»   » ಗೌಡರ ಮನೆ ಸೊಸೆಯಾಗುವರೇ ಲಕ್ಕಿ ಸ್ಟಾರ್ ರಮ್ಯಾ?

ಗೌಡರ ಮನೆ ಸೊಸೆಯಾಗುವರೇ ಲಕ್ಕಿ ಸ್ಟಾರ್ ರಮ್ಯಾ?

By: ಹರಾ
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಲಕ್ಕಿ ಸ್ಟಾರ್ ಅಂತ ಕೆರೆಸಿಕೊಂಡು, ಏಕ್ ದಂ ರಾಜಕೀಯಕ್ಕೆ ಧುಮುಕಿದ ರಮ್ಯಾ ಎಂ.ಪಿ.ಗದ್ದುಗೆಗೆ ಏರಿದ್ದೂ ಆಯ್ತು. ಅದರಿಂದ ಕೆಳಗಿಳಿದಿದ್ದೂ ಆಯ್ತು. ರಾಜಕೀಯವನ್ನ ನಂಬಿ ಸಿನಿಮಾ ಬಿಟ್ಟ ರಮ್ಯಾ, ಇತ್ತ ಇಲ್ಲೂ ಇರದೇ, ಅತ್ತ ಅಲ್ಲೂ ನಿಲ್ಲದೇ, ದಾರಿ ಕಾಣದೆ ಫಾರಿನ್ ಗೆ ಹಾರಿಬಿಟ್ಟರು.

ಅಷ್ಟಕ್ಕೂ ರಮ್ಯಾ ಈಗಿರೋದಾದರೂ ಎಲ್ಲಿ ಅಂದ್ರೆ, ಮೂಲಗಳ ಪ್ರಕಾರ ಲಂಡನ್ ನಲ್ಲಿ ಅನ್ನುವುದು ಹಳೇ ನ್ಯೂಸ್. ಆದರೆ ಮೊನ್ನೆಮೊನ್ನೆಯಷ್ಟೇ ನ್ಯೂಯಾರ್ಕ್ ನ ಮಾನವ ಹಿತಕಾರಿ ಸಮಾರಂಭದ ಔತಣ ಕೂಟದಲ್ಲಿ ಪಾಲ್ಗೊಂಡು ''ನಾನು ಹೀಗಿದ್ದೀನಿ'' ಅಂತ ಹಿಂದಿಗಿಂತಲೂ ತೆಳ್ಳಗಾಗಿರುವ ರಮ್ಯಾ ಪೋಸ್ ಕೊಟ್ಟಿರುವ ಫೋಟೋವನ್ನ ಟ್ವೀಟ್ ಮಾಡಿದ್ದರು.

ಹಾಗಾದ್ರೆ, ನ್ಯೂಯಾರ್ಕ್ ಗೆ ರಮ್ಯಾ ಶಿಫ್ಟ್ ಆದ್ರಾ ಅಂತ ಕನ್ಫ್ ಫ್ಯೂಸ್ ಆಗಬೇಕಿಲ್ಲ. ಯಾಕಂದ್ರೆ, ರಮ್ಯಾ ತಾಯಿಯೇ ಹೇಳಿರುವ ಪ್ರಕಾರ ಅವರು ಲಂಡನ್ ನಲ್ಲಿ ರಾಜ್ಯಶಾಸ್ತ್ರ ವ್ಯಾಸಂಗ ಮಾಡುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನದಲ್ಲಿ ಗಟ್ಟಿಯಾಗಿ ನೆಲೆಯೂರುವುದಕ್ಕೆ ಸಕಲ ಸಿದ್ಧತೆ ನಡೆಸುತ್ತಿದ್ದಾರೆ. [ಹೇಗಿದ್ದ ಲಕ್ಕಿ ಸ್ಟಾರ್ ರಮ್ಯಾ ಈಗ ಹೇಗಾಗಿದ್ದಾರೆ ನೋಡಿ]

ರಾಜಕೀಯ ಮಾತ್ರವಲ್ಲ, ವೈಯುಕ್ತಿಕ ವಿಚಾರದಲ್ಲೂ ರಮ್ಯಾ ಮುಂದುವರಿದಿದ್ದಾರೆ. ಲಂಡನ್ ನಲ್ಲಿ ರಾಜಕೀಯ ಪಾಠದ ಜೊತೆಗೆ ಪ್ರೇಮಪಾಠವನ್ನೂ ಚಾಚೂ ತಪ್ಪದೇ ಅಭ್ಯಾಸ ಮಾಡ್ತಿದ್ದಾರಂತೆ. ಕಳೆದುಹೋಗಿರುವ ಕಹಿ ಅನುಭವವನ್ನ ಮರೆತು ಪ್ರೀತಿ, ಪ್ರೇಮ, ಪ್ರಣಯ ಅಂತ ಲಕ್ಕಿ ಸ್ಟಾರ್ ಪ್ರೇಮಲೋಕದಲ್ಲಿ ತೇಲಾಡುತ್ತಿದ್ದಾರಂತೆ.

Divya Spandana2

ನಂಬಿದ್ರೆ ನಂಬಿ, ರಮ್ಯಾಗೆ ಮತ್ತೆ ಪ್ರೇಮಾಂಕುರವಾಗಿದೆ. ಅದು ಮತ್ತೊಮ್ಮೆ 'ಬಿಳಿ' ರಾಜಕುಮಾರನ ಜೊತೆಯಲ್ಲ. ಲಂಡನ್ ನಲ್ಲಿ ನೆಲೆಸಿರುವ ಗೌಡರ ಹುಡುಗ. ಅಪ್ಪಟ ಕನ್ನಡಿಗನೊಂದಿಗೆ ಎನ್ನಲಾಗಿದೆ. ಹೌದು, ಲಂಡನ್ ನಲ್ಲಿರುವ ಮಂಡ್ಯದ ಗೌಡರ ಕುಡಿಯನ್ನ ಕಂಡು ರಮ್ಯಾ ಕ್ಲೀನ್ ಬೌಲ್ಡ್ ಆಗ್ಬಿಟ್ಟಿದ್ದಾರಂತೆ.

ಆತನಿಗೂ ರಮ್ಯಾ ಕಂಡ್ರೆ ಪ್ರಾಣ. ಇಬ್ಬರ ಪ್ರಣಯ ಪುರಾಣಕ್ಕೆ ಲಂಡನ್ ನ ಬೀದಿಬೀದಿಗಳು, ಕಾಫಿ ಬಾರ್ ಗಳೇ ಸಾಕ್ಷಿ ಅನ್ನುತ್ತಿವೆ ರಮ್ಯಾ ಆಪ್ತ ಮೂಲಗಳು. ಈಗಾಗ್ಲೇ ಒಂದೇ ಮನೆಯಲ್ಲಿ ನೆಲೆಯೂರಿರುವ ಈ ಪ್ರೇಮಪಕ್ಷಿಗಳು ಸದ್ಯದಲ್ಲೇ ಸಪ್ತಪದಿ ತುಳಿಯುವ ಆಲೋಚನೆಯಲ್ಲಿದ್ದಾರಂತೆ. ಗುರುಹಿರಿಯರು ಅಸ್ತು ಅನ್ನಬೇಕಷ್ಟೇ! [ಫಾರಿನ್ ನಲ್ಲೇ ಸೆಟ್ಲ್ ಆಗ್ತಾರಾ ರಮ್ಯಾ ಮೇಡಂ?]

ಎತ್ತ ಕಳೆದು ಹೋದ ರಫೇಲ್? : ಸಂಜು ವೆಡ್ಸ್ ಗೀತಾ ಸಿನಿಮಾ ನಂತ್ರ ರಮ್ಯಾ ಕೆಲ ಕಾಲ ಗಾಂಧಿನಗರದಿಂದ ಮಾಯವಾಗ್ತಿದ್ದಂತೆ, ಇತ್ತ ರಫೇಲ್ ಕೂಡ ಪತ್ತೆನೇ ಇಲ್ಲ. 'ಬಿಳಿ' ರಾಜಕುಮಾರನ ಹೆಸ್ರಲ್ಲಿ ಹಚ್ಚೆ ಕೂಡ ಹಾಕಿಸಿಕೊಂಡಿದ್ದ ರಮ್ಯಾ, ನಂತ್ರ ಆತನ ಹೆಸರೇ ಎತ್ತಲಿಲ್ಲ. ಮಧ್ಯದಲ್ಲಿ ಬ್ರೇಕಪ್ ಅನ್ನೋ ಬ್ರೇಕಿಂಗ್ ನ್ಯೂಸ್ ಬರುವಷ್ಟರಲ್ಲಿ ರಮ್ಯಾ ರಾಜಕಾರಣಿಯಾಗಿದ್ದರು. [ರಮ್ಯಾ ಮತ್ತು ರಾಫೆಲ್ ಸೇರಬೇಕು ಅಂತ ಬರೆದಾಗಿದೆ]

ಅಂದು ಪಂಚರ್ ಆಗಿದ್ದ ರಮ್ಯಾ ಹಾರ್ಟಲ್ಲಿ ಈಗ ಮತ್ತೆ ಗಿಟಾರ್ ಬಾರಿಸುತ್ತಿದೆ. ಎಲ್ಲಾ ಸೇರಿ 'ವಾಲಗ' ಊದಿಸಿದರೆ ರಮ್ಯಾ ಮಂಡ್ಯ ಗೌಡರ ಸೊಸೆಯಾಗ್ತಾರೆ. ಅದೃಷ್ಟ ಚೆನ್ನಾಗಿದ್ದರೆ ಮಾವನ ಊರಿಗೇ ಮತ್ತೆ ಸಂಸದೇ ಆಗ್ತಾರೆ. ಇಂತ ಅವಕಾಶ ಯಾರಿಗುಂಟು. ಯಾರಿಗಿಲ್ಲ.

English summary
Sandalwood sources saying that, Lucky Star Ramya aka Divya Spandana is in love for the second time. This time Ramya is in love with a Kannadiga, Believed to be a 'Gowda' community, who is settle downed in London. The sources have revealed that the alleged couple are planning to tie the knot as soon as possible. Well Congrats and All the best Ramya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada