»   » ಬಿಚ್ಚಮ್ಮಂದಿರಿಗೆ ಇರೋ ಮನ್ನಣೆ ಕನ್ನಡಾಂಬೆಗೆ ಸಿಕ್ಕಿಲ್ಲ.!

ಬಿಚ್ಚಮ್ಮಂದಿರಿಗೆ ಇರೋ ಮನ್ನಣೆ ಕನ್ನಡಾಂಬೆಗೆ ಸಿಕ್ಕಿಲ್ಲ.!

Posted By: ಹರಾ
Subscribe to Filmibeat Kannada

''ನಾನು ಕನ್ನಡದ ಕಟ್ಟಾಳು. ಕನ್ನಡಕ್ಕೆ ಕಿಂಚಿತ್ತು ಅವಮಾನವಾದ್ರೆ ನಾಗರಹಾವಿನಂತೆ ಕೆರಳೋನು ನಾನು. ಹೀಗಾಗಿ ನಾನು ಈಗಲೂ ಅಚ್ಚ ಕನ್ನಡದಲ್ಲೇ ಟ್ವೀಟ್ ಮಾಡ್ತೀನಿ. ಇದು ಕನ್ನಡಮ್ಮನಿಗೆ ನನ್ನ ಕಡೆಯಿಂದ ಸಲ್ಲಿಸುತ್ತಿರುವ ಕಿರುಸೇವೆ.''

''ದುರಂತ ಅಂದ್ರೆ ನಾನು ಸೇರಿದಂತೆ ಕನ್ನಡವನ್ನು ಬಳಸೋರಿಗೆ ಟ್ವೀಟ್ ಫಾಲೋವರ್ಸ್ ಇರೋದೇ ಕಡಿಮೆ. ಜೊತೆಗೆ ಕನ್ನಡದ ವಿಚಾರವನ್ನ ಕಂಡ್ರೆ ಕಣ್ಣು ಮಿಟುಕಿಸಿ, ಹಲ್ಲು ಕಿರಿಯೋರ ಸಂಖ್ಯೆ ಜಾಸ್ತಿ.''

Kannada Actor Jaggesh speaks about Kannada language negligence in Twitter

''ಆದ್ರೆ, ಕನ್ನಡದ ಗಂಧವೂ ಗಾಳಿಯೂ ಇಲ್ಲದೆ, ಬಿಂದಾಸ್ ಫೋಟೋ ಹಾಕೋ ಬಿಚ್ಚಮ್ಮಂದಿರಿಗೆ ನಮಗಿಂತ ಫಾಲೋವರ್ಸ್ ಸಂಖ್ಯೆ ದುಪ್ಪಟ್ಟು. ಅದೂ ನಮ್ಮೂರಲ್ಲೇ. ಹಿಂಗಾದ್ರೆ ಕರುನಾಡಲ್ಲಿ ಕನ್ನಡ ಪ್ರೇಮ ಮೆರೆಯೋರ ಸ್ಥಿತಿಗತಿ ಹೆಂಗೆ''

ಹೀಗಂತ ಬೇಸರಗೊಂಡು ಮಾತನಾಡಿದವರು ನಟ ಮತ್ತು ರಾಜಕಾರಣಿ ಜಗ್ಗೇಶ್. ನವರಸ ನಾಯಕ ಜಗ್ಗೇಶ್ ಹೇಳಿದರಲ್ಲೂ ಅರ್ಥ ಇದೆ. ಮೂರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಜಗ್ಗೇಶ್ ಕನ್ನಡ ಪರ ಹೋರಾಟಗಾರ ಕೂಡ ಹೌದು. [ನಟ ಜಗ್ಗೇಶ್ ಬೇಸರ ಯಾರ ಮೇಲೆ?]

ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಕನ್ನಡದಲ್ಲೇ ಟ್ವೀಟ್ ಮಾಡುವ ಜಗ್ಗೇಶ್ ಇದ್ದದ್ದನ್ನ ಇದ್ದ ಹಾಗೇ ಫಿಲ್ಟರ್ ಇಲ್ಲದೆ ಹೇಳ್ತಾರೆ. ಆದರೂ, ಜಗ್ಗೇಶ್ ಪರ ನಿಲ್ಲೋರ ಸಂಖ್ಯೆ ಕಡಿಮೆ. ಅದೇ, ಬೋಲ್ಡ್ ಹೀರೋಯಿನ್ ಗಳು ಒಂದು ಫೋಟೋ ಹಾಕಿದರೆ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ಆಗುತ್ತದೆ. [ಅಧಿಕಪ್ರಸಂಗ ಚಿತ್ರರಂಗವನ್ನ ದಾರಿತಪ್ಪಿಸುತ್ತಿದೆ - ಜಗ್ಗೇಶ್]

ಜನರಿಗೆ ಕನ್ನಡ ಪರ ಕಾಳಜಿ ಇಲ್ಲ. ಇದರಿಂದ ಕನ್ನಡ ನಶಿಸುತ್ತಿದೆ ಅಂತ ಕಳವಳ ವ್ಯಕ್ತಪಡಿಸಿದ್ದಾರೆ ಜಗ್ಗೇಶ್.

English summary
Kannada Actor Jaggesh is annoyed with the negligence of Kannada Language in Twitter. Here is what the Actor spoke about the issue.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada