For Quick Alerts
  ALLOW NOTIFICATIONS  
  For Daily Alerts

  ಕೇಳ್ರಪ್ಪೋ ಕೇಳಿ.. 'ಬಾಹುಬಲಿ-2' ಚಿತ್ರದ ಕರ್ನಾಟಕ ವಿತರಣಾ ಹಕ್ಕು ಬಿಕರಿ ಆಗಿಲ್ಲ.!

  By ಒನ್ಇಂಡಿಯಾ ಕನ್ನಡ ವಾರ್ತೆ
  |

  ಅಚ್ಚರಿ ಪಡುವ ಸುದ್ದಿ ಅಂದ್ರೆ ಇದೇ ನೋಡಿ... ರಾಷ್ಟ್ರ ಮಟ್ಟದಲ್ಲಿ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಮಾಡಿರುವ 'ಬಾಹುಬಲಿ-2' ಚಿತ್ರ ಬಿಡುಗಡೆ ಆಗಲು ಕೆಲವೇ ದಿನಗಳು ಬಾಕಿ ಉಳಿದಿದ್ದರೂ, ಕರ್ನಾಟಕದಲ್ಲಿ 'ಬಾಹುಬಲಿ-2' ಸಿನಿಮಾದ ವಿತರಣೆ ಹಕ್ಕು ಇನ್ನೂ ಬಿಕರಿ ಆಗಿಲ್ಲ.!

  ಕಾವೇರಿ ಹೋರಾಟದ ಸಂದರ್ಭದಲ್ಲಿ ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿರುವ 'ಬಾಹುಬಲಿ' ಚಿತ್ರದ ಕಟ್ಟಪ್ಪ ಪಾತ್ರಧಾರಿ ಸತ್ಯರಾಜ್ ಬಹಿರಂಗವಾಗಿ ಕ್ಷಮೆ ಕೇಳುವವರೆಗೂ, 'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕದಲ್ಲಿ ಬಿಡುಗಡೆ ಭಾಗ್ಯ ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಘೋಷಿಸಿವೆ.[ಕಟ್ಟಪ್ಪನ ಮೇಲೆ ಕೋಪ: ಕನ್ನಡಿಗರಿಂದ 'ಬಾಹುಬಲಿ-1' ಮರುಪ್ರದರ್ಶನ ರದ್ದು]

  ಇದರ ಮಧ್ಯೆ 'ಬಾಹುಬಲಿ-2' ಚಿತ್ರದ ಕರ್ನಾಟಕ ವಿತರಣೆಗೆ ನಿರ್ಮಾಪಕರು ದೊಡ್ಡ ಮೊತ್ತ ಕೇಳಿರುವುದರಿಂದ, ಕರುನಾಡಲ್ಲಿ 'ಬಾಹುಬಲಿ-2' ಸಿನಿಮಾದ ವಿತರಣೆ ಹಕ್ಕು ಇನ್ನೂ ಸೇಲ್ ಆಗಿಲ್ಲ. ಮುಂದೆ ಓದಿ....

  ಪೈಪೋಟಿಯಲ್ಲಿ ಇರುವುದು ಬೆರಳೆಣಿಕೆಯ ಮಂದಿ

  ಪೈಪೋಟಿಯಲ್ಲಿ ಇರುವುದು ಬೆರಳೆಣಿಕೆಯ ಮಂದಿ

  ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರವನ್ನ ವಿತರಣೆ ಮಾಡಲು ಲಹರಿ ಸಂಸ್ಥೆ ಸೇರಿದಂತೆ ಬೆರಳೆಣಿಕೆಯಷ್ಟು ಮಂದಿ ಮಾತ್ರ ಪೈಪೋಟಿಯಲ್ಲಿ ಇದ್ದಾರೆ.[ಸುದೀಪ್ ಚಿತ್ರಗಳನ್ನ ಬ್ಯಾನ್ ಮಾಡಿ: ಕನ್ನಡಿಗರಿಗೆ 'ಟ್ರೋಲ್ ಟಾಲಿವುಡ್' ಲೇವಡಿ.!]

  ಹೆಚ್ಚು ಮೊತ್ತ ಡಿಮ್ಯಾಂಡ್

  ಹೆಚ್ಚು ಮೊತ್ತ ಡಿಮ್ಯಾಂಡ್

  ಬಹುನಿರೀಕ್ಷೆ ಮೂಡಿಸಿರುವ 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಮಾಪಕರು ಬರೋಬ್ಬರಿ 40 ಕೋಟಿ ರೂಪಾಯಿ ಕೇಳುತ್ತಿದ್ದಾರಂತೆ. ಅಷ್ಟು ದೊಡ್ಡ ಮೊತ್ತವನ್ನು ಕೊಟ್ಟು 'ಬಾಹುಬಲಿ-2' ಚಿತ್ರವನ್ನ ಕರ್ನಾಟಕಕ್ಕೆ ತರಲು ಇಲ್ಲಿನ ವಿತರಕರು ರೆಡಿ ಇಲ್ಲ.['ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕ ಮಾತ್ರವಲ್ಲ, ತಮಿಳುನಾಡಿನಲ್ಲೂ ಕಂಟಕ!]

  ವಿತರಕರು ಕೊಂಡುಕೊಳ್ಳಲಿಲ್ಲ ಅಂದ್ರೆ.?

  ವಿತರಕರು ಕೊಂಡುಕೊಳ್ಳಲಿಲ್ಲ ಅಂದ್ರೆ.?

  ನಿರ್ಮಾಪಕರು-ವಿತರಕರ ಮಧ್ಯೆ ವ್ಯಾಪಾರ ಕುದುರಲಿಲ್ಲ ಅಂದ್ರೆ, ಸ್ವತಃ ನಿರ್ಮಾಪಕರೇ (ಶೋಭು ಯರ್ಲಾಗಡ್ಡ, ಪ್ರಸಾದ್ ದೇವಿನೇನಿ) 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡುತ್ತಾರಂತೆ.

  ರಾಜಮೌಳಿಗೆ ಬೇಸರ

  ರಾಜಮೌಳಿಗೆ ಬೇಸರ

  ಒಂದ್ಕಡೆ ಕರ್ನಾಟಕದಲ್ಲಿ ನಟ ಸತ್ಯರಾಜ್ ವಿರುದ್ಧ ಆಕ್ರೋಶ. ಇನ್ನೊಂದ್ಕಡೆ ಕರ್ನಾಟಕದಲ್ಲಿ ಸೇಲ್ ಆಗದ ವಿತರಣೆ ಹಕ್ಕು. ಈ ಎರಡು ಕಾರಣಗಳಿಂದ ನಿರ್ದೇಶಕ ಎಸ್.ಎಸ್.ರಾಜಮೌಳಿ ಬೇಸರಗೊಂಡಿದ್ದಾರಂತೆ.['ಕಟ್ಟಪ್ಪನ ವಿವಾದ'ದ ಬಗ್ಗೆ ರಾಜಮೌಳಿ ಹೇಳಿದ್ದೇನು?]

  ಕ್ಷಮೆ ಕೇಳದ ಹೊರತು ಬಿಡುಗಡೆ ಮಾಡಲು ಬಿಡುವುದಿಲ್ಲ.!

  ಕ್ಷಮೆ ಕೇಳದ ಹೊರತು ಬಿಡುಗಡೆ ಮಾಡಲು ಬಿಡುವುದಿಲ್ಲ.!

  ನಟ ಸತ್ಯರಾಜ್ ಕ್ಷಮೆ ಕೇಳುವವರೆಗೂ 'ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಬಿಡುವುದಿಲ್ಲ ಅಂತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಹೇಳುತ್ತಾರೆ.

  ಮುಂದೆ ಏನಾಗುತ್ತೋ.?

  ಮುಂದೆ ಏನಾಗುತ್ತೋ.?

  ಈ ಮಧ್ಯೆ 'ಬಾಹುಬಲಿ-2' ಚಿತ್ರವನ್ನ ಕನ್ನಡಕ್ಕೆ ಡಬ್ ಮಾಡಲು ಕೆಲವರು ಮುಂದೆ ಬಂದಿದ್ದಾರಂತೆ. 'ಬಾಹುಬಲಿ-2' ಕನ್ನಡಕ್ಕೆ ಡಬ್ ಆಗುತ್ತಾ.? ಸತ್ಯರಾಜ್ ಕ್ಷಮೆ ಕೇಳುತ್ತಾರಾ.? 'ಬಾಹುಬಲಿ-2' ಕರ್ನಾಟಕದಲ್ಲಿ ರಿಲೀಸ್ ಆಗುತ್ತಾ.? ಈ ಎಲ್ಲ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರ ಇಲ್ಲ.

  English summary
  According to the latest buzz, Telugu Film 'Baahubali-2' distribution rights for Karnataka is not yet sold.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X