»   » ಮದುವೆಯೆಂಬ ಹುಚ್ಚಿಗೆ ಬಿದ್ದರೆ 'ಕೋಬ್ರಾ' ವಿಜಯ್?

ಮದುವೆಯೆಂಬ ಹುಚ್ಚಿಗೆ ಬಿದ್ದರೆ 'ಕೋಬ್ರಾ' ವಿಜಯ್?

Posted By:
Subscribe to Filmibeat Kannada

'ಕರಿ ಚಿರತೆ', 'ಬ್ಲಾಕ್ ಕೋಬ್ರಾ', 'ಕನ್ನಡದ ಶಾರುಖ್ ಖಾನ್', 'ಕರ್ನಾಟಕದ ಬ್ರೂಸ್ ಲೀ' ಎಂಬಿತ್ಯಾದಿ ಹೆಸರಿನಿಂದ ಖ್ಯಾತಿ, ಹಣ ಗಳಿಸಿರುವ 'ದುನಿಯಾ' ವಿಜಯ್ ಅಸಲಿಗೆ ಎಷ್ಟು ಮದುವೆಯಾಗಿದ್ದಾರೆ? ಖಂಡಿತವಾಗಿಯೂ ಅವರು ಹಿಂದೂ ಆಗಿರುವುದರಿಂದ, ಹಿಂದೂ ಮದುವೆ ಕಾಯ್ದೆಯ ಪ್ರಕಾರ, ಹೆಂಡತಿ ಜೀವಂತ ಇರುವಾಗ ಓರ್ವ ವ್ಯಕ್ತಿ ಒಬ್ಬ ಮಹಿಳೆಯನ್ನು ಮಾತ್ರ ಮದುವೆಯಾಗಲು ಸಾಧ್ಯ.

ಹಾಗಿದ್ರೆ, ದುನಿಯಾ ವಿಜಯ್ ಎಷ್ಟು ಮದುವೆಗಳನ್ನಾಗಿ 'ದುನಿಯಾ' ಮಾಡಬೇಕೆಂದಿದ್ದಾರೆ? ಒಂದು, ಎರಡು, ಮೂರು ಅಥವಾ ನಾಲ್ಕಾ? ಯಾರಿಂದಲೂ ನಿಖರವಾದ ಉತ್ತರ ಸಿಗುವುದಿಲ್ಲ. ಇದಕ್ಕೆ ಉತ್ತರವನ್ನು ವಿಜಯ್ ಕುಮಾರ್ ಖಂಡಿತ ನೀಡಲಾರರು. ಆದರೆ, ಖಾಸಗಿ ವಾಹಿನಿಗೆ ಅವರ ಪತ್ನಿ ಶ್ರೀಮತಿ ನಾಗರತ್ನ ಅವರು ನೀಡಿರುವ ಸಂದರ್ಶನದಲ್ಲಿ ಅನೇಕ ಅಚ್ಚರಿಯ ಸಂಗತಿಗಳು ಹೊರಬಿದ್ದಿವೆ.

ನಾಗರತ್ನ ಅವರ ಪ್ರಕಾರ, ವಿಜಿ ಅಲಿಯಾಸ್ ವಿಜಯ್ ಅವರು ತಮಗೆ ಸೋಡಚೀಟಿ ನೀಡಿ ನಾಲ್ಕನೇ ಬಾರಿ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ಈ ಕಾರಣಕ್ಕಾಗಿಯೇ ಅವರು ತಮಗೆ ವಿಚ್ಛೇದನ ನೀಡುತ್ತಿದ್ದಾರೆ. ಸದ್ಯಕ್ಕೆ ಅಧಿಕೃತವಾಗಿ ಹೆಂಡತಿ ಅಂತಿರುವುದು ನಾಗರತ್ನ ಅವರು ಒಬ್ಬರೇ ಇರುವುದರಿಂದ, ಅವರಿಗೆ ಡೈವೋರ್ಸ್ ನೀಡದೆ ವಿಜಿಗೆ ಗತ್ಯಂತರವೇ ಇಲ್ಲ.

ಇದು ನಿಜಾನಾ ವಿಜಿ? ಇಂಥ ಪ್ರಶ್ನೆ ಕೇಳಿದರೆ ಕಪ್ಪಗಿನ ವಿಜಯ್ ಮುಖ ಕೂಡ ಕೆಂಪೇರದೆ ಇರುವುದಿಲ್ಲ. ಅವರು ಕೌಟುಂಬಿಕ ನ್ಯಾಯಾಲಯಕ್ಕೆ ನೀಡಿರುವ ಕಾರಣಗಳೇ ಬೇರೆ ಇವೆ. ಹೆಂಡತಿ ಸರಿಯಾಗಿಲ್ಲ, ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ, ಸರಿಯಾಗಿ ಅತಿಥಿ ಸತ್ಕಾರ ಮಾಡುತ್ತಿಲ್ಲ, ಸಿಕ್ಕಾಪಟ್ಟೆ ಚಿನ್ನಾಭರಣ ಕೇಳುತ್ತಿದ್ದಾರೆ, ಸತ್ರೆ ಸಾಯಿ ನನಗೆ ಇನ್ಶೂರನ್ಸ್ ಹಣ ಬಂದ್ರೆ ಸಾಕು ಇತ್ಯಾದಿ ಇತ್ಯಾದಿ ಇತ್ಯಾದಿ 59 ಕಾರಣಗಳು. ಈ ಎಲ್ಲ ಕಾರಣಗಳು ವಿಚ್ಛೇದನಕ್ಕೆ ಅರ್ಹವಾ? ನ್ಯಾಯಾಲಯದಲ್ಲಿ ತೀರ್ಮಾನವಾಗಲಿವೆ. [ಶುಭಾ ಪೂಂಜಾ ಗ್ಯಾಲರಿ]

ಮೂರೇ ದಿನಕ್ಕೆ ಮೊದಲ ಪತ್ನಿಯನ್ನು ಬಿಟ್ಟರಂತೆ

ಗಂಡ ಹೆಂಡತಿಯ ಜಗಳಗಳು ಏನೇ ಇರಲಿ. ಸಾಮರಸ್ಯ ಇರಲಿ ಇಲ್ಲದಿರಲಿ, ಮದುವೆಯೆಂಬ ಹುಚ್ಚಿಗೆ ವಿಜಿ ಬೀಳಬಾರದಿತ್ತು. ನಾಗರತ್ನ ಅವರನ್ನು ಮದುವೆಯಾಗುವ ಮೊದಲು ಅವರು ಒಂದು ಹುಡುಗಿಯನ್ನು ವರಿಸಿದ್ದರಂತೆ. ಇದರಲ್ಲಿ ಯಾರ ತಕರಾರೂ ಇಲ್ಲ. ಮೂರೇ ದಿನಕ್ಕೆ ಆಕೆಯನ್ನು ಬಿಟ್ಟರಂತೆ. ಆಕೆಗೆ ವಿಚ್ಛೇದನ ನೀಡಿಯೇ ವಿಜಯ್ ಅವರು ನಾಗರತ್ನ ಅವರಿಗೆ ಮಂಗಳಸೂತ್ರ ಬಿಗಿದರಾ? ನಾಗರತ್ನ ಇರಲಿ ಸ್ವತಃ ವಿಜಯ್ ಅವರಿಗೂ ಗೊತ್ತಿಲ್ಲ. ಈ ಕಟುಸತ್ಯವನ್ನು ನಾಗರತ್ನ ಅವರು ಹದಿನಾಲ್ಕು ವರುಷ ಭರಿಸಿದರು.

ಶುಭಾ ಮದುವೆ ನಿರಾಕರಿಸಲಿ ನೋಡೋಣ

ನಂತರ ವಿಜಯ್ ಅವರು ತಮ್ಮ ಸಂಗಾತಿಯನ್ನಾಗಿ ಆರಿಸಿಕೊಂಡಿದ್ದು ಅವರ ಜೊತೆ ಚಂಡ, ಸ್ಲಂ ಬಾಲ ಮುಂತಾದ ನಾಲ್ಕು ಚಿತ್ರಗಳಲ್ಲಿ ನಟಿಸಿದ ಮಂಗಳೂರು ಮಲ್ಲಿಗೆ ಶುಭಾ ಪೂಂಜಾಳನ್ನು. ಅವರಿಬ್ಬರು ನಾಗರತ್ನ ಅವರ ಸಮ್ಮುಖದಲ್ಲೇ ಹಾರ ಬದಲಾಯಿಸಿಕೊಂಡ ಚಿತ್ರಗಳು ಸಾಕ್ಷಿ ಹೇಳುತ್ತಿವೆ. ಇದರ ಬಗ್ಗೆ ವಿಜಿ ಗಪ್ ಚಿಪ್. ಆದರೆ, ನಾಗರತ್ನ ಮಾತ್ರ ಕಂಡಕಂಡಲ್ಲಿ ವಿಜಯ್ ಅವರು ಶುಭಾಳನ್ನು ಮದುವೆಯಾಗಿದ್ದು ಸತ್ಯ ಸತ್ಯ ಸತ್ಯ ಎಂದು ಪ್ರಮಾಣ ಮಾಡಿ ಹೇಳುತ್ತಿದ್ದಾರೆ. ಇದನ್ನು ನಿರಾಕರಿಸಿದರೆ ಈ ಕ್ಷಣವೇ ಅವರಿಗೆ ವಿಚ್ಛೇದನ ನೀಡುತ್ತೇನೆ ಎಂದು ಕೆಂಗಣ್ಣು ಬೀರುತ್ತಿದ್ದಾರೆ.

ವಿಜಿಯಿಂದ ಶುಭಾ ದೂರ ದೂರ

ಬಲ್ಲ ಮೂಲಗಳ ಪ್ರಕಾರ, ಶುಭಾ ಮತ್ತು ವಿಜಯ್ ಮದುವೆಯಾಗಿದ್ದಾರೋ ಇಲ್ಲವೋ ಸದ್ಯಕ್ಕೆ ಅವರಿಬ್ಬರೂ ದೂರವಿದ್ದಾರೆ. ಕಳೆದೊಂದು ವರ್ಷದಿಂದ ಇಬ್ಬರ ನಡುವೆ ಅಷ್ಟೊಂದು ಒಡನಾಟ ಕಂಡುಬಂದಿಲ್ಲ. ಇದರ ಸಹವಾಸವೇ ಬೇಡವೆಂದು ಶುಭಾ ದೂರ ಸರಿದಿದ್ದಾರೆ. ವಿಜಯ್ ಅವರನ್ನು ಮದುವೆಯಾಗೇ ಇಲ್ಲ ಎಂದು ಶುಭಾ ಸಾರಾಸಗಟಾಗಿ ತಿರಸ್ಕರಿಸುತ್ತಿದ್ದಾರೆ. ಇದರ ಬಗ್ಗೆ ಪ್ರಶ್ನೆ ಕೇಳಲೇಬೇಡಿ ಎಂದು ವಿಜಯ್ ಮಾಧ್ಯಮಕ್ಕೆ ಅಂಗಲಾಚುತ್ತಿದ್ದಾರೆ. ಸತ್ಯ ನುಡಿದಿದ್ದು ನಾಗರತ್ನ ಮಾತ್ರ.

ವಿಜಿ ಜೊತೆ ಡಾ. ಭಾರತಿ ಹೆಸರು

ಎನಿವೇ, ಅದು ಅವರು ಮೂರು ಜನರ ನಡುವಿನ ಸತ್ಯ ಅಥವಾ ಸುಳ್ಳಿನ ಸಂಗತಿ. ಹಾಗಾದ್ರೆ, ನಾಗರತ್ನ ಅವರು ಖಡಾಖಂಡಿತವಾಗಿ ಹೇಳುತ್ತಿರುವಂತೆ ಆ ನಾಲ್ಕನೇ ಚೆಲುವೆ ಯಾರು? ಕೆಲವರು ವಿಜಿ ಅವರು ನಟಿಸುತ್ತಿರುವ 'ಜಯಮ್ಮನ ಮಗ' ಚಿತ್ರದ ನಾಯಕಿ ಸುಂದರಿ ಡಾ. ಭಾರತಿ ಅವರತ್ತ ಕಣ್ಣು ಹೊರಳಿಸುತ್ತಿದ್ದಾರೆ. ಇದಕ್ಕೆ ಕೆಂಡಾಮಂಡಲವಾಗಿ ಪ್ರತಿಕ್ರಿಯೆ ನೀಡಿರುವ ಡಾ. ಭಾರತಿ, ನಾನು ಸುಸಂಸ್ಕೃತ ಕುಟುಂಬಕ್ಕೆ ಸೇರಿದ ಹುಡುಗಿ. ಇದು ನನ್ನ ಮೊದಲ ಚಿತ್ರವಾದರೂ ನನಗೆ ಇಂಥ ಚೀಪ್ ಗಿಮಿಕ್ ಬೇಕಿಲ್ಲ. ಇವರ ಜೊತೆ ಚಿತ್ರ ಯಾಕಾದ್ರೂ ಒಪ್ಪಿಕೊಂಡನೋ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಎಷ್ಟೊಂದು ಮದುವೆಯಾಗ್ತೀಯೋ

ಸಿನೆಮಾ ರಂಗದಲ್ಲಿ ಏನಿದ್ದರೂ ಗಾಸಿಪ್‌ದೇ ದುನಿಯಾ. ಯಾರನ್ನು ಬೇಕಾದರೂ ಯಾರ ಜೊತೆಗಾದರೂ ಕಟ್ಟಿ ಮಜಾ ನೋಡಬಹುದು. ಏನೇ ಇರಲಿ, ವಿಜಿ ಮನೆ ಕಟ್ಟಿಸಿದಾಗ ತಮಾಷೆಯ ಸಂಗತಿ ನಡೆದದ್ದನ್ನು ನಾಗರತ್ನ ಅವರು ಹೇಳಿದ್ದಾರೆ. ಅದೇನೆಂದರೆ, ಗೃಹಪ್ರವೇಶಕ್ಕೆ ಬಂದಿದ್ದ ನಟ 'ರಸಿಕ' ರವಿಚಂದ್ರನ್, ನಾಗರತ್ನ ಮತ್ತು ಶುಭಾ ಅವರ ಸಮ್ಮುಖದಲ್ಲೇ, 'ಎಷ್ಟೊಂದು ಮದುವೆಯಾಗ್ತೀಯೋ, ಮತ್ತೊಂದು ಮನೆ ಕಟ್ಟೋ' ಎಂದು ಹೇಳಿ ಶುಭಾ ಮತ್ತು ವಿಜಯ್ ಇಬ್ಬರನ್ನೂ ಬೆಚ್ಚಿಬೀಳಿಸಿದ್ದರಂತೆ. ಆಗ ಅವರಿಬ್ಬರ ಮುಖ ನೋಡಬೇಕಿತ್ತು ಎಂದು ನಾಗರತ್ನ ಮುಸಿಮುಸಿ ನಗುತ್ತಾರೆ.

English summary
How many times Kannada actor Duniya Vijay has married? According to his present wife Nagarathna, Vijay is all set to marry for the forth time, after divorcing her. Is it true Vijay? What will happen to Shubha Poonja, if at all he is married to her? Who is the forth girl?
Please Wait while comments are loading...