ಹೊಸ ವಿವಾದಕ್ಕೆ ನಾಂದಿ ಹಾಡಿದ 'ಫ್ಲಾಪ್' ಸಿನಿಮಾ
ರಾಮನ ಕೈಗೆ ಬಿಲ್ಲುಬಾಣಕ್ಕಿಂತ ಗನ್ ಚೆನ್ನಾಗಿ ಸೂಟ್ ಆಗುತ್ತೆ. ಇದು ಕಲಿಯುಗ, ಈಗಲೂ ಬಿಲ್ಲು ಬಾಣ ಹಿಡ್ಕೊಂಡಿದ್ರೆ ದುಷ್ಟ ಶಕ್ತಿಗಳು ಬಾಂಬು ಗನ್ನು ಅಂತ ಪವರ್ ಫುಲ್ ಶಸ್ತ್ರಾಸ್ತ್ರಗಳನ್ನ ಹಿಡ್ಕೋತಾರೆ. ಹಾಗಾಗಿ ರಾಮನ ಕೈಗೆ ಕಲಿಯುಗದ ಆಯುಧ ಗನ್ನು ಕೊಟ್ಟಿದ್ದಾರೆ.
ಇಷ್ಟಕ್ಕೂ ಹೀಗೆ ಗನ್ನು ಕೊಟ್ಟಿರೋ ಚಿತ್ರತಂಡಕ್ಕೂ ಈ ಚಿತ್ರಕ್ಕೂ ಒಂದು ಕಾಕತಾಳೀಯ ಇದೆ. ಇದು 'ಫ್ಲಾಪ್' ಅನ್ನೋ ಚಿತ್ರದ ಕಾನ್ಸೆಪ್ಟ್. ಚಿತ್ರದಲ್ಲಿರೋ ಹಾಡೊಂದರಲ್ಲಿ ಜಗತ್ತಿನ ಅತ್ಯಾಚಾರ ಅನಾಚಾರವನ್ನ ಎದುರಿಸೋಕೆ ಶ್ರೀರಾಮ ಬರಬೇಕು ಅನ್ನೋ ಅರ್ಥವಿದೆ.

ಇದೊಂದು ಹೀರೋಲೆಸ್ ಸಿನಿಮಾ. ಸಿನಿಮಾದಲ್ಲಂತೂ ಹೀರೋಗಳಿಲ್ಲ. ಇನ್ನು ಶ್ರೀರಾಮನಂತಹ ಪುರುಷೋತ್ತಮನನ್ನೂ ವಿಲನ್ ಮಾಡ್ತಿರೋದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ. ಈ ಚಿತ್ರವನ್ನು ಕೆ.ಎಸ್.ದೇವರಾಜ್ ನಿರ್ಮಿಸುತ್ತಿದ್ದಾರೆ.
ಆದರೆ ಇದೆಲ್ಲದಕ್ಕೂ ದೇವರೇ ಯಾಕೆ ಬೇಕು. ದೇವರನ್ನ ಕಾಮಿಡಿ ವಸ್ತುವಾಗಿ ಇಲ್ಲದಿದ್ರೆ ಅಪಮಾನಕಾರಿಯಾಗಿ ತೋರಿಸೋ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಆಗಾಗ ಸುದ್ದಿ ಮಾಡ್ತಿವೆ. ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'ಬಸವಣ್ಣ' ಚಿತ್ರವೂ ಗನ್ ನಿಂದಾಗಿ ವಿವಾದಕ್ಕೆ ಒಳಗಾಗಿತ್ತು.


Click it and Unblock the Notifications











