ಮಹತ್ವದ ಪ್ರಾಜೆಕ್ಟ್ ಗೆ ಕೈ ಹಾಕಿದ ಕ್ರಿಕೆಟಿಗ ಎಂ ಎಸ್ ಧೋನಿ

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಚಿತ್ರರಂಗಕ್ಕೆ ಬರ್ತಾರೆ ಎಂಬ ಸುದ್ದಿ ಬಹಳ ದಿನದಿಂದ ಸದ್ದು ಮಾಡ್ತಿದೆ. ಹಿಂದಿ ಚಿತ್ರವೊಂದನ್ನು ನಿರ್ಮಿಸುತ್ತಾರೆ ಅಥವಾ ಬಾಲಿವುಡ್ ಚಿತ್ರದಲ್ಲಿ ನಟಿಸುತ್ತಾರೆ ಎಂಬ ಮಾತಿದೆ.

ಇದೀಗ, ಅದಕ್ಕಿಂತ ವಿಶೇಷವಾದ ಸುದ್ದಿಯೊಂದು ಹೊರಬಿದ್ದಿದೆ. ಈ ಸುದ್ದಿ ನಿಜವೇ ಆದರೆ, ಧೋನಿ ಅಭಿಮಾನಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಮುಂಬೈ ಮಿರರ್ ವರದಿ ಮಾಡಿರುವ ಪ್ರಕಾರ ಎಂ ಎಸ್ ಧೋನಿ ಟಿವಿ ನಿರ್ಮಾಣ ಸಂಸ್ಥೆ ಸ್ಥಾಪಿಸಲು ಯೋಚಿಸಿದ್ದಾರಂತೆ. ಈ ಶೋ ಮೂಲಕ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ ಸೈನಿಕರ ಜೀವನ ಕಥೆಯನ್ನು ಜನರ ಮುಂದೆ ತರಲು ನಿರ್ಧರಿಸಿದ್ದಾರಂತೆ.

MS Dhoni Planning To Produce Tv Show

ಯೋಧರ ಜೀವನ, ಅವರು ನಡೆದ ಬಂದ ಹಾದಿಗಳನ್ನು ಈ ಟಿವಿ ಶೋನಲ್ಲಿ ಪ್ರಸ್ತತಪಡಿಸಲು ಧೋನಿ ಚಿಂತಿಸಿದ್ದಾರಂತೆ. ಪ್ರಮುಖವಾಗಿ ಪರಮವೀರ ಮತ್ತು ಅಶೋಕ ಚಕ್ರ ಪ್ರಶಸ್ತಿಗಳನ್ನ ಪಡೆದಿರುವ ಯೋಧರ ಸ್ಫೂರ್ತಿದಾಯಕ ಕಥೆಗಳನ್ನು ಈ ಕಾರ್ಯಕ್ರಮದ ಮೂಲಕ ಜನರ ಮುಂದೆ ತೆರೆದಿಡುವ ಉದ್ದೇಶ ಹೊಂದಿದ್ದಾರಂತೆ.

ಸದ್ಯ, ಇಂತಹದೊಂದು ಕಾರ್ಯಕ್ರಮಕ್ಕಾಗಿ ಎಲ್ಲ ರೀತಿಯ ತಯಾರಿ ಮಾಡಲಾಗುತ್ತಿದೆ ಎಂಬ ಮಾತಿದೆ. ಪ್ರೀ-ಪ್ರೊಡಕ್ಷನ್ ಹಂತದ ಕೆಲಸ ಆರಂಭವಾಗಿದ್ದು, ಸದ್ಯದಲ್ಲೇ ಅಧಿಕೃತವಾಗಿ ಪ್ರಕಟಣೆಯಾಗಲಿದೆಯಂತೆ.

ಅಂದ್ಹಾಗೆ, ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವಕಪ್ ಸೆಮಿಫೈನಲ್ ಸೋಲಿನ ಬಳಿಕ ಧೋನಿ ಭಾರತದ ಕ್ರಿಕೆಟ್ ತಂಡದಿಂದ ಹೊರಗುಳಿದಿದ್ದಾರೆ. ಈ ಮಧ್ಯೆ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ಬಂದಿದ್ದಾರೆ.

More from Filmibeat

English summary
Indian Cricket former Skipper Mahendra Singh Dhoni planning to produce tv show about jawans.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X