Don't Miss!
- Finance
Jio, Airtel 5G: ಕಳೆದ 4 ತಿಂಗಳಲ್ಲಿ ಎಷ್ಟು ಗ್ರಾಹಕರನ್ನು ಆಕರ್ಷಿಸಿವೆ ಟೆಲಿಕಾಂ ಕಂಪನಿಗಳು? ಇಲ್ಲಿದೆ ಮಾಹಿತಿ
- News
Jio, Airtel 5G: ಕೇವಲ 4 ತಿಂಗಳಲ್ಲಿ ಎಷ್ಟು ಕೋಟಿ ಗ್ರಾಹಕರು ಗೊತ್ತೇ? ದಾಖಲೆ ಅಂಕಿಅಂಶ- ಮಾಹಿತಿ ಇಲ್ಲಿದೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಉಪೇಂದ್ರ ಜೊತೆ ಮತ್ತೆ ಬಣ್ಣಹಚ್ಚಲಿರುವ ದೀಪಿಕಾ ಪಡುಕೋಣೆ?
ಐಶ್ವರ್ಯ ಚಿತ್ರದಲ್ಲಿ ದೀಪಿಕಾ ರಿಯಲ್ ಸ್ಟಾರ್ ಉಪೇಂದ್ರಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾಗಿತ್ತು.
ಆ ನಂತರ ಕನ್ನಡದ ಬಹುತೇಕ ಆಫರ್ ಗಳಿಗೆ ನೋ ಎಂದಿದ್ದ ದೀಪಿಕಾ ಈಗ ಮತ್ತೆ ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಉಪೇಂದ್ರ 2 ಚಿತ್ರಕ್ಕಾಗಿ ಖುದ್ದು ಉಪೇಂದ್ರ ಅವರೇ ದೀಪಿಕಾಳನ್ನು ಸಂಪರ್ಕಿಸಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ.
ತನ್ನ ನಿರ್ದೇಶನದ ಚಿತ್ರಕ್ಕೆ ಬಹುತೇಕ ಹೆಸರಾಂತ ನಟಿಯರನ್ನೇ ಆಯ್ಕೆ ಮಾಡಿಕೊಳ್ಳುವುದು ಉಪೇಂದ್ರ ಅವರ ವರ್ಕಿಂಗ್ ಸ್ಟೈಲ್.
ದೀಪಿಕಾ ಪಡುಕೋಣೆ ಅವರನ್ನು ಆಯ್ಕೆ ಮಾಡಬೇಕಾದ ಮೊದಲು ಕಾಡುವ ಪ್ರಶ್ತ್ನೆ ಸಂಭಾವನೆ. ಹಿಂದಿ ಚಿತ್ರವೊಂದಕ್ಕೆ ಸುಮಾರು ನಾಲ್ಕರಿಂದ ಐದು ಕೋಟಿ ತೆಗೆದುಕೊಳ್ಳುವ ದೀಪಿಕಾಗೆ ಅಷ್ಟು ಸಂಭಾವನೆ ಕೊಡಲು ನಮ್ಮ ನಿರ್ಮಾಪಕರಿಗೆ ಸಾಧ್ಯವೇ ಎನ್ನುವುದು.
ಈ ಸುದ್ದಿಗೆ ಇಂಬು ಕೊಡುವಂತೆ ಉಪೇಂದ್ರ ಕಾದು ನೋಡಿ, ಇನ್ನೂ ಸ್ಕ್ರಿಪ್ಟ್ ಕೆಲಸ ಮುಗಿದಿಲ್ಲ ಎಂದಿದ್ದಾರೆ.
ಈ ಹಿಂದೆ ಉಪೇಂದ್ರ ನಿರ್ದೇಶಿಸಿದ್ದ 'A' ಚಿತ್ರದಲ್ಲಿ ಚಾಂದನಿ, ಉಪೇಂದ್ರ ಚಿತ್ರದಲ್ಲಿ ರವೀನಾ ಟಂಡನ್, ದಾಮಿನಿ ಮತ್ತು ಸೂಪರ್ ಚಿತ್ರದಲ್ಲಿ ನಯನ್ ತಾರಾ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಉಪೇಂದ್ರ ತನ್ನ ಹುಟ್ಟುಹಬ್ಬದ ದಿನದಂದು 'ಉಪೇಂದ್ರ ಪ್ರೊಡಕ್ಷನ್ಸ್' ಎನ್ನುವ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು. ಪ್ರಿಯಾಂಕಾ ಉಪೇಂದ್ರ ನಿರ್ಮಿಸಲಿರುವ ಚಿತ್ರವೊಂದಕ್ಕೆ ಉಪ್ಪಿ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನುವ ಸುದ್ದಿ ಕೂಡಾ ಹೊರಬಿದ್ದಿತ್ತು.
ಈಗಾಗಲೆ ಈ ಚಿತ್ರದ ಪೋಸ್ಟರ್ ಬಿಡುಗಡೆಯಾಗಿದ್ದು ಅದರಲ್ಲಿ ಹಲವಾರು ಚಿಹ್ನೆಗಳ ಮೂಲಕ ಉಪೇಂದ್ರ ಗಮನಸೆಳೆದಿದ್ದಾರೆ. ಅವರ ಅಭಿಮಾನಿಗಳು ಇದನ್ನು 'ಉಪೇಂದ್ರ 2' ಇರಬಹುದು ಎಂಬು ಭಾವಿಸಿದ್ದಾರೆ.
ಹೊಸ ಚಿತ್ರ(ಉಪೇಂದ್ರ 2?)ದ ಪೋಸ್ಟರ್ ಅನ್ನು ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ಮೂಲಕ ಬಿಡುಗಡೆ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.