ಬಾಲಿವುಡ್ ತಾರೆ ಐಶ್ವರ್ಯಾ ರೈ ಮತ್ತೆ ಪ್ರೆಗ್ನೆಂಟ್ ಆಗಿದ್ದಾರಾ? ಈಗಾಗಲೆ ಆರಾಧ್ಯ ಬಚ್ಚನ್ ಗೆ ತಾಯಿಯಾಗಿರುವ ಅವರು ಈಗ ಎರಡನೇ ಮಗು ನಿರೀಕ್ಷೆಯಲ್ಲಿದ್ದಾರೆಯೇ? ಈಗ ಈ ಪ್ರಶ್ನೆ ಬಾಲಿವುಡ್ ವಲಯದಲ್ಲಿ ಭಾರಿ ಚರ್ಚೆಗೆ ಆಸ್ಪದ ನೀಡಿದೆ.

  ಐಶ್ವರ್ಯಾ ರೈ ಅವರು ಮತ್ತೊಂದು ಮುದ್ದು ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಸಹಾರಾ ಸಮಯ್ ರಾಷ್ಟ್ರೀಯ ಮಾಧ್ಯಮ ಪ್ರಕಟಿಸಿದ್ದು ಎಲ್ಲರ ಗಮನವನ್ನು ಸೆಳೆದಿದೆ. ಗುರುವಾರ (ಏ.24) ಐಶ್ವರ್ಯಾ ರೈ ಅವರು ಲೋಕಸಭೆ ಚುನಾವಣೆ ನಿಮಿತ್ತ ಮತ ಚಲಾಯಿಸಲು ತನ್ನ ಕುಟುಂಬ ಸಮೇತ ಬಂದಿದ್ದರು. [ಐಶ್ವರ್ಯಾ ರೈ ಮಗಳು ಆರಾಧ್ಯಾ ಫೋಟೋಗಳು]

  ಆ ಸಂದರ್ಭದಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದ ಅವರು, ಎಂದಿಗಿಂತ ಕೊಂಚ ದಪ್ಪವಾಗಿ ಕಂಡಿರುವುದೇ ಮತ್ತೆ ಗರ್ಭಿಣಿ ಇರಬಹುದೇ ಎಂಬ ಅನುಮಾನಕ್ಕೆ ಕಾರಣವಾಗಿದೆ. ಈ ಹಿಂದೊಮ್ಮೆಯೂ ಇದೇ ರೀತಿಯ ಸುದ್ದಿ ಪ್ರಕಟವಾದಾಗ ಐಶ್ ದಂಪತಿಗಳು ಸುದ್ದಿಯನ್ನು ನಿರಾಕರಿಸಿದ್ದರು.

  ಐಶ್ವರ್ಯಾ ರೈ ಅವರು ಈಗಷ್ಟೇ ತಾಯ್ತನದ ಆನಂದವನ್ನು ಅನುಭವಿಸಿ ಮತ್ತೆ ಬಣ್ಣಹಚ್ಚಲು ಸಿದ್ಧವಾಗಿದ್ದಾರೆ. ಖ್ಯಾತ ನಿರ್ದೇಶಕ ಮಣಿರತ್ನಂ ಅವರ ಚಿತ್ರಕ್ಕೆ ಸಹಿ ಹಾಕಿರುವ ಸುದ್ದಿಯೂ ಇದೆ. ಆದರೆ ಈಗ ಅವರು ಪ್ರೆಗ್ನೆಂಟ್ ಎಂಬುದು ಎಷ್ಟು ನಿಜವೋ ಎಷ್ಟು ಸುಳ್ಳೋ ಕಾಲವೇ ನಿರ್ಧರಿಸಬೇಕು.

  ಐಶ್ ದಂಪತಿಗಳು ಎರಡನೇ ಮಗುವನ್ನು ಬಯಸುವುದರಲ್ಲಿ ತಪ್ಪೇನು ಇಲ್ಲವಲ್ಲಾ? ಅದು ಅವರವರ ವೈಯಕ್ತಿಯ ವಿಷಯ ನಮಗ್ಯಾಕೆ ಎಂದು ಕೆಲವರು ಮೂಗು ಮುರಿದಿದ್ದಾರೆ. ಮಧುರ್ ಭಂಡಾರಕರ್ ಅವರ 'ಹೀರೋಯಿನ್' ಚಿತ್ರಕ್ಕೆ ಸಹಿ ಹಾಕಿದ ಬಳಿಕ ಐಶೂ ಗರ್ಭಿಣಿಯಾಗಿದ್ದರು.

  ಬಳಿಕ ಹೀರೋಯಿನ್ ಚಿತ್ರವನ್ನೇ ಕೈಬಿಟ್ಟಿದ್ದರು. ಭಂಡಾರಕರ್ ಅವರ ಕೆಂಗಣ್ಣಿಗೂ ಗುರಿಯಾಗಿದ್ದರು. ಈ ಬಾರಿ ಮಣಿರತ್ನಂ ಕೆಂಗಣ್ಣಿಗೆ ಗುರಿಯಾಗದಂತೆ ತಾನು ಗರ್ಭಿಣಿಯೇ ಅಲ್ಲವೇ ಎಂಬುದನ್ನು ಮೊದಲೇ ತಿಳಿಸಿಬಿಟ್ಟರೆ ಒಳಿತಲ್ಲವೇ?

  English summary
  According to a news report in Sahara Samay, Aishwarya Rai and Abhishek Bachchan planning second baby and the news was confirmed when she stepped out of her house to vote in the Lok sabha elections.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X