Don't Miss!
- Lifestyle
ಒಣಕೆಮ್ಮಿಗೆ ಕಾರಣವೇನು? ಯಾವ ಮನೆಮದ್ದು ಒಳ್ಳೆಯದು?
- News
ಮುಂದಿನ 5-6 ತಿಂಗಳಲ್ಲಿ ಸಾವಿರಾರು ಗಂಡಂದಿರ ಬಂಧನ: ಅಸ್ಸಾಂ ಸಿಎಂ
- Sports
IND vs AUS Test : ಫೆಬ್ರವರಿ 1 ರಂದು ಭಾರತಕ್ಕೆ ಆಸ್ಟ್ರೇಲಿಯಾ ತಂಡ : ಬೆಂಗಳೂರಿನಲ್ಲಿ ಅಭ್ಯಾಸ
- Technology
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- Automobiles
ಭಾರತದಲ್ಲಿ ಹೊಸ ಅಧ್ಯಾಯ ಬರೆಯಲು ಸಿದ್ಧವಾಗಿವೆ ಮಾರುತಿ ಸುಜುಕಿ ಕಾರುಗಳು
- Finance
ಅದಾನಿ ಗ್ರೂಪ್ ವಿರುದ್ಧ ಆರೋಪ: 'ನಾವು ಜಾಗರೂಕರಾಗಿದ್ದೇವೆ' ಎಂದ ಭಾರತದ ಉನ್ನತ ಬ್ಯಾಂಕ್ಗಳು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಶೀಘ್ರದಲ್ಲೇ ಮದುವೆ ಸುದ್ದಿ ಕೊಡುತ್ತಾರಾ ನಟಿ ಚಂದನಾ ಅನಂತಕೃಷ್ಣ? ಹುಡುಗ ಯಾರು?
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಜೋಡಿ ಹಸೆಮಣೆ ಏರುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಬಣ್ಣದಲೋಕದಲ್ಲಿ ಸಾಕಷ್ಟು ಜನ ಕಲಾವಿದರು ನಿಜ ಜೀವನದಲ್ಲೂ ಒಂದಾಗುತ್ತಿದ್ದಾರೆ. ಸಾಲು ಸಾಲು ಶುಭ ಸಮಾರಂಭಗಳು ಚಿತ್ರರಂಗದಲ್ಲಿ ನಡೀತಿದೆ.
ಆ ಸಾಲಿಗೆ ಈಗ ಮತ್ತೊಂದು ಜೋಡಿ ಸೇರ್ಪಡೆಯಾಗಲು ಸಜ್ಜಾಗಿದೆ. ಮಿಲನಾ ನಾಗರಾಜ್-ಡಾರ್ಲಿಂಗ್ ಕೃಷ್ಣ, ಐಂದ್ರಿತಾ ರೈ-ದಿಗಂತ್, ಯಶ್-ರಾಧಿಕಾ ಪಂಡಿತ್ ಸೇರಿದಂತೆ ಹಲವರು ಸ್ಯಾಂಡಲ್‌ವುಡ್ ನಟ-ನಟಿಯರು ದಾಂಪತ್ಯ ಜೀವನವನ್ನು ಆರಂಭಿಸಿದ್ದಾರೆ.
ಪುಟ್ಟಕ್ಕನಿಗೆ
ಅವಮಾನ
ಮಾಡಿದ
ಮೇಷ್ಟ್ರ
ತಂದೆ,
ತಪ್ಪು
ಮಾಡಿದವರಿಗೆ
ಶಿಕ್ಷೆ
ನೀಡ್ತಾಳ
ಸಹನಾ?
ಈಗ ಮತ್ತೆರಡು ಜೋಡಿ ಈ ಸಾಲಿಗೆ ಸೇರಿಕೊಳ್ಳುವ ಸುದ್ದಿ ಪಕ್ಕಾ ಆಗ್ತಿದೆ. ಮೊನ್ನೆ ಮೊನ್ನೆಯಷ್ಟೇ ವಸಿಷ್ಠ ಸಿಂಹ-ಹರಿಪ್ರಿಯಾ ಉಂಗುರ ಬದಲಾಯಿಸಿಕೊಂಡಿದ್ದಾರೆ. ಮುಂದಿನ ಸರದಿ ನಟಿ ಚಂದನಾ ಅನಂತಕೃಷ್ಣ ಅವರದ್ದು ಎನ್ನಲಾಗ್ತಿದೆ.

ಬಹುಮುಖ ಪ್ರತಿಭೆ ಚಂದನಾ
ಕನ್ನಡ ಕಿರುತೆರೆಯಲ್ಲಿ 'ಚುಕ್ಕಿ' ಎಂದೇ ಖ್ಯಾತಿ ಪಡೆದಿರುವ ನಟಿ ಚಂದನಾ ಅನಂತಕೃಷ್ಣ ಈಗ ಮತ್ತೆ ಸುದ್ದಿಯಾಗಿದ್ದಾರೆ. ಸದಾ ಡಿಫರೆಂಟ್ ಆಗಿ ಅಭಿಮಾನಿಗಳ ಎದುರು ಬರುವ ಚಂದನಾ ಅನಂತಕೃಷ್ಣ, ಈ ಬಾರಿ ವೈಯಕ್ತಿಕ ಕಾರಣದಿಂದ ಅಭಿಮಾನಿಗಳ ಹುಬ್ಬೇರುವಂತೆ ಮಾಡಿದ್ದಾರೆ. ನಟಿ ಚಂದನಾ ಅನಂತಕೃಷ್ಣ ಅವರು ತಮ್ಮ ಒಂದೊಂದೇ ಕನಸುಗಳನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ಚಿಕ್ಕವಯಸ್ಸಿನಿಂದ ಕಂಡ ಕನಸನ್ನು ನನಸು ಮಾಡಿಕೊಳ್ಳುತ್ತಿದ್ದಾರೆ. ನಟಿಯಾಗಿ ಕಿರುತೆರೆಯಲ್ಲಿ ಮಿಂಚಿ, ರಿಯಾಲಿಟಿ ಶೋಗಳಲ್ಲೂ ಕಾಣಿಸಿಕೊಂಡು, ಬೆಳ್ಳಿ ಪರದೆ ಮೇಲೂ ಕಾಣಿಸಿಕೊಂಡರು. ಇದೀಗ ಶ್ರೀಮತಿಯಾಗಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಶ್ರೀಮತಿಯಾಗಲಿದ್ದಾರಾ ಚಂದನಾ..?
ಮೂಲತಃ ತುಮಕೂರಿನವರಾದ ಚಂದನಾ ಅನಂತಕೃಷ್ಣ ಅವರು ಬಿಕಾಂ ಓದಿದ್ದಾರೆ. 'ಜಾಲಿ ಬ್ಯಾಚುಲರ್ಸ್' ಎಂಬ ಸಿನಿಮಾದಲ್ಲಿ ನಟಿಸಿ ಬಾಲ್ಯ ಕನಸನ್ನು ನನಸು ಮಾಡಿಕೊಂಡ ಚಂದನಾ ಅನಂತಕೃಷ್ಣ ಅವರು ಬಹುಮುಖ ಪ್ರತಿಭೆ ಎಂದರೆ ಸುಳ್ಳಾಗುವುದಿಲ್ಲ. ರಂಗಭೂಮಿ ಕಲಾವಿದೆಯಾದ ಚಂದನಾ ಕಿರುತೆರೆಯಲ್ಲೂ ಮಿಂಚಿದವರು. ರಾಜಾ ರಾಣಿ, ಮುದ್ದು ಮಣಿಗಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಬಿಗ್ ಬಾಸ್ ಸೀಸನ್ 7ರಲ್ಲಿ ಸ್ಫರ್ಧಿಯಾಗಿದ್ದ ಚಂದನಾ ಅವರು ಸಂಗೀತ ನಿರ್ದೇಶಕ ವಾಸುಕಿ ವೈಭವ್ ಅವರ ಜೊತೆ ಹಸೆಮಣೆ ಏರುತ್ತಾರೆ ಎನ್ನುವ ಸುದ್ದಿ ವೈರಲ್ ಆಗ್ತಿದೆ.

ಬರ್ತ್‌ಡೇ ವಿಶ್ ಮಾಡಿ ಸುಳಿವು ಕೊಟ್ರಾ..?
ಅಕ್ಟೋಬರ್ ತಿಂಗಳಿನಲ್ಲಿ ದೀಪಾವಳಿ ಹಬ್ಬದ ವಿಶೇಷವಾಗಿ ಚಂದನಾ ಅನಂತಕೃಷ್ಣ ಹಾಗೂ ವಾಸುಕಿ ವೈಭವ್ ಇಬ್ಬರೂ ಫೋಟೋಶೂಟ್ ಮಾಡಿಸಿದ್ದರು. ಈ ಫೋಟೋವನ್ನು ಚಂದನಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿ ಹುಟ್ಟುಹಬ್ಬದ ಶುಭಾಷಯಗಳನ್ನು ತಿಳಿಸಿದ್ದರು. ಕಳೆದ ವಾರ ವಾಸುಕಿ ಅವರ ಹುಟ್ಟು ಹಬ್ಬಕ್ಕೆ ಮತ್ತದೇ ಫೋಟೋಶೂಟ್‌ನಲ್ಲಿ ತೆಗೆಸಿದ ಮತ್ತೊಂದು ಫೋಟೋವನ್ನು ಅಪ್ ಲೋಡ್ ಮಾಡಿ ವಿಶ್ ಮಾಡಿದ್ದಾರೆ. ಇದು ಈಗ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದೆ. ಇಬ್ಬರೂ ಎಂಗೇಜ್ ಮೆಂಟ್ ಮಾಡಿಕೊಂಡಿದ್ದೀರಾ ಎಂದು ಭಾವಿಸಿದ್ದೆ ಎಂದು ಕಮೆಂಟ್ ಒಂದು ಬಂದಿದೆ.

ಶೀಘ್ರದಲ್ಲೇ ಸಿಹಿಸುದ್ದಿ ಕೊಡುತ್ತಾರಾ?
ಆ ಪ್ರಕಾರವಾಗಿ ಚಂದನಾ ಅನಂತಕೃಷ್ಣ ಹಾಗೂ ವಾಸುಕಿ ವೈಭವ್ ಪ್ರೀತಿಯ ದೋಣಿಯಲ್ಲಿದ್ದಾರೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಇಬ್ಬರೂ ಶೀಘ್ರದಲ್ಲೇ ಸ್ಯಾಂಡಲ್‌ವುಡ್‌ಗೆ ಸಿಹಿ ಸುದ್ದಿ ನೀಡಿ ಹಸೆಮಣೆ ಏರುತ್ತಾರೆ ಎನ್ನಲಾಗುತ್ತಿದೆ. ವಸಿಷ್ಠ ಸಿಂಹ-ಹರಿಪ್ರಿಯಾ ಏನೋ ನಿಶ್ಚಿತಾರ್ಥ ಮಾಡಿಕೊಂಡು ಸಪ್ತಪದಿ ತುಳಿಯಲು ಗ್ರೀನ್ ಸಿಗ್ನಲ್ ಪಡೆದಿದ್ದಾರೆ. ಮುಂದೆ ಚಂದನಾ ಹಾಗೂ ವಾಸುಕಿ ವೈಭವ್ ಹಸೆಮಣೆ ಏರುವ ತಾರಾ ಜೋಡಿ ಆಗುತ್ತಾರಾ ಎನ್ನುವ ಕುತೂಹಲಕ್ಕೆ ಅವರೇ ತೆರೆ ಎಳೆಯಬೇಕಿದೆ.