»   » ಅಕ್ಟೋಬರ್ 25 ರಂದು ಪ್ರಜ್ವಲ್-ರಾಗಿಣಿ ಹಸೆಮಣೆ ಏರಲಿದ್ದಾರ?

ಅಕ್ಟೋಬರ್ 25 ರಂದು ಪ್ರಜ್ವಲ್-ರಾಗಿಣಿ ಹಸೆಮಣೆ ಏರಲಿದ್ದಾರ?

Posted By: ಸೋನು ಗೌಡ
Subscribe to Filmibeat Kannada

ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ ಹಾಗೂ ರಾಗಿಣಿ ಚಂದ್ರನ್ ಅವರ ಮದುವೆ ಸಮಾರಂಭ ಅಕ್ಟೋಬರ್ 25ರಂದು ನಡೆಯಲಿದೆ. ತಮ್ಮ ಬಾಲ್ಯದ ಗೆಳತಿ ಮಾಡೆಲ್ ರಾಗಿಣಿ ಚಂದ್ರನ್ ಅವರೊಂದಿಗೆ ಅಕ್ಟೋಬರ್ 25 ರಂದು ಹಸೆಮಣೆ ಏರಲಿದ್ದಾರೆ ಅಂತ 'ಅರ್ಜುನ' ಚಿತ್ರದ ನಿರ್ದೇಶಕ ಪಿ.ಸಿ ಶೇಖರ್ ಅವರು ಡೈನಾಮಿಕ್ ಪ್ರಿನ್ಸ್ ಮದುವೆ ರಹಸ್ಯ ಬಿಚ್ಚಿಟ್ಟಿದ್ದಾರೆ.

ನಿರ್ದೇಶಕ ಪಿ.ಸಿ ಶೇಖರ್ ಅವರು ಚಾಕಲೇಟು ಹೀರೋ ಪ್ರಜ್ವಲ್ ದೇವರಾಜ್ ಅವರಿಗೆ 'ಕಂಗ್ರಾಟ್ಸ್, ಹ್ಯಾಪಿ ಮ್ಯಾರೀಡ್ ಲೈಫ್, ನಿಮ್ಮ ಮುಂದಿನ ನೂತನ ಜೀವನಕ್ಕೆ ನಿಮಗೆ ಮತ್ತು ರಾಗಿಣಿ ಅವರಿಗೆ ನನ್ನ ಶುಭ ಹಾರೈಕೆಗಳು, 25ನೇ ತಾರೀಖಿನ ಆ ಸುಂದರ ಕ್ಷಣಕ್ಕಾಗಿ ಕಾಯುತ್ತಿದ್ದೇನೆ', ಎಂದು ತಮ್ಮ ಫೇಸ್ ಬುಕ್ಕಿನಲ್ಲಿ ಪ್ರಜ್ವಲ್ ಅವರ ನೂತನ ಜೀವನಕ್ಕೆ ಶುಭ ಹಾರೈಸಿದ್ದಾರೆ.

Dynamic Prince Prajwal Devaraj To Tie The Knot On October 25th

ಸೋ ನಿರ್ದೇಶಕರ ಅಡ್ವಾನ್ಸ್ ವಿಶ್ ನೋಡ್ತಾ ಇದ್ರೆ ಡೈನಾಮಿಕ್ ದೇವರಾಜ್ ದಂಪತಿಗಳ ಕುಡಿ ಇದೇ ತಿಂಗಳಲ್ಲಿ ಹಸೆಮಣೆ ಏರೋದು ಪಕ್ಕಾ ಎಂದಾಯ್ತು.['ರೀಲ್' ಹೀರೋ ಪ್ರಜ್ವಲ್ ದೇವರಾಜ್ 'ರಿಯಲ್' ಪ್ರೇಮ್ ಕಹಾನಿ]

ಈ ಮೊದಲು ಡೈನಾಮಿಕ್ ಸ್ಟಾರ್ ದೇವರಾಜ್ ಅವರು ತಮ್ಮ ಮಗನ ಮದುವೆಯ ಕಾರ್ಯಗಳು ಈಗಾಗಲೇ ನಡೆಯುತ್ತಿದೆ. ಅಕ್ಟೋಬರ್ ಮೂರನೇ ವಾರದಲ್ಲಿ ನಡೆಸುವ ಪ್ಲಾನ್ ಮಾಡುತ್ತಿದ್ದೇವೆ ಎಂದಿದ್ದರು.

Dynamic Prince Prajwal Devaraj To Tie The Knot On October 25th

ಇದೀಗ ಚಾಕಲೇಟು ಹೀರೋ ಪ್ರಜ್ವಲ್ ದೇವರಾಜ್ ಅವರು ತಮ್ಮ ಬಾಲ್ಯದ ಗೆಳತಿ ರಾಗಿಣಿ ಚಂದ್ರನ್ ಅವರೊಂದಿಗೆ ಮದುವೆಯಾಗುವ ಡೇಟ್ ಪಕ್ಕಾ ಆಗಿದ್ದು, ಅಕ್ಟೋಬರ್ 25 ರಂಧು ಡೈನಾಮಿಕ್ ಪ್ರಿನ್ಸ್ ಹಾಗೂ ರಾಗಿಣಿ ಚಂದ್ರನ್ ಅವರ ಅದ್ದೂರಿ ಮದುವೆಗೆ ಬೆಂಗಳೂರಿನ ಅರಮನೆ ಮೈದಾನ ಸಾಕ್ಷಿಯಾಗಲಿದೆ.

ಇನ್ನು ಮೊನ್ನೆ ಮೊನ್ನೆ ಡೈನಾಮಿಕ್ ಸ್ಟಾರ್ ದೇವರಾಜ್ ಫ್ಯಾಮಿಲಿ, ಪವರ್ ಸ್ಟಾರ್ ಪುನೀತ್ ಅವರ ಮನೆಗೆ ಭೇಟಿ ನೀಡಿದ್ದು, ಮೂಲಗಳು ಹೇಳುವ ಪ್ರಕಾರ ಪ್ರಜ್ವಲ್-ರಾಗಿಣಿ ಚಂದ್ರನ್ ಮದುವೆಯ ಆಮಂತ್ರಣ ಪತ್ರಿಕೆ ಪುನೀತ್ ಅವರಿಗೆ ನೀಡಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಅದೇನೇ ಇರಲಿ ಶಿವಣ್ಣ ಪುತ್ರಿ ನಿರುಪಮಾ-ದಿಲೀಪ್ ಮದುವೆಯ ನಂತರ ಇದೀಗ ಪ್ರಜ್ವಲ್-ರಾಗಿಣಿ ಚಂದ್ರನ್ ಅವರ ಮದುವೆಗೆ ಇಡೀ ಸ್ಯಾಂಡಲ್ ವುಡ್ ಸಾಕ್ಷಿಯಾಗಲಿದೆ.

English summary
Dynamic Prince aka Prajwal Devaraj to tie the knot on 25th of October. The news has been revealed by director PC Shekar who recently directed Arjuna for Prajwal Devaraj and his father Devaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada