For Quick Alerts
  ALLOW NOTIFICATIONS  
  For Daily Alerts

  D56 ಚಿತ್ರಕ್ಕೆ ಸಿಕ್ತು ಬೊಂಬಾಟ್ ಟೈಟಲ್? ಇದನ್ನೇ ಫೈನಲ್ ಮಾಡ್ತಾರಾ ತರುಣ್ ಸುಧೀರ್?

  |

  'ಕ್ರಾಂತಿ' ನಂತರ ದರ್ಶನ್ ನಟಿಸುತ್ತಿರುವ ಚಿತ್ರ D56. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದೆ. ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೋಡಿಯಾಗಿ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಟಿಸ್ತಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಚಿತ್ರವನ್ನು ಬಹಳ ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಟೈಟಲ್ ಬಗ್ಗೆ ಹೊಸದೊಂದು ಟೈಟಲ್ ಹರಿದಾಡ್ತಿದೆ.

  ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ಕಟ್ಟಿಕೊಡಲಾಗುತ್ತಿದೆ. ಆದರೆ ಚಿತ್ರದ ಟೈಟಲ್ ಏನು ಎನ್ನುವುದು ಇನ್ನು ಫೈನಲ್ ಆಗಿಲ್ಲ. ಈ ಹಿಂದೆ 'ಕಾಟೇರಾ' ಅನ್ನುವ ಹೆಸರು ಕೇಳಿ ಬಂತಾದರೂ ಅದನ್ನು ಟೀಂ ಕನ್ಫರ್ಮ್ ಮಾಡಿಲ್ಲ. ಬೇರೆ ಟೈಟಲ್‌ಗಳ ಹುಡುಕಾಟವೂ ನಡೆದಿದೆ. ಹಂಪಿಯಲ್ಲಿ ದಶಕಗಳ ಹಿಂದೆ ನಡೆದ ಒಂದಷ್ಟು ಘಟನೆಗಳಿಂದ ಪ್ರೇರಣೆಗೊಂಡು ಈ ಸಿನಿಮಾ ಮಾಡುತ್ತಿದ್ದಾರೆ. ಚಿತ್ರದಲ್ಲಿ ದರ್ಶನ್‌ ಅವರನ್ನು ಹೊಸ ಅವತಾರದಲ್ಲಿ ತೋರಿಸುವ ಪ್ರಯತ್ನವೂ ನಡೀತಿದೆ.

  ಧಾರವಾಡದ ವಿನಯ್ ಕುಲಕರ್ಣಿ ಡೈರಿ ಫಾರ್ಮ್‌ಗೆ ನಟ ದರ್ಶನ್ ಭೇಟಿ!ಧಾರವಾಡದ ವಿನಯ್ ಕುಲಕರ್ಣಿ ಡೈರಿ ಫಾರ್ಮ್‌ಗೆ ನಟ ದರ್ಶನ್ ಭೇಟಿ!

  ಯಾವುದೇ ಸಿನಿಮಾ ಆದರೂ ಟೈಟಲ್ ಬಹಳ ಇಂಪಾರ್ಟೆಂಟ್. ಅದೇ ಕಾರಣಕ್ಕೆ ಚಿತ್ರತಂಡಗಳು ಕ್ಯಾಚಿ ಟೈಟಲ್‌ಗಾಗಿ ಬಹಳ ಹುಡುಕಾಟ ನಡೆಸುತ್ತವೆ. ಸದ್ಯಕ್ಕೆ D56 ಟೆಂಟಿಟಿವ್ ಟೈಟಲ್‌ನಲ್ಲಿ ಶೂಟಿಂಗ್ ನಡೀತಿದೆ. ಸದ್ಯ ಹೊಸದೊಂದು ಟೈಟಲ್ ಬಗ್ಗೆ ಚರ್ಚೆ ನಡೀತಿದೆಯಂತೆ. ಆದರೆ ಹೆಚ್ಚು ಕಡಿಮೆ ಅದೇ ಹೆಸರಿನಲ್ಲಿ ಮತ್ತೊಂದು ಸಿನಿಮಾ ಅನೌನ್ಸ್ ಆಗಿರೋದು ಗೊಂದಲಕ್ಕೆ ಕಾರಣವಾಗಿದೆ.

  'ಚೌಡಯ್ಯ' ಆಗಿ ಚಾಲೆಂಜಿಂಗ್ ಸ್ಟಾರ್?

  'ಚೌಡಯ್ಯ' ಆಗಿ ಚಾಲೆಂಜಿಂಗ್ ಸ್ಟಾರ್?

  'ಕ್ರಾಂತಿ' ಸಿನಿಮಾ ರಿಲೀಸ್ ಆಗುವವರೆಗೂ D56 ಸಿನಿಮಾ ಬಗ್ಗೆ ಯಾವುದೇ ಅಪ್‌ಡೇಟ್ ಕೊಡದೇ ಇರಲು ದರ್ಶನ್ ನಿರ್ಧರಿಸಿದ್ದಾರೆ. ಹಾಗಾಗಿ ಸಿನಿಮಾ ಟೈಟಲ್ ಬಗ್ಗೆಯೂ ಚಿತ್ರತಂಡ ಗುಟ್ಟು ಬಿಟ್ಟುಕೊಡುತ್ತಿಲ್ಲ. ಆದರೆ ಚಿತ್ರದಲ್ಲಿ ದರ್ಶನ್ ಪಾತ್ರದ ಹೆಸರು ಚೌಡಯ್ಯ ಎನ್ನಲಾಗುತ್ತಿದೆ. ಹಾಗಾಗಿ ಅದೇ ಹೆಸರನ್ನು ಸಿನಿಮಾ ಟೈಟಲ್ ಆಗಿ ಇಡುವ ಬಗ್ಗೆ ಚರ್ಚೆ ನಡೀತಿದೆಯಂತೆ.

  'ಬನಾರಸ್' ವೇದಿಕೆಯಲ್ಲಿ ದರ್ಶನ್ ಬಿಚ್ಚು ಮಾತು'ಬನಾರಸ್' ವೇದಿಕೆಯಲ್ಲಿ ದರ್ಶನ್ ಬಿಚ್ಚು ಮಾತು

  'ಚೌಡಯ್ಯ' ಟೈಟಲ್ ಫಿಕ್ಸ್ ಆಗುತ್ತಾ?

  'ಚೌಡಯ್ಯ' ಟೈಟಲ್ ಫಿಕ್ಸ್ ಆಗುತ್ತಾ?

  ಇನ್ನು ನಿರ್ದೇಶಕ ಓಂ ಪ್ರಕಾಶ್ ರಾವ್ 'ಚೌಡ' ಟೈಟಲ್‌ನಲ್ಲಿ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಹೊಸ ಪ್ರತಿಭೆ ಚಿತ್ರದಲ್ಲಿ ಹೀರೊ ಆಗಿ ನಟಿಸ್ತಿದ್ದಾರೆ. ಹಾಗಾಗಿ D56 ಚಿತ್ರಕ್ಕೆ 'ಚೌಡಯ್ಯ' ಎನ್ನುವ ಟೈಟಲ್ ಫಿಕ್ಸ್ ಮಾಡುವ ಬಗ್ಗೆ ಗೊಂದಲ ಶುರುವಾಗಿದೆ. ಓಂ ಪ್ರಕಾಶ್ ರಾವ್ ಜೊತೆ ಮಾತುಕತೆ ನಡೆಸಿ ಈ ಟೈಟಲ್ ತಗೋತ್ತಾರಾ? ಅಥವಾ ಬೇರೆ ಟೈಟಲ್ ಹುಡುಕುತ್ತಾರಾ ಎನ್ನುವ ಪ್ರಶ್ನೆ ಎದ್ದಿದೆ.

  ಕುತೂಹಲ ಕೆರಳಿಸಿರುವ ಸಿನಿಮಾ ಕಥೆ

  ಕುತೂಹಲ ಕೆರಳಿಸಿರುವ ಸಿನಿಮಾ ಕಥೆ

  ವರಮಹಾಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ರವಿಶಂಕರ್ ಗುರೂಜಿ ಆಶ್ರಮದಲ್ಲಿ ಪೂಜೆ ಸಲ್ಲಿಸಿ D56 ಚಿತ್ರಕ್ಕೆ ಚಾಲನೆ ಕೊಡಲಾಯಿತು. ಸಿನಿಮಾ ಕಥೆಯ ಬಗ್ಗೆ ಭಾರೀ ಕುತೂಹಲ ಇದೆ. ಒಂದಷ್ಟು ನೈಜ ಘಟನೆಗಳನ್ನು ಆಧರಿಸಿ 'D56' ಸಿನಿಮಾ ಕಟ್ಟಿಕೊಡಲಾಗುತ್ತಿದೆ. ದರ್ಶನ್ ಹುಟ್ಟುಹಬ್ಬದ ಸಂಭ್ರಮದಲ್ಲಿ ರಿಲೀಸ್ ಆಗಿದ್ದ ಥೀಮ್ ಪೋಸ್ಟರ್ ಸಿಕ್ಕಾಪಟ್ಟೆ ಸದ್ಧು ಮಾಡಿತ್ತು. ಪೋಸ್ಟರ್‌ನಲ್ಲಿ ಕುರಿಗಳ ಹಿಂಡನ್ನು ರಕ್ಷಿಸುವ ನಾಯಿಯ ಚಿತ್ರವನ್ನು ಹಾಕಿ "ಹಿಂದಿರೋವ್ರಿಗೆ ದಾರಿ ಮುಂದಿರೋವ್ನದ್ದು ಜವಾಬ್ದಾರಿ.." ಅಂತ ಬರೆದು ಕುತೂಹಲ ಮೂಡಿಸಿತ್ತು ಚಿತ್ರತಂಡ.

  ಸಂಕ್ರಾಂತಿಗೆ 'ಕ್ರಾಂತಿ' ರಿಲೀಸ್?

  ಸಂಕ್ರಾಂತಿಗೆ 'ಕ್ರಾಂತಿ' ರಿಲೀಸ್?

  ವಿ. ಹರಿಕೃಷ್ಣ ನಿರ್ದೇಶನದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ 'ಕ್ರಾಂತಿ' ಸಿನಿಮಾ ಭಾರೀ ಸದ್ದು ಮಾಡ್ತಿದೆ. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸಿನಿಮಾ ರಿಲೀಸ್‌ಗೆ ಸಿದ್ದತೆ ನಡೀತಿದೆ. ರಾಜ್ಯೋತ್ಸವ ಸಂಭ್ರಮದಲ್ಲಿ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇತ್ತು. ಆದರೆ ಶೂಟಿಂಗ್ ತಡವಾಗಿದ್ದರಿಂದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಮುಂದಿನ ವರ್ಷ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ. ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ಬಂದರೂ ಅಚ್ಚರಿ ಪಡಬೇಕಿಲ್ಲ. ರಾಜ್ಯೋತ್ಸವ ಸಂಭ್ರಮದಲ್ಲಿ ಮತ್ತೊಂದು ಟೀಸರ್ ಬರುತ್ತಾ ಕಾದು ನೋಡಬೇಕು.

  English summary
  Interesting title in consideration for Challenging star darshan Starrer D56. The biggie features a story inspired by real-life events. Know More.
  Friday, October 28, 2022, 14:31
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X