»   » 'ಮಳೆ'ಯಲ್ಲಿ ಪ್ರೇಮ್-ಅಮೂಲ್ಯ ನಡುವೆ ಏನೋ ಸರಿಯಿಲ್ಲ

'ಮಳೆ'ಯಲ್ಲಿ ಪ್ರೇಮ್-ಅಮೂಲ್ಯ ನಡುವೆ ಏನೋ ಸರಿಯಿಲ್ಲ

Posted By: ಜೀವನರಸಿಕ
Subscribe to Filmibeat Kannada

ಕಳೆದ ವರ್ಷ ಫಿಲಂಫೇರ್ ಅವಾರ್ಡ್ ನಲ್ಲಿ 'ಚಾರ್ಮಿನಾರ್'ಗೆ ಬೆಸ್ಟ್ ಆಕ್ಟರ್ ಪಡ್ಕೊಂಡ ನಾಯಕ ಲವ್ಲಿ ಸ್ಟಾರ್ ಪ್ರೇಮ್ ಅಲಿಯಾಸ್ ನೆನಪಿರಲಿ ಪ್ರೇಮ್, 'ಶ್ರಾವಣಿ ಸುಬ್ರಹ್ಮಣ್ಯ'ಗೆ ಬೆಸ್ಟ್ ಆಕ್ಟ್ರೆಸ್ ಪಡ್ಕೊಂಡ ನಟಿ ಅಮೂಲ್ಯ ಅಭಿನಯದ ಚಿತ್ರ 'ಮಳೆ'.

ಯೋಗರಾಜ್ ಭಟ್ಟರ 'ಮುಂಗಾರುಮಳೆ' ಚಿತ್ರದ ಟೈಟಲ್ನಲ್ಲಿ ಸ್ವಲ್ಪವೂ ಬದಲಾವಣೆ ಮಾಡದೆ ಮಳೆಯನ್ನ ಹಾಗೇ ಉಳಿಸಿಕೊಂಡ ನಿರ್ಮಾಪಕ ಆರ್ ಚಂದ್ರು ಮಳೆಗೆ ತಮ್ಮ ಗೆಳೆಯ ಕಮ್ ಶಿಷ್ಯ ತೇಜಸ್ ಅವ್ರಿಂದ ಆಕ್ಷನ್ ಕಟ್ ಹೇಳಿಸಿದ ಕಲರ್ಫುಲ್ ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ. ['ಮಳೆ'ಯಲ್ಲಿ ಲವ್ಲಿ ಸ್ಟಾರ್ ಜೊತೆ ಬೇಬಿ ಡಾಲ್ ಅಮೂಲ್ಯ ಡಾನ್ಸ್]


ಮಳೆ ಚಿತ್ರ ಮಳೆಯ ಊರು ಮಲೆನಾಡ ತವರು ಸಕಲೇಶಪುರದಲ್ಲಿ ಹೆಚ್ಚಿನ ಭಾಗ ಚಿತ್ರೀಕರಣಗೊಂಡಿದೆ. ಆದ್ರೆ ಇಲ್ಲಿಯವರೆಗೂ ಎಲ್ಲವೂ ಸರಿಯಿದ್ದ ಮಳೆ ಟೀಂನಲ್ಲಿ ಏನೋ ಸರಿ ಇಲ್ಲ ಅನ್ನಿಸ್ತಿದೆ. ಒಳ್ಳೆ ಮಳೆ ಬಿದ್ದರೂ ಬೆಳೆ ಕೈಗೆಟುಕದಿದ್ದರೆ ಹೇಗೆ? ಮೌಂಟ್ ಕಾರ್ಮೆಲ್ ಕಾಲೇಜು ಹುಡುಗಿ ಅಮೂಲ್ಯ ಮತ್ತು ಪ್ರೇಮ್ ಸಂಬಂಧ ಹಳಸಿದ್ಯಾ ಅನ್ನೋ ಅನುಮಾನಗಳು ಮೂಡೋಕೆ ಕಾರಣವೂ ಇದೆ.


ಚಂದ್ರು ಪ್ರೇಮ್ ಚಕ್ಕರ್

ಸಿನಿಮಾದ ಬಿಡುಗಡೆ ವೇಳೆಯಲ್ಲಿ ಪತ್ರಿಕಾಗೋಷ್ಠಿಗೆ ಬರಬೇಕಿದ್ದ ನಿರ್ಮಾಪಕ ಆರ್ ಚಂದ್ರು ಮತ್ತು ಪ್ರೇಮ್ ಇಬ್ಬರೂ ಪತ್ರಿಕಾಗೋಷ್ಠಿಯಲ್ಲಿ ಇರಲಿಲ್ಲ. ರಿಲೀಸ್ಗೂ ಹಿಂದಿನ ಪತ್ರಿಕಾಗೋಷ್ಠಿ ಅಂದ್ರೆ ಸಹಜವಾಗಿ ಚಿತ್ರದ ನಾಯಕ ನಿರ್ಮಾಪಕ ಖುದ್ದು ಇದ್ದು ಪತ್ರಕರ್ತರಿಗೆ ಮಾಹಿತಿ ಕೊಡೋದು ಸಾಮಾನ್ಯ. ಆದ್ರೆ ಈ ಬಾರಿ ಹಾಗಾಗಲಿಲ್ಲ.


ಪೋಸ್ಟರ್ ಫ್ರೇಮ್ನಲ್ಲಿ ನೋ ಪ್ರೇಮ್

ಪತ್ರಿಕಾಗೋಷ್ಠಿಯ ವೇದಿಕೆಯಲ್ಲಿ 6-7 ಆಸನಗಳಿದ್ದರೂ ಮಾಹಿತಿಗೆ ಸಿಕ್ಕಿದ್ದು ಅಮೂಲ್ಯ ಮತ್ತು ನಿರ್ದೇಶಕ ಶಿವತೇಜಸ್ ಮಾತ್ರ. ಚಂದ್ರು ಲಕ್ಷ್ಮಣ ಶೂಟಿಂಗ್. ಪ್ರೇಮ್ ಬೆಂಗಳೂರಲ್ಲಿಲ್ಲ ಅನ್ನೋ ಮಾಹಿತಿಯನ್ನ ಶಿವತೇಜಸ್ ಹೇಳಿದ್ರು. ಆದ್ರೆ ಪತ್ರಿಕಾಗೋಷ್ಠಿಯ ಮುಖ್ಯ ಪೋಸ್ಟರ್ನಲ್ಲಿ ದೊಡ್ಡದಾಗಿ ರಾರಾಜಿಸಿದ್ದು ಅಮೂಲ್ಯ, ಪ್ರೇಮ್ ಫ್ರೇಮ್ನಲ್ಲೇ ಇರಲಿಲ್ಲ.


ಅಮೂಲ್ಯ ಫೇಮ್ ಪ್ರೇಮ್ಗೆ ತಲೆನೋವು

ಅಮೂಲ್ಯ ಸದ್ಯ ಸ್ಯಾಂಡಲ್ವುಡ್ನಲ್ಲಿ ಯಶಸ್ವೀ ನಟಿ. ಅಮೂಲ್ಯ ಪೋಸ್ಟರ್ಗಳಲ್ಲಿ ಮಿಂಚ್ತಾ ಇರೋದು. ಚಿತ್ರದಲ್ಲಿ ನಿರ್ದೇಶಕರು ಅಮೂಲ್ಯ ಮತ್ತು ಪ್ರೇಮ್ಗೆ ಕೊಟ್ಟಿರೋ ಸಮನಾದ ಪ್ರಾಮುಖ್ಯತೆ ಪ್ರೇಮ್ಗೆ ತಲೆನೋವಾಗಿದ್ಯಾ ಗೊತ್ತಿಲ್ಲ.


ಹಿಂದಿನ ಪತ್ರಿಕಾಗೋಷ್ಠಿಯಲ್ಲೂ..

ಈ ಹಿಂದಿನ ಪತ್ರಿಕಾಗೋಷ್ಠಿಯಲ್ಲಿ ಮಳೆ ಚಿತ್ರದ ಟ್ರೈಲರ್ ರಿಲೀಸ್ ಮಾಡಲಾಗಿತ್ತು. ಆ ಪತ್ರಿಕಾಗೋಷ್ಠಿಗೂ ಕೂಡ ಪ್ರೇಮ್ ಮತ್ತು ಚಂದ್ರು ಇಬ್ಬರೂ ಬಂದಿರಲಿಲ್ಲ. ಆ ದಿನ ಕೂಡ ಕಾಲಿಗೆ ಗಾಯ ಮಾಡಿಕೊಂಡಿದ್ರೂ ಕುಂಟುತ್ತಲೇ ಅಮೂಲ್ಯ ಒಬ್ಬರೇ ಪತ್ರಿಕಾಗೋಷ್ಠಿಗೆ ಬಂದಿದ್ರು.


ಸಂಭಾವನೆ ಇಲ್ಲದೇ ನಟನೆ

ನಟ ಪ್ರೇಮ್ ಚಿತ್ರದಲ್ಲಿ ಯಾವುದೇ ಸಂಭಾವನೆ ಪಡೆಯದೇ ನಟಿಸಿದ್ದಾರೆ ಅಂತ ಸ್ವತಃ ನಿರ್ಮಾಪಕ ಚಂದ್ರು ಹೇಳಿದ್ದಾರೆ. ಪ್ರೇಮ್ ನಟಿಸದ್ದು ನೆನಪಿರಲಿ ಚಿತ್ರದ ನಂತ್ರ ಪ್ರೇಕ್ಷಕರ ನೆನಪಿಂದ ಮರೆತೇ ಹೋಗಿದ್ದ ಪ್ರೇಮ್ರನ್ನ ನೆನಪಾಗಿಸಿದ್ದು ಚಂದ್ರು ಚಾರ್ಮಿನಾರ್ ಮೂಲಕ. ಇದೇ ಖುಷಿಗಾಗಿ ಪ್ರೇಮ್ ಸಂಭಾವನೆ ಇಲ್ಲದೇ ನಟಿಸಿದ್ದಾರೆ.


ಪ್ರೇಮ್ಗೆ ಮಳೆ ಇಷ್ಟ ಇಲ್ವಾ?

ಸಹಜವಾಗಿ ತಮ್ಮ ಮುಂದಿನ ಸಿನಿಮಾದ ಚಂದದ ಹಾಡನ್ನ ನಟರು ಕಾಲರ್ ಟ್ಯೂನ್ ಮಾಡಿಕೊಳ್ತಾರೆ. ಆದ್ರೆ ಪ್ರೇಮ್ ಅವ್ರ ಕಾಲರ್ ಟ್ಯೂನ್ ಮಳೆ ಸಿನಿಮಾದ್ದಲ್ಲ. ಈಗ್ಲೂ ಅವ್ರ ಕಾಲರ್ ಟ್ಯೂನ್ ಹಳೇ ಸಿನಿಮಾ ಫೇರ್ ಅಂಡ್ ಲವ್ಲೀಯದ್ದು..


ಗಾಸಿಪ್ ಗಾಂಪರ ಬಾಯಿಗೆ ಆಹಾರ

ನಿರ್ದೇಶಕ ಶಿವತೇಜಸ್ ಮತ್ತು ಅಮೂಲ್ಯ ಮಾತ್ರ ಕಳೆದ ಎರಡು ಪತ್ರಿಕಾಗೋಷ್ಠಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಆದ್ರೆ ಚಂದ್ರು-ಪ್ರೇಮ್ ಕಾಣಿಸಿಕೊಳ್ತಾ ಇಲ್ಲ. ಇದ್ರಿಂದ ಗಾಂಧಿನಗರದ ಗಾಸಿಪ್ ಗಾಂಪರ ಬಾಯಿಗೆ ಆಹಾರವಾಗ್ತಿದ್ದಾರೆ..


English summary
It seems all is not well between actor Prem Kumar and actress Amoolya. Prem and producer R Chandru have stayed away from press conferences. Also Prem is not prominently seen in promos. Gossip mongers say Amoolya has been given more importance in the movie.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more