»   » ಮಕ್ಕಳಾಗಲು ಆಸ್ಪತ್ರೆಗೆ ಅಲೆಯುತ್ತಿರುವ ವಿದ್ಯಾ ಬಾಲನ್?

ಮಕ್ಕಳಾಗಲು ಆಸ್ಪತ್ರೆಗೆ ಅಲೆಯುತ್ತಿರುವ ವಿದ್ಯಾ ಬಾಲನ್?

Posted By: ಉದಯರವಿ
Subscribe to Filmibeat Kannada

ಇದು ಅವರವರ ಖಾಸಗಿ ವಿಷಯ, ನಮಗ್ಯಾಕೆ. ಮಗು ಹೆರುವುದು ಬಿಡುವುದು ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಅಲ್ಲವೇ? ಇಷ್ಟಕ್ಕೂ ಅವರು ಮಗು ಹೆತ್ತರೆಷ್ಟು ಬಿಟ್ಟರೆಷ್ಟು? ಊರ ಉಸಾಬರಿ ನಮಗ್ಯಾಕೆ ಅನ್ನುವವರೇ ಹೆಚ್ಚು.

ಆದರೆ ಬಾಲಿವುಡ್ ತಾರೆ ವಿದ್ಯಾ ಬಾಲನ್ ಅಭಿಮಾನಿಗಳು ಮಾತ್ರ ಅವರು ಗರ್ಭಿಣಿ ಎಂಬ ಸುದ್ದಿ ಏನಾದರೂ ಬರುತ್ತಾ ಎಂದು ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಏಕೆಂದರೆ ಅಭಿಮಾನಿಗಳಿಗೆ ತಾರೆಗಳ ಖಾಸಗಿ ಬದುಕು ಅಷ್ಟೇ ಮುಖ್ಯವಾಗುತ್ತದೆ. [ಕರೀನಾ ಕಪೂರ್ ಒಡಲು ಇನ್ನೂ ಯಾಕೆ ತುಂಬಿಲ್ಲ?]

ಅವರ ಮದುವೆ, ಮಕ್ಕಳು, ಖಾಸಗಿ ಸಂಬಂಧಗಳನ್ನು ತಮ್ಮದೇ ದೃಷ್ಟಿಕೋನದಲ್ಲಿ ನೋಡುತ್ತಿರುತ್ತಾರೆ. ಈಗ ವಿದ್ಯಾ ಬಾಲನ್ ಅವರ ವಿಷಯವನ್ನೇ ತೆಗೆದುಕೊಳ್ಳಿ. ಅವರ ಮದುವೆಯಾಗಿ ಎರಡು ವರ್ಷಗಳಾಗುತ್ತಿವೆ. ಸಿದ್ಧಾರ್ಥ್ ರಾಯ್ ಕಪೂರ್ ಅವರ ಕೈಹಿಡಿದು ಎರಡು ವರ್ಷಗಳೇ ಉರುಳಿ ಹೋಗಿವೆ.

ವಿದ್ಯಾ ಬಾಲನ್ ಗರ್ಭಿಣಿಯಂತೆ ಎಂಬ ಸುದ್ದಿ

ಕೆಲ ದಿನಗಳ ಹಿಂದೆ ವಿದ್ಯಾ ಬಾಲನ್ ಗರ್ಭಿಣಿ ಎಂಬ ಸುದ್ದಿ ಬಿತ್ತರವಾಗಿತ್ತು. ಇದೀಗ ಅವರು ಗರ್ಭಿಣಿಯಾಗಲು ಏನೋ ಸಮಸ್ಯೆ ಇದೆಯಂತೆ ಎಂಬ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ಮುಖ್ಯವಾದ ಸಂಗತಿ ಎಂದರೆ ಈಗಾಗಲೆ ಅಪ್ಪ ಅಮ್ಮ ಆಗಿರುವ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ಅವರು ವಿದ್ಯಾ ಬಾಲನ್ ದಂಪತಿಗಳಿಗೆ ತುಂಬಾ ಆತ್ಮೀಯರು.

ಐಶ್ವರ್ಯ ರೈ ದಂಪತಿಗಳ ಕಿವಿಮಾತು

ಐಶ್ವರ್ಯಾ ರೈ ದಂಪತಿಗಳು ವಿದ್ಯಾಬಾಲನ್ ಅವರಿಗೆ ಒಂದು ಕಿವಿಮಾತನ್ನೂ ಹೇಳಿದ್ದಾರಂತೆ. ಅದೇನೆಂದರೆ, "ಇಬ್ಬರೂ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ. ಆಗ ನಿಮ್ಮಿಬ್ಬರಲ್ಲಿ ಏನು ಸಮಸ್ಯೆಗಳಿವೆ ಎಂಬುದು ಗೊತ್ತಾಗುತ್ತದೆ" ಎಂದಿದ್ದಾರಂತೆ.

ಸೆವೆನ್ ಹಿಲ್ಸ್ ಆಸ್ಪತ್ರೆಗೆ ಭೇಟಿ ನೀಡಲು ಸಲಹೆ

ಇದೇ ಆಸ್ಪತ್ರೆಯಲ್ಲಿ ನವೆಂಬರ್ 16, 2011ರಲ್ಲಿ ಐಶ್ವರ್ಯಾ ರೈ ಅವರಿಗೆ ಡೆಲಿವರಿ ಆಗಿತ್ತು. ಇನ್ನೊಂದು ಮೂಲದ ಪ್ರಕಾರ, ಸಿದ್ದಾರ್ಥ್ ರಾಯ್ ಕಪೂರ್ ಅವರ ಆತ್ಮೀಯ ಗೆಳೆಯರೊಬ್ಬರು ಹೇಳುವುದೇನೆಂದರೆ, "ಮಕ್ಕಳೆಂದರೆ ಆ ದಂಪತಿಗಳಿಗೆ ಅವರಿಗೆ ತುಂಬಾ ಇಷ್ಟ. ಈಗಾಗಲೆ ಅವರು ಸೆವೆನ್ ಹಿಲ್ಸ್ ಆಸ್ಪತ್ರೆ ವೈದ್ಯರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ. ಶೀಘ್ರದಲ್ಲೇ ಅವರ ಸಮಸ್ಯೆಗೆ ಪರಿಹಾರ ಸಿಗಲಿದೆ" ಎಂದಿದ್ದಾರೆ.

ಕೈಯಲ್ಲಿ ಸದ್ಯಕ್ಕೆ ಅಂತಹಾ ಪ್ರಾಜೆಕ್ಟ್ ಗಳು ಇಲ್ಲ

'ಬಾಬ್ಬಿ ಜಾಸೂಸ್' ಚಿತ್ರದ ಬಳಿಕ ವಿದ್ಯಾ ಬಾಲನ್ ಕೈಯಲ್ಲೂ ಅಂತಹಾ ಪ್ರಾಜೆಕ್ಟ್ ಗಳು ಇಲ್ಲ. ಬಹುಶಃ ಅವರು ತಾಯಿಯಾಗಲು ಇದೇ ಸೂಕ್ತ ಸಮಯ ಅನ್ನಿಸುತ್ತದೆ.

ಮಕ್ಕಳಿಗಾಗಿ ಆಸ್ಪತ್ರೆಗೆ ಅಲೆಯುತ್ತಿರುವ ದಂಪತಿಗಳು

ಮಕ್ಕಳು ಬೇಕು ಎಂದು ಅವರೂ ಈಗಾಗಲೆ ಆಸ್ಪತ್ರೆಗೆ ಅಲೆಯುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದು ಗೊತ್ತಾಗಿ ನಿರ್ಮಾಪಕರೂ ದೂರ ಸರಿಯುತ್ತಿದ್ದಾರೆ. ಎಲ್ಲವೂ ಅವರ ಕೈಯಲ್ಲಿ ಇಲ್ಲವಲ್ಲಾ?

English summary
Vidya Balan and Siddharth Roy Kapur are married for two years now. The couple have been under scanner for a long time. The news of Vidya being pregnant made headlines few days back. Now the latest is Vidya Balan facing trouble to get pregnant?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada