»   » ಆಕ್ಷನ್ ಕಟ್ ನತ್ತ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ತ?

ಆಕ್ಷನ್ ಕಟ್ ನತ್ತ ಗೋಲ್ಡನ್ ಸ್ಟಾರ್ ಗಣೇಶ್ ಚಿತ್ತ?

Posted By: ಹರಾ
Subscribe to Filmibeat Kannada

ಕಿರುತೆರೆಯಿಂದ ಬೆಳ್ಳಿತೆರೆಗೆ ಬಂದು 'ಗೋಲ್ಡನ್ ಸ್ಟಾರ್' ಪಟ್ಟಕ್ಕೇರಿರುವ ಗಣೇಶ್, ಬರೀ ನಟ ಮಾತ್ರ ಅಲ್ಲ, ನಿರ್ದೇಶಕ ಕೂಡ ಹೌದು. ಈ ಹಿಂದೆ 'ಕೂಲ್...ಸಖತ್ ಹಾಟ್ ಮಗಾ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಗಣಿ, ಇದೀಗ ಮತ್ತೆ ಡೈರೆಕ್ಟರ್ ಕ್ಯಾಪ್ ತೊಡುವ ಮನಸ್ಸು ಮಾಡಿದ್ದಾರಂತೆ.

2011 ರಲ್ಲಿ ತೆರೆಕಂಡ 'ಕೂಲ್...ಸಖತ್ ಹಾಟ್ ಮಗಾ' ಚಿತ್ರ ಅಷ್ಟೇನು ಕಮಾಲ್ ಮಾಡ್ಲಿಲ್ಲ. ಪತ್ನಿ ಶಿಲ್ಪಾ ಗಣೇಶ್ ನಿರ್ಮಿಸಿದ್ದ ಈ ಚಿತ್ರ ಕಲೆಕ್ಷನ್ ನಲ್ಲಿ ವೀಕ್ ಇತ್ತು. ಹಾಗ್ನೋಡಿದ್ರೆ, ಗಣೇಶ್ ನಿರ್ದೇಶನಕ್ಕೆ ಇಳಿದ್ದಿದ್ದೇ ಅಚಾನಕ್ಕಾಗಿ. [ಗೋಲ್ಡನ್ ಸ್ಟಾರ್ ಗಣಿ ನಂಬಿ ಮೋಸ ಹೋಗಬೇಡಿ.! ಹುಷಾರ್..!!]

Kannada Actor Ganesh to direct a movie soon?

ಯಾವುದೇ ತಯಾರಿ ಇಲ್ಲದೆ, ಡೈರೆಕ್ಟರ್ ಖುರ್ಚಿ ಮೇಲೆ ಕೂತ ಗಣೇಶ್ ಕೈ ಸುಟ್ಟುಕೊಂಡರು. ಆದ್ರೀಗ, ಜಾಗರೂಕರಾಗಿರುವ ಗಣೇಶ್, ನಿರ್ದೇಶನದ ಸಕಲ ಜವಾಬ್ದಾರಿಗಳನ್ನೂ ಅರಿತಿದ್ದಾರೆ.

ತಮ್ಮ ಮೇಲೆ ಕಾನ್ಫಿಡೆನ್ಸ್ ಇರುವ ಕಾರಣ ಮತ್ತೆ ನಿರ್ದೇಶನ ಮಾಡುವುದಕ್ಕೆ ಗಣೇಶ್ ಮುಂದೆ ಬಂದಿದ್ದಾರಂತೆ. ಇದಕ್ಕಾಗಿ ಒಳ್ಳೆ ಕಥೆಗಳ ಹುಡುಕಾಟ ನಡೆಸುತ್ತಿದ್ದಾರೆ ಅನ್ನುತ್ತಿವೆ ಗಣೇಶ್ ಬಲ್ಲ ಮೂಲಗಳು. [ಗೋಲ್ಡನ್ ಸ್ಟಾರ್ ಗಣೇಶ್ ಮನೆ ಹೊಸ ಅತಿಥಿ ರಣ್ಬೀರ್!]

ಪತ್ನಿ ಶಿಲ್ಪಾ ಗಣೇಶ್ ಈಗ ಗರ್ಭಿಣಿಯಾಗಿರುವ ಕಾರಣ, ಹೊಸ ಅತಿಥಿ ಮನೆಗೆ ಬಂದ ಮೇಲೆ ತಮ್ಮ ನಿರ್ದೇಶನದ ಚಿತ್ರಕ್ಕೆ ಚಾಲನೆ ನೀಡ್ತಾರಂತೆ ಗಣೇಶ್. ಅದಕ್ಕೂ ಮುನ್ನ ಈಗಾಗಲೇ ಕಮಿಟ್ ಆಗಿರುವ 'ZOOಮ್' ಮತ್ತು 'ಸ್ಟೈಲ್ ಕಿಂಗ್' ಚಿತ್ರಗಳು ಕಂಪ್ಲೀಟ್ ಆಗಬೇಕು. ಅಂದ್ಮೇಲೆ ಗಣೇಶ್ ಮತ್ತೆ ಡೈರೆಕ್ಟರ್ ಆಗುವುದು ಮುಂದಿನ ವರ್ಷವೇ.

English summary
Kannada Actor Golden Star Ganesh is all set to direct a movie again. According to the sources, the Actor is looking for a good script.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada