For Quick Alerts
  ALLOW NOTIFICATIONS  
  For Daily Alerts

  ಮೋಹಕ ತಾರೆ ತ್ರಿಷಾ ಕೃಷ್ಣನ್ ಮದುವೆ ಮುರಿದು ಬಿತ್ತಾ?

  By ಉದಯರವಿ
  |

  ಈ ಸಿನಿಮಾ ತಾರೆಗಳ ವ್ಯವಹಾರವೇ ಹೀಗೆ. ಯಾವ ಕ್ಷಣದಲ್ಲಿ ಏನಾಗುತ್ತದೋ ಏನೋ ಎಂದು ಊಹಿಸಿವುದು ಕಷ್ಟ. ಮೋಹಕ ತಾರೆ ತ್ರಿಷಾ ಈ ರೀತಿ ಮಾಡುತ್ತಾರೆಂದು ಯಾರೂ ಊಹಿಸಿರಲಿಲ್ಲ. ಉದ್ಯಮಿ ವರುಣ್ ಮಣಿಯನ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು.

  ಇಬ್ಬರ ನಿಶ್ಚಿತಾರ್ಥ ಬಹಳ ಅದ್ದೂರಿಯಾಗಿ ನಡೆಯಿತು. ಅಭಿಮಾನಿಗಳು "ಹೋಗಿ ಬಾ ತಂಗಿ..." ಎಂದು ಹರಸಿದ್ದರು. ತ್ರಿಷಾ ಸಹ ತನ್ನ ಗೆಳೆಯ/ಗೆಳತಿಯರಿಗೆ ಪಾರ್ಟಿ ಕೊಡುತ್ತಾ ಎಲ್ಲರೊಂದಿಗೆ ಹಾಯಾಗಿದ್ದರು. ಅಭಿಮಾನಿಗಳು ತ್ರಿಷಾರನ್ನು ತಮ್ಮ ಹೃದಯದಿಂದ ಅಳಿಸಲು ಪ್ರಾರಂಭಿಸಿದ್ದರು. [ಉಂಗುರ ಬದಲಾಯಿಸಿಕೊಂಡ ತ್ರಿಷಾ ಮತ್ತು ವರುಣ್]

  ತ್ರಿಷಾ ಅವರ ಮದುವೆ ದಿನಾಂಕ ಇನ್ನೂ ನಿಗದಿಯಾಗದಿದ್ದರೂ, ಇದೀಗ ಅವರ ಮದುವೆಗೆ ಸಂಬಂಧಿಸಿದ ಇನ್ನೊಂದು ಸುದ್ದಿ ಸ್ಫೋಟಗೊಂಡಿದೆ. ಅದೇನೆಂದರೆ ತನ್ನ ಭಾವಿ ಪತಿ ವರುಣ್ ಮಣಿಯನ್ ನೊಂದಿಗಿನ ಮದುವೆ ಮುರಿದು ಬಿದ್ದಿದೆ ಎಂಬುದು. ಅಯ್ಯೋ ಶಿವನೇ ಏನಾಯ್ತು! ಮುಂದೆ ಓದಿ.

  ಇಬ್ಬರೂ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ

  ಇಬ್ಬರೂ ಎಲ್ಲೂ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲ

  ನಿಶ್ಚಿತಾರ್ಥದ ಬಳಿಕ ಇವರಿಬ್ಬರು ಹೆಚ್ಚಾಗಿ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ತ್ರಿಷಾ ಸಹ ಹಲವಾರು ಪ್ರಾಜೆಕ್ಟ್ ಗಳಲ್ಲಿ ಬಿಜಿಯಾದರು. ನಿಶ್ಚಿತಾರ್ಥ ಆದ ಮೇಲೆ ಇಬ್ಬರೂ ಇನ್ನಷ್ಟು ಹತ್ತಿರವಾಗಬೇಕಿತ್ತು. ಆದರೆ ಇವರಿಬ್ಬರ ವ್ಯವಹಾರದಲ್ಲಿ ಎಲ್ಲವೂ ಉಲ್ಟಾಪಲ್ಟಾ ಆಗಿದೆ.

  ಮದುವೆ ನಿಶ್ಚಿತಾರ್ಥಕ್ಕೆ ನಿಂತು ಹೋಯಿತೆ?

  ಮದುವೆ ನಿಶ್ಚಿತಾರ್ಥಕ್ಕೆ ನಿಂತು ಹೋಯಿತೆ?

  ಇಬ್ಬರ ನಡುವಿನ ಅಂತರ ಹೆಚ್ಚಾಗುತ್ತಾ ಹೋಗಿದೆ. ಇಬ್ಬರ ನಡುವಿನ ಸಂಬಂಧವೂ ಬಲಹೀನಗೊಂಡಿದೆ ಎನ್ನುತ್ತವೆ ಮೂಲಗಳು. ಒಟ್ಟಾರೆ ಇವರಿಬ್ಬರ ಮದುವೆ ನಿಶ್ಚಿತಾರ್ಥಕ್ಕೆ ನಿಂತು ಹೋಗಿದೆ ಎನ್ನುತ್ತವೆ ಮೂಲಗಳು.

  ನಾಲ್ಕು ತಿಂಗಳು ಕಳೆದರೂ ಇನ್ನೂ ಮದುವೆ ಸುದ್ದಿಯಿಲ್ಲ

  ನಾಲ್ಕು ತಿಂಗಳು ಕಳೆದರೂ ಇನ್ನೂ ಮದುವೆ ಸುದ್ದಿಯಿಲ್ಲ

  ಕೋಲಿವುಡ್ ನಲ್ಲಿ ಹರಿದಾಡುತ್ತಿರುವ ಸಮಾಚಾರದ ಪ್ರಕಾರ, ಇವರಿಬ್ಬರೂ ಮದುವೆ ಬೇಡ ಎಂದುಕೊಂಡಿದ್ದಾರಂತೆ. ನಿಶ್ಚಿತಾರ್ಥದ ಬಳಿಕ ನಾಲ್ಕು ತಿಂಗಳು ಕಳೆದರೂ ಮದುವೆ ದಿನಾಂಕ ಮಾತ್ರ ಇನ್ನೂ ನಿಗದಿಯಾಗಿಲ್ಲ. ಈ ಬಗ್ಗೆ ನಾನಾ ತೆರನಾದ ವದಂತಿಗಳು ಹಬ್ಬಿವೆ.

  ತ್ರಿಷಾ ಕಡೆಗೇ ಬೊಟ್ಟು ಮಾಡುತ್ತಿದ್ದಾರೆ

  ತ್ರಿಷಾ ಕಡೆಗೇ ಬೊಟ್ಟು ಮಾಡುತ್ತಿದ್ದಾರೆ

  ಕೆಲವರು ತ್ರಿಷಾ ಅವರ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿದ್ದಾರೆ. ನಿಶ್ಚಿತಾರ್ಥದ ಬಳಿಕ ತ್ರಿಷಾ ಅವರಿಗೆ ಅವಕಾಶಗಳು ಹೆಚ್ಚಾಗಿವೆ. ಮದುವೆಯನ್ನು ಪಕ್ಕಕ್ಕಿಟ್ಟು ಬಣ್ಣದ ಪ್ರಪಂಚದಲ್ಲೇ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಇದರ ಜೊತೆಗೆ ಇನ್ನೊಂದು ಸುದ್ದಿಯೂ ಚೆನ್ನೈ ಫಿಲಂ ಸರ್ಕಲ್ ನಲ್ಲಿ ಕೇಳಿಬರುತ್ತಿದೆ.

  ಟ್ವಿಟ್ಟರ್ ನಲ್ಲಿ ಸೈಲೆಂಟ್ ಆದ ಜೋಡಿ

  ಟ್ವಿಟ್ಟರ್ ನಲ್ಲಿ ಸೈಲೆಂಟ್ ಆದ ಜೋಡಿ

  ಇವರಿಬ್ಬರ ಮದುವೆ ಮಾರ್ಚ್ ನಲ್ಲಿ ಎನ್ನಲಾಗಿತ್ತು. ಆದರೆ ಏಪ್ರಿಲ್ ಕಳೆಯುತ್ತಿದ್ದರೂ ಇನ್ನೂ ಮದುವೆ ಮಾತಿಲ್ಲ. ಸಾಲದ್ದಕ್ಕೆ ತಮ್ಮ ಟ್ವಿಟ್ಟರ್ ನಲ್ಲಿ ಸದಾ ಚಟುವಟಿಕೆಯಿಂದಿರುತ್ತಿದ್ದ ವರುಣ್ ಹಾಗೂ ತ್ರಿಷಾ ಇಬ್ಬರೂ ಸೈಲೆಂಟ್ ಆಗಿದ್ದಾರೆ.

  ಇಬ್ಬರ ನಡುವೆ ಏನಾಯಿತಪ್ಪಾ ಅಂತಹದ್ದು?

  ಇಬ್ಬರ ನಡುವೆ ಏನಾಯಿತಪ್ಪಾ ಅಂತಹದ್ದು?

  ಇವರಿಬ್ಬರ ನಡುವೆ ಏನೋ ನಡೆಯಬಾರದು ನಡೆದಿದೆಯಾ? ಇಬ್ಬರ ನಡುವೆ ಮಾತಿಲ್ಲ ಕಥೆಯಿಲ್ಲ. ಇನ್ನು ಮದುವೆ ಮಾತಂತೂ ದೂರವಾಯಿತು. ಸಾಮಾಜಿಕ ತಾಣಗಳಲ್ಲಿ ಒಬ್ಬರಿಗೊಬ್ಬರು ಟ್ವೀಟಿಸಿಕೊಳ್ಳುತ್ತಾ ಸಂಭ್ರಮ ಹಂಚಿಕೊಳ್ಳುತ್ತಿರುವವರು ಈಗೇನಾಯಿತು ಎಂದು ಮಾತನಾಡಿಕೊಳ್ಳುವಂತಾಗಿದೆ.

  ತ್ರಿಷಾ ಬೆರಳಲ್ಲಿ ಉಂಗುರ ಕಾಣುತ್ತಿಲ್ಲ!

  ತ್ರಿಷಾ ಬೆರಳಲ್ಲಿ ಉಂಗುರ ಕಾಣುತ್ತಿಲ್ಲ!

  ಇನ್ನೊಂದು ಮುಖ್ಯ ಸಂಗತಿ ಎಂದರೆ ನಿಶ್ಚಿತಾರ್ಥದಲ್ಲಿ ವರುಣ್ ಮಣಿಯನ್ ತೊಡಿಸಿದ್ದ ಉಂಗುರ ತ್ರಿಷಾ ಬೆರಳಲ್ಲಿ ಈಗ ಕಾಣುತ್ತಿಲ್ಲ ಎಂಬುದು! ವರುಣ್ ನಿರ್ಮಿಸಲಿರುವ ಚಿತ್ರಕ್ಕೆ ತ್ರಿಷಾ ನಾಯಕಿ ಎನ್ನಲಾಗಿತ್ತು. ಆದರೆ ಈಗ ಆ ಸುದ್ದಿಯಿಲ್ಲ.

  ಮಾತಿಲ್ಲ ಕಥೆಯಿಲ್ಲ, ಅಂತರ ತಪ್ಪಿಲ್ಲ

  ಮಾತಿಲ್ಲ ಕಥೆಯಿಲ್ಲ, ಅಂತರ ತಪ್ಪಿಲ್ಲ

  ಈ ರೀತಿಯ ಕೆಲವು ಘಟನೆಗಳ ಹಿನ್ನೆಲೆಯಲ್ಲಿ ಇವರಿಬ್ಬರ ನಡುವಿನ ಅಂತರ ಹೆಚ್ಚಾಗಿ ಎನ್ನುತ್ತವೆ ಇಬ್ಬರನ್ನೂ ಸಮೀಪದಿಂದ ಬಲ್ಲವರು. ಅವಕಾಶಗಳಿಲ್ಲದೆ ಮದುವೆಗೆ ಅಣಿಯಾಗಿದ್ದ ತ್ರಿಷಾಗೆ ನಿಶ್ಚಿತಾರ್ಥದ ಬಳಿಕ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದವು.

  ಗಾಳಿಬಂದ ಕಡೆಗೆ ಹರಿದ ಗಾಳಿಸುದ್ದಿಗಳು

  ಗಾಳಿಬಂದ ಕಡೆಗೆ ಹರಿದ ಗಾಳಿಸುದ್ದಿಗಳು

  'ಎನ್ನೈ ಅರುಂದಾಲ್' ಚಿತ್ರ ಹಿಟ್ ಆಗುವ ಮೂಲಕ ತ್ರಿಷಾ ಅವರಿಗೆ ಮತ್ತೆ ಅವಕಾಶದ ಭಾಗ್ಯದ ಬಾಗಿಲು ತೆರೆದಂತಾಗಿದೆ. ಹಾಗಾಗಿ ಮದುವೆಯನ್ನು ಮುಂದೂಡಿರುವ ಸಾಧ್ಯತೆಗಳೂ ಇವೆ ಎನ್ನುತ್ತವೆ ಮೂಲಗಳು. ಆದರೆ ಇಬ್ಬರೂ ಬಾಯಿಬಿಡುತ್ತಿಲ್ಲ. ಗಾಳಿಸುದ್ದಿಗಳನ್ನು ಯಾರಿಂದಲೂ ತಡೆಯಲಾಗುತ್ತಿಲ್ಲ.

  English summary
  Actress Trisha Krishnan and Varun Manian got engaged in January Trisha now stopped wearing the engagement ring and also didn't attend important family function at Varun Manian's house. Differences are increasing between the two and Trisha's friends say there is incompatibility between both of them.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X