twitter
    For Quick Alerts
    ALLOW NOTIFICATIONS  
    For Daily Alerts

    'ವಿಕ್ರಂ' ಸಿನಿಮಾಕ್ಕೆ ಕಮಲ್ ಹಾಸನ್ ಪಡೆದ ಸಂಭಾವನೆ ಎಷ್ಟು? ವಿಜಯ್, ಫಹಾದ್‌ಗೆ ಸಿಕ್ಕಿದ್ದೆಷ್ಟು?

    |

    ಕಮಲ್ ಹಾಸನ್ ನಟನೆಯ ಹೊಸ ಸಿನಿಮಾ 'ವಿಕ್ರಂ' ಕುರಿತು ಭಾರಿ ನಿರೀಕ್ಷೆಗಳು ಗರಿಗೆದರಿವೆ. ಸಿನಿಮಾದ ಟ್ರೇಲರ್ ಬಿಡುಗಡೆ ಆದ ಬಳಿಕವಂತೂ ಸಿನಿ ಪ್ರಿಯರ ನಿರೀಕ್ಷೆ ದುಪ್ಪಟ್ಟಾಗಿದೆ.

    ಲೋಕೇಶ್ ಕನಕರಾಜ್ ನಿರ್ದೇಶಸನದ 'ವಿಕ್ರಂ' ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಆಗಿದ್ದು, ಸಿನಿಮಾದಲ್ಲಿ ಆಕ್ಟಿಂಗ್ ಪವರ್‌ಹೌಸ್‌ಗಳಾದ ಕಮಲ್ ಹಾಸನ್, ವಿಜಯ್ ಸೇತುಪತಿ ಹಾಗೂ ಫಹಾದ್ ಫಾಸಿಲ್ ನಟಿಸಿದ್ದಾರೆ. ಮೂವರ ನಟನಾ ಜುಗಲ್‌ ಬಂಧಿ ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ.

    ಕಮಲ್ ಹಾಸನ್ 'ವಿಕ್ರಂ' ಪ್ರೀ-ರಿಲೀಸ್ 200 ಕೋಟಿ ಗಳಿಕೆ: ದೊಡ್ದದಾಗಿದೆ ಬಾಕ್ಸಾಫೀಸ್ ಲೆಕ್ಕಾಚಾರ!ಕಮಲ್ ಹಾಸನ್ 'ವಿಕ್ರಂ' ಪ್ರೀ-ರಿಲೀಸ್ 200 ಕೋಟಿ ಗಳಿಕೆ: ದೊಡ್ದದಾಗಿದೆ ಬಾಕ್ಸಾಫೀಸ್ ಲೆಕ್ಕಾಚಾರ!

    'ವಿಕ್ರಂ' ಸಿನಿಮಾ ಜೂನ್ 3 ರಂದು ತೆರೆಗೆ ಬರಲಿದ್ದು, ಸಿನಿಮಾಕ್ಕೆ ಆಯ್ಕೆ ಮಾಡಿರುವ ಮುಖ್ಯ ನಟರ ಮೂಲಕವೇ ಸಿನಿಮಾ ಅರ್ಧ ಗೆದ್ದುಬಿಟ್ಟಿದೆ. ಅಲ್ಲದೆ ಸಿನಿಮಾದ ಟ್ರೇಲರ್ ಬಿಡುಗಡೆ ಆದ ಮೇಲೆ ವಿತರಕರಿಂದ ಬೇಡಿಕೆ ಹೆಚ್ಚಾಗಿದೆಯಂತೆ, ಭರ್ಜರಿ ಪ್ರೀ ರಿಲೀಸ್ ಕಲೆಕ್ಷನ್ ಅನ್ನೂ ಸಿನಿಮಾ ಮಾಡಿದೆ. ಈ ನಡುವೆ ಸಿನಿಮಾದ ಮೂವರು ಮುಖ್ಯ ಪಾತ್ರಧಾರಿಗಳಾದ ಕಮಲ್ ಹಾಸನ್, ಫಹಾದ್ ಫಾಸಿಲ್ ಹಾಗೂ ವಿಜಯ್ ಸೇತುಪತಿಗೆ ನೀಡಿರುವ ಸಂಭಾವನೆ ಸಹ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.

    ಕಮಲ್‌ಗೆ ಭಾರಿ ಸಂಭಾವನೆ

    ಕಮಲ್‌ಗೆ ಭಾರಿ ಸಂಭಾವನೆ

    ನಾಲ್ಕು ವರ್ಷಗಳ ನಂತರ ಸಿನಿಮಾದಲ್ಲಿ ನಟಿಸಿರುವ ಕಮಲ್ ಹಾಸನ್‌ಗೆ ಭಾರಿ ದೊಡ್ಡ ಸಂಭಾವನೆಯನ್ನು 'ವಿಕ್ರಂ' ಸಿನಿಮಾಕ್ಕೆ ನೀಡಲಾಗಿದೆಯಂತೆ. 'ವಿಕ್ರಂ' ಸಿನಿಮಾಕ್ಕಾಗಿ ಕಮಲ್ ಹಾಸನ್‌ಗೆ 40 ರಿಂದ 50 ಕೋಟಿ ಸಂಭಾವನೆ ನೀಡಲಾಗಿದೆ ಎನ್ನಲಾಗುತ್ತಿದೆ. ಉಳಿದೆರಡು ಮುಖ್ಯ ಪಾತ್ರಗಳಿಗೆ ಹೋಲಿಸಿದರೆ ಸಿನಿಮಾದಲ್ಲಿ ಅವರ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆಯಂತೆ, ಇತರ ಇಬ್ಬರು ಮುಖ್ಯ ನಟರಿಗೆ ಹೋಲಿಸಿದರೆ ಹೆಚ್ಚಿನ ದಿನ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಕಮಲ್ ಹಾಸನ್. ಹಾಗಾಗಿ ಅವರಿಗೆ ಹೆಚ್ಚಿನ ಸಂಭಾವನೆ ನೀಡಲಾಗಿದೆಯಂತೆ. ಕಮಲ್‌, ಸಿನಿಮಾದ ಸಹ ನಿರ್ಮಾಪಕ ಸಹ.

    ವಿಜಯ್ ಸೇತುಪತಿಗೆ ಕೊಟ್ಟ ಸಂಭಾವನೆ ಎಷ್ಟು?

    ವಿಜಯ್ ಸೇತುಪತಿಗೆ ಕೊಟ್ಟ ಸಂಭಾವನೆ ಎಷ್ಟು?

    ಇನ್ನು ನಟ ವಿಜಯ್ ಸೇತುಪತಿಗೆ ಬರೋಬ್ಬರಿ 10 ಕೋಟಿ ಸಂಭಾವನೆ ನೀಡಲಾಗಿದೆಯಂತೆ. ಕಮಲ್ ಹಾಸನ್ ಅವರಿಗೆ ಹೋಲಿಸಿದರೆ ವಿಜಯ್‌ ಕಡಿಮೆ ದಿನಗಳು ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಕಮಲ್‌ಗೆ ಹೋಲಿಸಿದರೆ ವಿಜಯ್ ತಾರಾ ಮೌಲ್ಯವೂ ತುಸು ಕಡಿಮೆಯೇ ಹಾಗಾಗಿ ಅವರಿಗೆ ತುಸು ಕಡಿಮೆ ಸಂಭಾವನೆ ನೀಡಲಾಗಿದೆ.

    ಫಹಾದ್ ಫಾಸಿಲ್‌ಗೆ ಸಿಕ್ಕ ಸಂಭಾವನೆ ಎಷ್ಟು?

    ಫಹಾದ್ ಫಾಸಿಲ್‌ಗೆ ಸಿಕ್ಕ ಸಂಭಾವನೆ ಎಷ್ಟು?

    ಇನ್ನು ಅದ್ಭುತ ನಟ ಫಹಾದ್ ಫಾಸಿಲ್‌ಗೆ ನಾಲ್ಕು ಕೋಟಿಗಳನ್ನು ಸಂಭಾವನೆಯಾಗಿ ನೀಡಲಾಗಿದೆ. ಕಮಲ್ ಹಾಗೂ ವಿಜಯ್‌ಗೆ ಹೋಲಿಸಿದರೆ ತಮಿಳಿನಲ್ಲಿ ಫಹಾದ್‌ಗೆ ತಾರಾ ಮೌಲ್ಯ ಕಡಿಮೆ, ಅಲ್ಲದೆ ಫಹಾದ್ ಫಾಸಿಲ್‌ ಹೆಚ್ಚು ದಿನ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲವಾದ್ದರಿಂದ ಅವರಿಗೆ ನಾಲ್ಕು ಕೋಟಿಯಷ್ಟೆ ಸಂಭಾವನೆ ನೀಡಲಾಗಿದೆ. ಮಲಯಾಳಂ ನಟರಾದ ಫಹಾದ್ ಫಾಸಿಲ್, ಮಲಯಾಳಂ ಮಾರುಕಟ್ಟೆಯಲ್ಲಿ ಇದಕ್ಕಿಂತಲೂ ಕಡಿಮೆ ಸಂಭಾವನೆಯನ್ನು ಸಿನಿಮಾಕ್ಕೆ ಪಡೆಯುತ್ತಾರೆ ಎನ್ನಲಾಗುತ್ತದೆ.

    ನಿರ್ದೇಶಕರ ಲೋಕೇಶ್ ಕನಕರಾಜ್‌ಗೆ ಸಿಕ್ಕಿದ್ದೆಷ್ಟು?

    ನಿರ್ದೇಶಕರ ಲೋಕೇಶ್ ಕನಕರಾಜ್‌ಗೆ ಸಿಕ್ಕಿದ್ದೆಷ್ಟು?

    ಸಿನಿಮಾದ ನಿರ್ದೇಶಕ ಲೋಕೇಶ್ ಕನಕರಾಜ್‌ಗೆ ಎಂಟು ಕೋಟಿ, ಸಂಗೀತ ನಿರ್ದೇಶಕ ಅನಿರುದ್ ರವಿಚಂದ್ರನ್‌ಗೆ 4 ಕೋಟಿ, ಇತರೆ ಕೆಲವು ಮುಖ್ಯ ತಂತ್ರಜ್ಞರಿಗೆ ನಾಲ್ಕು ಕೋಟಿ ಸಂಭಾವನೆ ನೀಡಲಾಗಿದೆ. 'ವಿಕ್ರಂ' ಸಿನಿಮಾ ಜೂನ್ 03 ರಂದು ತೆರೆಗೆ ಬರುತ್ತಿದೆ. ಸಿನಿಮಾದ ಟ್ರೇಲರ್ ಬಿಡುಗಡೆ ಆಗಿ ಅಬ್ಬರ ಎಬ್ಬಿಸಿದೆ. ಮೂವರು ವಿಲನ್‌ಗಳ ಕತೆಯನ್ನು 'ವಿಕ್ರಂ' ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಸಿನಿಮಾದಲ್ಲಿ ನಟ ಸೂರ್ಯ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ಸಿನಿಮಾಕ್ಕೆ ಬಂಡವಾಳ ಹೂಡಿರುವವರು ಸ್ವತಃ ಕಮಲ್ ಹಾಸನ್ ಹಾಗೂ ಆರ್.ಮಹೇಂದ್ರನ್.

    English summary
    How much remuneration Kamal Haasan recive for his upcoming movie Vikram. How much Vijay Sethupathi and Fahad Faasil got.
    Tuesday, May 31, 2022, 15:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X