For Quick Alerts
  ALLOW NOTIFICATIONS  
  For Daily Alerts

  ಚಾಲೆಜಿಂಗ್ ಸ್ಟಾರ್ ದರ್ಶನ್ ಗೆ ಸುದೀಪ್ ಆಕ್ಷನ್ ಕಟ್?

  |

  ಎಲ್ಲಾ ಅಂದುಕೊಂಡಂತೆ ಆದರೆ ಮುಂದಿನ ವರ್ಷ ಮಾರ್ಚ್ ವೇಳೆಗೆ ನಾನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ಸಿನಿಮಾ ಡೈರೆಕ್ಟ್ ಮಾಡುವೆ... ಹೀಗೊಂದು ಟ್ವೀಟ್ ಹರಿಬಿಟ್ಟಿದ್ದಾರೆ ಕಿಚ್ಚ ಸುದೀಪ್.

  ಈಗಾಗಲೇ ಅವರು ದರ್ಶನ್‍ಗೆ ಹೊಂದುವಂಥ ಕತೆಯ ಹುಡುಕಾಟದಲ್ಲಿದ್ದಾರೆ. ಇದರ ಜೊತೆಗೆ ಅವರು ಬಚ್ಚನ್ ಚಿತ್ರ ಮುಗಿಸಿಕೊಡಬೇಕಿದೆ. ಬಹುಶಃ ಡಿಸೆಂಬರ್ ಮೊದಲನೇ ವಾರದಲ್ಲಿ ಬಚ್ಚನ್ ಶೂಟಿಂಗ್ ಮುಗಿಯಬಹುದು.

  ಅದಾದ ನಂತರ ಸುದೀಪ್ ಏನು ಮಾಡುತ್ತಾರೆ ಎಂಬ ಕುತೂಹಲ ಹಲವರಿಗಿತ್ತು. ಸಾಕಷ್ಟು ನಿರ್ಮಾಪಕರು ಸೂಟ್‍ಕೇಸ್ ಹಿಡಿದು ಸುದೀಪ್ ಮನೆ ಎದುರು ನಿಂತಿದ್ದಾರೆ. ಹೀಗಿದ್ದೂ ಕಿಚ್ಚ ನಿರ್ದೇಶನಕ್ಕಿಳಿಯುವ ಯೋಚನೆಯಲ್ಲಿದ್ದಾರೆ.

  ಅದರ ನಡುವೆ ಸಿಸಿಎಲ್ ಕ್ರಿಕೆಟ್ ಬರಲಿದೆ. ಇನ್ನು ಅವರ ಅಸಿಸ್ಟೆಂಟ್‍ಗಳು ರೆಡಿಮಾಡಿರುವ ಶಾರ್ಟ್ ಫಿಲಂಗಾಗಿ ಒಂದಷ್ಟು ಸಮಯ ಮೀಸಲಿಡಬೇಕಿದೆ. ಹೀಗಿರುವಾಗ ಕಿಚ್ಚನನ್ನು ಕಾಯುತ್ತಿರುವ ನಿರ್ಮಾಪಕರಿಗೆ ಸುದೀಪ್ ಏನು ಉತ್ತರ ಕೊಡುತ್ತಾರೆ..? ಅಷ್ಟಕ್ಕೂ ದರ್ಶನ್ ಒಪ್ಪಿಕೊಂಡಿದ್ದಾರಾ... ಎಂದು ಹುಡುಕ ತೊಡಗಿದರೆ, ಸದ್ಯಕ್ಕೆ ದರ್ಶನ್ ಔಟ್ ಆಫ್ ಸ್ಟೇಷನ್!

  ಬುಲ್‍ಬುಲ್ ಚಿತ್ರದ ಚಿತ್ರೀಕರಣಕ್ಕಾಗಿ ದರ್ಶನ್ ವಿದೇಶಕ್ಕೆ ಹಾರಿದ್ದಾರೆ. ಅಕ್ಟೋಬರ್ 16ನೇ ತಾರೀಕಿನವರೆಗೂ ದರ್ಶನ್ ನಾಟ್ ರೀಚಬಲ್!! ಅಲ್ಲಿಂದ ವಾಪಸ್ ಬಂದ ನಂತರ ಸಂಗೊಳ್ಳಿ ರಾಯಣ್ಣ ಚಿತ್ರದ ಪ್ರಮೋಷನ್‍ನಲ್ಲಿ ಪಾಲ್ಗೊಳ್ಳಬೇಕು.

  ಅದು ಮುಗಿಯುತ್ತಿದ್ದಂತೇ, ವಿರಾಟ್ ಚಿತ್ರದ ಉಳಿದ ಭಾಗದ ಚಿತ್ರೀಕರಣ ಮುಗಿಸಿಕೊಡಬೇಕು. ನಂತರ ಬುಲ್‍ಬುಲ್ ಅಂತಿಮ ಹಂತದ ಶೂಟಿಂಗ್. ಅದರ ಬೆನ್ನಲ್ಲೇ ಅಗ್ರಜ ಚಿತ್ರಕ್ಕೆ ಒಂದು ವಾರ ಬಣ್ಣ ಹಚ್ಚಬೇಕಿದೆ.

  ಹುಸ್ಸಪ್ಪ... ಇಷ್ಟು ಮುಗಿಸುವಷ್ಟರಲ್ಲಿ ಹೊಸ ವರ್ಷ ಬಂದಿರುತ್ತದೆ. ಆಗ ದರ್ಶನ್ ಇನ್ನೆಷ್ಟು ಚಿತ್ರಕ್ಕೆ ಸೈನ್ ಮಾಡಿರುತ್ತಾರೋ ಕಾದು ನೋಡಬೇಕು.

  English summary
  If every thing goes well I am going to direct Darshan movie in March 2013.. Kichcha Sudeep tweeted.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X