For Quick Alerts
  ALLOW NOTIFICATIONS  
  For Daily Alerts

  Kranti on OTT : ಚಾಲೆಂಜಿಂಗ್ ಸ್ಟಾರ್‌ ದರ್ಶನ್ 'ಕ್ರಾಂತಿ' ಓಟಿಟಿ ರಿಲೀಸ್ ಯಾವಾಗ? ಎಲ್ಲಿ?

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಬಹುಕೋಟಿ ವೆಚ್ಚದಲ್ಲಿ ಈ ಮಾಸ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣ ಆಗಿದೆ. ಈಗಾಗಲೇ ಚಿತ್ರದ ಸಾಂಗ್ಸ್ ರಿಲೀಸ್ ಆಗಿ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದೀಗ ಸಿನಿಮಾ ಓಟಿಟಿ ಸ್ಟ್ರೀಮಿಂಗ್ ಬಗ್ಗೆಯೂ ಸುಳಿವು ಸಿಕ್ಕಿದೆ.

  ಮೊದಲೆಲ್ಲಾ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಂಡ ನಂತರ ಟಿವಿಯಲ್ಲಿ ಪ್ರಸಾರ ಆಗುತ್ತಿತ್ತು. ಈಗ ಟಿವಿಗೂ ಮೊದಲು ಡಿಜಿಟಲ್ ಫ್ಲಾಟ್‌ಫಾರ್ಮ್‌ಗಳಲ್ಲಿ ಸಿನಿಮಾ ಎಂಟ್ರಿ ಕೊಡುತ್ತದೆ. ಓಟಿಟಿ ಚಂದಾದಾರರು ತಮಗೆ ಇಷ್ಟವಾದ ಸಮಯದಲ್ಲಿ ಸಿನಿಮಾ ನೋಡಬಹುದು. ಯಾವುದೇ ಸಿನಿಮಾ ಆದರೆ ಥಿಯೇಟರ್‌ನಲ್ಲಿ ರಿಲೀಸ್ ಆದ ಒಂದೂವರೆ ತಿಂಗಳ ನಂತರ ಓಟಿಟಿಗೆ ಬರುತ್ತದೆ. 'ಕ್ರಾಂತಿ' ಸಿನಿಮಾ ಎಲ್ಲಿ ಸ್ಟ್ರೀಮಿಂಗ್ ಆಗುತ್ತದೆ ಎನ್ಉವ ಕುತೂಹಲ ಅಭಿಮಾನಿಗಳಲ್ಲಿದೆ.

  ಎಲ್ರೂ ಅಭ್ಯಾಸ ಮಾಡ್ತಾರೆ ಆದ್ರೆ ದರ್ಶನ್ ಅಭ್ಯಾಸ ಮಾಡದೇ ಉತ್ತಮವಾಗಿ ಕುಣಿತಾರೆ: ನಿಮಿಕಾ ರತ್ನಾಕರ್!ಎಲ್ರೂ ಅಭ್ಯಾಸ ಮಾಡ್ತಾರೆ ಆದ್ರೆ ದರ್ಶನ್ ಅಭ್ಯಾಸ ಮಾಡದೇ ಉತ್ತಮವಾಗಿ ಕುಣಿತಾರೆ: ನಿಮಿಕಾ ರತ್ನಾಕರ್!

  'ರಾಬರ್ಟ್' ಸಿನಿಮಾ ನಂತರ ದರ್ಶನ್ ನಟಿಸಿರುವ ಮತ್ತೊಂದು ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ಕ್ರಾಂತಿ'. ರಚಿತಾ ರಾಮ್, ಉಮಾಶ್ರೀ, ಕ್ರೇಜಿಸ್ಟಾರ್ ರವಿಚಂದ್ರನ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಭಾರೀ ತಾರಾಗಣ ಚಿತ್ರದಲ್ಲಿದೆ.

  ಪ್ರೈಮ್ ವಿಡಿಯೋಗೆ 'ಕ್ರಾಂತಿ'

  ಪ್ರೈಮ್ ವಿಡಿಯೋಗೆ 'ಕ್ರಾಂತಿ'

  'ಕ್ರಾಂತಿ' ಸಿನಿಮಾ ಪ್ರೈಂ ವಿಡಿಯೋದಲ್ಲಿ ಸ್ಟ್ರೀಮಿಂಗ್ ಆಗುವ ಸುಳಿವು ಸಿಕ್ತಿದೆ. ಈಗಾಗಲೇ ಭಾರಿ ಮೊತ್ತಕ್ಕೆ ಸಿನಿಮಾ ಡಿಜಿಟಲ್ ರೈಟ್ಸ್ ಮಾರಾಟ ಆಗಿದೆ ಎನ್ನಲಾಗ್ತಿದೆ. 5 ಭಾಷೆಗಳಲ್ಲಿ ಸಿನಿಮಾ ತೆರೆಗೆ ಬರ್ತಿದ್ದು, ಎಲ್ಲಾ ಭಾಷೆಗಳ ಓಟಿಟಿ ರೈಟ್ಸ್ ಅಮೇಜಾನ್ ಪ್ರೈಂಗೆ ಬಿಕರಿಯಾಗಿದೆ ಎನ್ನಲಾಗುತ್ತಿದೆ. ಈ ಹಿಂದೆ 'ಯಜಮಾನ' ಸಿನಿಮಾ ನಿರ್ಮಿಸಿದ್ದ ಅದೇ ತಂಡ ಈ ಚಿತ್ರಕ್ಕೂ ಕೆಲಸ ಮಾಡಿದೆ. ಆ ಸಿನಿಮಾ ಕೂಡ ಪ್ರೈಮ್‌ನಲ್ಲಿ ಪ್ರಸಾರ ಆಗಿತ್ತು.

  ಓಟಿಟಿಯಲ್ಲಿ 'ಕ್ರಾಂತಿ' ಯಾವಾಗ?

  ಓಟಿಟಿಯಲ್ಲಿ 'ಕ್ರಾಂತಿ' ಯಾವಾಗ?

  ಒಂದಷ್ಟು ಷರತ್ತುಗಳನ್ನು ವಿಧಿಸಿ ಓಟಿಟಿ ಸಂಸ್ಥೆಗಳು ಸಿನಿಮಾ ಸ್ಟ್ರೀಮಿಂಗ್ ರೈಟ್ಸ್ ಕೊಂಡುಕೊಳ್ಳುತ್ತಾರೆ. ಅದರಲ್ಲೂ ಸಿನಿಮಾ ರಿಲೀಸ್ ಆದ ಎಷ್ಟು ದಿನಕ್ಕೆ ಡಿಜಿಟಲ್ ಫ್ಲಾಟ್‌ಫಾರ್ಮ್‌ಗೆ ಹಾಕಬೇಕು ಎನ್ನುವುದು ಮೊದಲೇ ಒಪ್ಪಂದ ಆಗಿರುತ್ತದೆ. ಸಾಮಾನ್ಯವಾಗಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ 7 ವಾರಗಳ ನಂತರ ಓಟಿಟಿಗೆ ಬರುತ್ತದೆ. ಇತ್ತೀಚೆಗೆ 'ಕಾಂತಾರ' ಸಿನಿಮಾ ಮಾತ್ರ 50 ದಿನಗಳ ನಂತರವೂ ಭರ್ಜರಿ ಪ್ರದರ್ಶನ ಕಂಡಿತ್ತು. ಹಾಗಾಗಿ ಕೊಂಚ ತಡವಾಗಿ ಪ್ರೈಂಗೆ ಬಂದಿತ್ತು. ಮಾರ್ಚ್ ಕೊನೆ ವಾರದ ವೇಳೆಗೆ ಆನ್‌ಲೈನ್‌ನಲ್ಲಿ 'ಕ್ರಾಂತಿ' ಸಿನಿಮಾ ವೀಕ್ಷಣೆಗೆ ಸಿಗಲಿದೆ.

  ಜನವರಿ 7ಕ್ಕೆ ಟ್ರೈಲರ್

  ಜನವರಿ 7ಕ್ಕೆ ಟ್ರೈಲರ್

  ರಾಜ್ಯದ 3 ಜಿಲ್ಲೆಗಳಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಚಿತ್ರದ 3 ಹಾಡುಗಳನ್ನು ಅಭಿಮಾನಿಗಳಿಂದಲೇ ರಿಲೀಸ್ ಮಾಡಿಸಲಾಗಿತ್ತು. ಮೈಸೂರಿನಲ್ಲಿ ಚಿತ್ರದ ಥೀಮ್ ಸಾಂಗ್ 'ಧರಣಿ' ಬಿಡುಗಡೆ ಆಗಿತ್ತು. ಹೊಸಪೇಟೆಯಲ್ಲಿ 'ಬೊಂಬೆ ಬೊಂಬೆ' ಮೆಲೋಡಿ ಸಾಂಗ್ ಲೋಕಾರ್ಪಣೆ ಆಗಿದ್ದರೆ ಹುಬ್ಬಳ್ಳಿಯಲ್ಲಿ ಐಟಂ ಸಾಂಗ್ 'ಪದ್ಮಾವತಿ' ಸದ್ದು ಮಾಡಿತ್ತು. ಇದೇ ಶನಿವಾರ ಬೆಂಗಳೂರಿನಲ್ಲಿ 'ಕ್ರಾಂತಿ' ಆಕ್ಷನ್ ಪ್ಯಾಕ್ಟ್ಡ್ ಟ್ರೈಲರ್ ರಿಲೀಸ್ ಆಗಲಿದೆ. ದೊಡ್ಡಮಟ್ಟದಲ್ಲಿ ಈವೆಂಟ್ ನಡೆಯಲಿದೆ.

  ಜನವರಿ 26ಕ್ಕೆ ಸಿನಿಮಾ ರಿಲೀಸ್

  ಜನವರಿ 26ಕ್ಕೆ ಸಿನಿಮಾ ರಿಲೀಸ್

  ಜನವರಿ 26ಕ್ಕೆ ಗಣರಾಜ್ಯೋತ್ಸವ ಸಂಭ್ರಮದಲ್ಲೇ 'ಕ್ರಾಂತಿ' ಸಿನಿಮಾ ಥಿಯೇಟರ್‌ಗಳಲ್ಲಿ ರಿಲೀಸ್ ಆಗಲಿದೆ. ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ ದೊಡ್ಡಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಚಿತ್ರದಲ್ಲಿ ಸರ್ಕಾರಿ ಕನ್ನಡ ಶಾಲೆಗಳ ಕುರಿತು ಮಾತನಾಡಿದ್ದಾರೆ. ದರ್ಶನ್ 2 ಶೇಡ್‌ಗಳಿರುವ ಪಾತ್ರದಲ್ಲಿ ಮಿಂಚಿದ್ದಾರೆ. ಶೈಲಜಾ ನಾಗ್, ಬಿ. ಸುರೇ ಶ ದಂಪತಿ ಸಿನಿಮಾ ನಿರ್ಮಿಸಿದ್ದಾರೆ.

  English summary
  Challenging Star Darshan Starrer Kranti OTT Release Date, OTT Platform, Time, and more. Pan-India movie, Kranti, is set to release In theatres on Republic Day 2023. know more.
  Monday, January 2, 2023, 22:56
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X