For Quick Alerts
  ALLOW NOTIFICATIONS  
  For Daily Alerts

  ನಯನತಾರ ವಿಘ್ನೇಶ್ ಮದುವೆ: ಗುರುಬಲ ಇಲ್ಲ ಎಂದ ಜ್ಯೋತಿಷಿ!

  |

  ಜ್ಯೋತಿಷಿ ವೇಣು ಸ್ವಾಮಿ ಜನಪ್ರಿಯ ಜ್ಯೋತಿಷಿಗಳಲ್ಲಿ ಒಬ್ಬರು. ಆಗಾಗ ಸೆಲೆಬ್ರಿಟಿಗಳ ಬಗ್ಗೆ ಭವಿಷ್ಯ ಹೇಳುವ ಮೂಲಕ ಸುದ್ದಿ ಅಗುತ್ತಲೇ ಇರುತ್ತಾರೆ. ಈ ಮೂಲಕ ಹೆಚ್ಚು ಜನಪ್ರಿಯತೆಯನ್ನು ಕೂಡ ಗಳಿಸಿಕೊಂಡಿದ್ದಾರೆ. ಸ್ಟಾರ್ ನಟ ನಟಿಯರ ಮದುವೆ ಜಾತಕವನ್ನು ಹೇಳುವುದಲ್ಲಿ ಮೊದಲಿಗರು. ಈಗ ನಟಿ ನಯನತಾರ ಮತ್ತು ವಿಘ್ನೇಶ್ ಮದುವೆ ಭವಿಷ್ಯ ನುಡಿದಿದ್ದಾನೆ.

  ಸೌತ್ ಚಿತ್ರರಂಗದಲ್ಲಿ ನಟಿ ನಯನತಾರ ಮತ್ತು ವಿಘ್ನೇಶ್ ಶಿವನ್ ಜೋಡಿ ಹೆಸರುವಾಸಿ. ಈ ಜೋಡಿ ಹಲವು ದಿನಗಳಿಂದ ಒಟ್ಟಿಗೆ ಓಡಾಡುತ್ತಿದ್ದಾರೆ, ಪರಸ್ಪರ ಪ್ರೀತಿಸುತ್ತಿದ್ದಾರೆ ಸಹ. ಇವರ ಪ್ರೇಮ್ ಕಹಾನಿ ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಸಹ ತಾವು ಪ್ರೀತಿಯಲ್ಲಿ ಬಿದ್ದಿರುವ ಸುದ್ದಿಯನ್ನು ಅಧಿಕೃತಗೊಳಿಸಿದೆ.

  ಜೂನ್ 9ಕ್ಕೆ ನಯನತಾರ ವಿಗ್ನೇಶ್ ಮದುವೆ ಫಿಕ್ಸ್, ದೇವಸ್ಥಾನದಲ್ಲಿ ವಿವಾಹ!ಜೂನ್ 9ಕ್ಕೆ ನಯನತಾರ ವಿಗ್ನೇಶ್ ಮದುವೆ ಫಿಕ್ಸ್, ದೇವಸ್ಥಾನದಲ್ಲಿ ವಿವಾಹ!

  ಈಗ ಇವರ ಮದುವೆ ಸುದ್ದಿ ಜೋರಾಗಿದೆ. ಇದೇ ವರ್ಷ ನಯನತಾರ, ವಿಘ್ನೇಶ್ ಮದುವೆ ಆಗುತ್ತಾರೆ ಎನ್ನುವ ಬಗ್ಗೆ ಗಾಳಿ ಸುದ್ದಿ ಹರಿದಾಡುತ್ತಾ ಇದೆ. ಇದರ ಬೆನ್ನಲ್ಲೇ ಇವರ ಮದುವೆಯ ಭವಿಷ್ಯ ಹೇಳಿದ್ದಾರೆ ಜ್ಯೋತಿಷಿ ವೇಣು ಸ್ವಾಮಿ. ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದೆ.

  ಸೋನಾಕ್ಷಿ ಸಿನ್ಹಾ ನಿಶ್ಚಿತಾರ್ಥ ರಹಸ್ಯ: ವಜ್ರದ ಉಂಗುರ ತೋರಿಸಿದ್ದೇಕೆ ನಟಿ?ಸೋನಾಕ್ಷಿ ಸಿನ್ಹಾ ನಿಶ್ಚಿತಾರ್ಥ ರಹಸ್ಯ: ವಜ್ರದ ಉಂಗುರ ತೋರಿಸಿದ್ದೇಕೆ ನಟಿ?

  ನಯನತಾರಗೆ ಗುರು ಬಲ ಇಲ್ಲವಂತೆ!

  ನಯನತಾರಗೆ ಗುರು ಬಲ ಇಲ್ಲವಂತೆ!

  ನಟಿ ನಯನತಾರ ಮದುವೆ ಬಗ್ಗೆ ಮಾತನಾಡಿರುವ ಜ್ಯೋತಿಷಿ, ನಯನತಾರಾಗೆ ಗುರು ಬಲ ಇಲ್ಲ ಎಂದಿದ್ದಾರೆ. ಅಂದರೆ ಮದುವೆ ಆಗಲು ಇದು ಉತ್ತಮ ಸಮಯ ಅಲ್ಲ, ಯಾಕೆಂದರೆ ಗುರು ಪ್ರಬಲವಾಗಿಲ್ಲ ಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. ನಯನತಾರ ಹುಟ್ಟಿದ ದಿನಾಂಕದ ಆಧಾರದ ಮೇಲೆ ಮದುವೆ ಭವಿಷ್ಯವನ್ನು ನುಡಿದಿದ್ದಾರೆ. ಮತ್ತೊಂದು ಕಡೆ ನಯನತಾರ ಮತ್ತು ವಿಘ್ನೇಶ್ ಇದೇ ವರ್ಷ ಜೂನ್‌ 29ರಂದು ಮದುವೆ ಆಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿದೆ.

  ಸಮಂತಾ, ರಶ್ಮಿಕಾ ಮಂದಣ್ಣಗೂ ಇಲ್ಲವಂತೆ ಗುರುಬಲ!

  ಸಮಂತಾ, ರಶ್ಮಿಕಾ ಮಂದಣ್ಣಗೂ ಇಲ್ಲವಂತೆ ಗುರುಬಲ!

  ನಯನತಾರ ಮಾತ್ರವೇ ಅಲ್ಲ ರಶ್ಮಿಕಾ, ಮಂದಣ್ಣ, ಅನುಷ್ಕಾ ಶೆಟ್ಟಿ ಮತ್ತು ಸಮಂತಾ ಮದುವೆ ಬಗ್ಗೆಯೂ ಜ್ಯೋತಿಷಿ ಮಾತನಾಡಿದ್ದಾರೆ. ಈ ನಟಿಯರಿಗೆ ಗುರು ಬಲ ಇಲ್ಲ ಹಾಗಾಗಿ ದಾಂಪತ್ಯ ಜೀವನದಲ್ಲಿ ಯಶಸ್ವಿಯಾಗುವುದಿಲ್ಲ. ಈ ನಟಿಯರ ಮದುವೆಯ ನಂತರ ದಾಂಪತ್ಯ ಜೀವನದಲ್ಲಿ ಸಾಕಷ್ಟು ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ, ವೈವಾಹಿಕ ಜೀವನವು ಯಶಸ್ವಿಯಾಗುವುದಿಲ್ಲ ಎಂದಿದ್ದರು.

  ಸಮಂತಾ, ರಶ್ಮಿಕಾ, ಪೂಜಾ ಹೆಗ್ಡೆ ಕೆರಿಯರ್ ಅಂತ್ಯ!

  ಸಮಂತಾ, ರಶ್ಮಿಕಾ, ಪೂಜಾ ಹೆಗ್ಡೆ ಕೆರಿಯರ್ ಅಂತ್ಯ!

  ಮದುವೆ ಬಗ್ಗೆ ಮಾತ್ರವಲ್ಲ ಸ್ಟಾರ್ ನಟಿಯರ ಸಿನಿಮಾ ಜೀವನ ಅಂತ್ಯದ ಬಗ್ಗೆಯೂ ಮಾತನಾಡಿದ್ದಾರೆ. ಸಮಂತಾ ಋತ್ ಪ್ರಭು, ಪೂಜಾ ಹೆಗ್ಡೆ, ರಶ್ಮಿಕಾ ಮಂದಣ್ಣ ಮತ್ತು ನಯನತಾರಾ ಅವರ ವೃತ್ತಿ ಜೀವನ 2024ರಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಆದರೆ ಇದು ಕೇವಲ ಜೋತಿಷಿ ನುಡಿದ ಭವಿಷ್ಯವೇ ಹೊರತು ನಿಜವಲ್ಲ.

  ಜೂನ್ 09 ನಯನತಾರ, ವಿಘ್ನೇಶ್ ಮದುವೆ!

  ಜೂನ್ 09 ನಯನತಾರ, ವಿಘ್ನೇಶ್ ಮದುವೆ!

  ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆ ಹೊಸ ದಿನಾಂಕದ ನಿಗದಿ ಆಗಿದೆ. ಅದು ಹೆಚ್ಚು ದಿನ ದೂರ ಇಲ್ಲ. ಮುಂದಿನ ತಿಂಗಳೇ ಈ ಜೋಡಿ ಮದುವೆ ಆಗಲು ಸಜ್ಜಾಗತಿ. ಮುಂದಿನ ತಿಂಗಳು ಮದುವೆಯಾಗಲು ಸಿದ್ಧರಾಗಿದ್ದಾರೆ. ಮೂಲಗಳ ಪ್ರಕಾರ ಜೂನ್ 9, 2022 ಈ ಜೋಡಿ ಮದುವೆ ಆಗಲಿದೆ. ಈಗಾಗಲೇ ಮದುವೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

  English summary
  Astrologer Predictions About Nayanthara And Vignesh Shivan Marriage, Nayanathara has very less Gurubala, Know More Details
  Wednesday, May 11, 2022, 14:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X