For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಸ್ಟಾರ್ ನಟನ ಮಗಳ ಜೊತೆ ಕೆಎಲ್ ರಾಹುಲ್ ಡೇಟಿಂಗ್.?

  |

  ಕ್ರಿಕೆಟರ್ ಕೆಎಲ್ ರಾಹುಲ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ಹೋಗಿದ್ದಾರೆ. ಆದರೆ ಈ ಕಡೆ ಬಾಲಿವುಡ್ ನಲ್ಲಿ ಮಾತ್ರ ಕೆಎಲ್ ರಾಹುಲ್ ಗರ್ಲ್ ಫ್ರೆಂಡ್ ಇವರೇ ಎಂದು ಚರ್ಚೆಯಾಗ್ತಿದೆ.

  ಕೆಎಲ್ ರಾಹುಲ್ ಅವರ ಹೆಸರು ಈ ಹಿಂದೆ ಕೂಡ ಎರಡ್ಮೂರು ನಟಿಯರ ಜೊತೆ ತಳುಕುಹಾಕಿಕೊಂಡಿತ್ತು. ಆದರೆ, ಅದ್ಯಾವುದು ಅಧಿಕೃತವಾಗಿರಲಿಲ್ಲ. ಇದೀಗ, ಬಾಲಿವುಡ್ ನಟ ಸುನೀಲ್ ಶೆಟ್ಟಿ ಮಗಳ ಜೊತೆ ರಾಹುಲ್ ಹೆಸರು ಅಂಟಿಕೊಂಡಿದೆ.

  ಸುನೀಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಡೇಟಿಂಗ್ ಮಾಡ್ತಿದ್ದಾರೆ ಎಂಬ ಸುದ್ದಿ ಈಗ ಮಾಯಾನಗರಿಯಲ್ಲಿ ಸದ್ದು ಮಾಡ್ತಿದೆ. ಕಳೆದ ಫೆಬ್ರವರಿಯಿಂದ ಇಬ್ಬರು ಡೇಟ್ ಮಾಡ್ತಿದ್ದಾರೆ, ಬಟ್ ಇದನ್ನ ಗೌಪ್ಯವಾಗಿಟ್ಟು ಕಾಪಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ.

  ಐರಾವತ ನಟಿಯ ಬೇಡಿಕೆ ತಿರಸ್ಕರಿಸಿದ್ರಾ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ.?

  ''ಕಾಮನ್ ಫ್ರೆಂಡ್ ಮೂಲಕ ಇಬ್ಬರಿಗೆ ಪರಿಚಯ ಬೆಳೆದು, ಪರಸ್ಪರ ಭೇಟಿಯಾಗಿ ಸುತ್ತಾಡುತ್ತಾರೆ. ಆದ್ರೆ ಬಹಿರಂಗವಾಗಿ ಎಲ್ಲೂ ಕಾಣಿಸಿಕೊಳ್ಳಲ್ಲ'' ಎಂದು ಬಾಲಿವುಡ್ ಮಾಧ್ಯಮಗಳು ವರದಿ ಮಾಡಿವೆ.

  ಅಂದ್ಹಾಗೆ, ಸುನೀಲ್ ಶೆಟ್ಟಿ ಮಗಳು ಅತಿಯಾ ಶೆಟ್ಟಿ 2015 ರಲ್ಲಿ ಹೀರೋ ಸಿನಿಮಾ ಮೂಲಕ ಬಾಲಿವುಡ್ ಗೆ ಪ್ರವೇಶ ಮಾಡಿದ್ದರು. ಆಮೇಲೆ ಯಾವ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.

  ಈ ಕಡೆ ಕೆಎಲ್ ರಾಹುಲ್ ಜೊತೆ ಈ ಹಿಂದೆ ಕೂಡ ಕೆಲವು ನಟಿಯರ ಹೆಸರು ಅಂಟಿಕೊಂಡಿತ್ತು. ನಿಧಿ ಅಗರ್ ವಾಲ್ ಜೊತೆ ರಾಹುಲ್ ಡೇಟ್ ಮಾಡ್ತಿದ್ದಾರೆ ಎನ್ನಲಾಯಿತು. ಈ ಸುದ್ದಿಯನ್ನ ನಿಧಿ ತಳ್ಳಿ ಹಾಕಿದ್ದರು. 'ನಾವಿಬ್ಬರು ಒಳ್ಳೆಯ ಸ್ನೇಹಿತರು ಅಷ್ಟೇ' ಎಂದು ನಿರಾಕರಿಸಿದ್ದರು. ಅದಾದ ಬಳಿಕ ಸೋನಾಲ್ ಚಹಾಲ್ ಹೆಸರು ಕೂಡ ರಾಹುಲ್ ಜೊತೆ ಕೇಳಿ ಬಂತು. ಈಕೆ ಕೂಡ ಇದು ಸುಳ್ಳು ಎಂದಿದ್ದರು.

  English summary
  Is Indian Cricketer Kl Rahul dating with bollywood actor sunil shetty daughter athiya shetty?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X