»   » ಗಂಗೂಲಿ ಬ್ಯಾಟಿಗೆ ನಗ್ಮಾ ಗ್ರಿಪ್‌!

ಗಂಗೂಲಿ ಬ್ಯಾಟಿಗೆ ನಗ್ಮಾ ಗ್ರಿಪ್‌!

Posted By: Super
Subscribe to Filmibeat Kannada

ಕಳೆದ ಶತಮಾನದ 90ರ ದಶಕದಾದಿಯಲ್ಲಿ 'ತಾನೇದಾರ್‌" ಹಿಂದಿ ಚಿತ್ರದ ಮಳೆ ಹಾಡಿನಲ್ಲಿ ಸಂಜಯ್‌ ದತ್‌ ಜೊತೆ ಬಿಚ್ಚಮ್ಮನಾಗಿ ಕುಣಿದ ನಗ್ಮಾಗೆ ಹುಟ್ಟೂರು ಮುಂಬಯಿ ಒಲಿಯಲಿಲ್ಲ. ವಸ್ತ್ರದ್ವೇಷವನ್ನು ಹುಟ್ಟಿನಿಂದಲೇ ರೂಢಿಸಿಕೊಂಡಂತಿದ್ದ ಈ ಅಗಾಧ (ಧಡೂತಿ) ಸುಂದರಿ ಚಂಗನೆ ಹಾರಿದ್ದು ತಮಿಳಿಗೆ. ಈಗ ಸುತ್ತಿಕೊಂಡಿರುವುದು ಗಂಗೂಲಿ ಬ್ಯಾಟಿನ ಹಿಡಿಗೆ !

1980ರ ದಶಕದ ಅಂತ್ಯ ಹಾಗೂ 90ರ ದಶಕದಾದಿಯಲ್ಲಿ ಈಕೆಯ ಕೈತುಂಬಾ ಕೆಲಸಗಳಿದ್ದುವು. ಅಭಿನಯ ಪ್ರಧಾನ ಪಾತ್ರಗಳಿಗಿಂತ ದೇಹ ಪ್ರದರ್ಶನಕ್ಕೇ ಈಕೆಯ ಪಾತ್ರಗಳು ಮೀಸಲು. ಒಂದು ಸಿನಿಮಾದಲ್ಲಿ ಕನಿಷ್ಠ ಒಂದು ಮಳೆಹಾಡಲ್ಲಿ ಈಕೆಯ ಮನನಾಟುವ(!) ನರ್ತನ. ಈಕೆಯ ಪಾತ್ರಗಳಿಗೆ ಭಾಷೆ ಬಾರದಿದ್ದುದು ತೊಡಕಾಗಲೇ ಇಲ್ಲ. ನಂತರ ತಂತಾನೇ ತಮಿಳು ಕಲಿತರು ಅನ್ನಿ. ಭಾರತದ ಮೈಕೆಲ್‌ ಜಾಕ್ಸನ್‌ ಪ್ರಭುದೇವ್‌ಗೂ ಬ್ರೇಕ್‌ ಕೊಟ್ಟ ಶಂಕರ್‌ ನಿರ್ದೇಶನದ 'ಕಾದಲನ್‌" ತಮಿಳು ಚಿತ್ರದಲ್ಲಿ ಈಕೆಗೂ ಅಭಿನಯಕ್ಕೆ ಒಂದಿಷ್ಟು ಅವಕಾಶವಿತ್ತು. ಶಂಕರ್‌ ಅಭಿನಯದ ಗಂಧ ತುಂಬಿದರು. ನಂತರ ಇದೇ ಜೋಡಿ ನಟಿಸಿದ 'ಲವ್‌ಬರ್ಡ್ಸ್‌" ಚಿತ್ರ ಹೇಳ ಹೆಸರಿಲ್ಲದಂತೆ ಫ್ಲಾಪ್‌ ಆಯಿತು.

ಈ ನಡುವೆ ತೆಲುಗು ಹಾಗೂ ಮಲಯಾಳಂ ಚಿತ್ರಗಳಲ್ಲೂ ಅಭಿನಯಿಸುವ, ಅಲ್ಲಲ್ಲ ಕುಣಿಯುವ ಅವಕಾಶ ಈ ನಟಿಗೆ ಸಿಕ್ಕಿತು. ಚಿರಂಜೀವಿ ಸೇರಿದಂತೆ ಅನೇಕ ಪ್ರಮುಖ ನಟರ ಜೊತೆ ಮಿಡ್‌ನೈಟ್‌ ಮಸಾಲ ಹಾಡುಗಳಲ್ಲಿ ಈಕೆ ಗುರ್ತಿಸಿಕೊಂಡರು. ಸಾಕಷ್ಟು ಹೆಸರು ಮಾಡಿರುವ ತಮಿಳು ನಟ ಶರತ್‌ ಕುಮಾರ್‌ ಜೊತೆ ಈಕೆಯ ಅಫೇರ್‌ ಇರುವುದು ಪತ್ತೆಯಾಯಿತು. ಸ್ವಲ್ಪ ದಿನದ ನಂತರ ಆ ಅಲೆಯೂ ಉಡುಗಿತು. ತಮಿಳು ತೆರೆಗೆ ಹೊಸ ಹೊಸ ತೆಳು ತಾರೆಯರು ಬರತೊಡಗಿದ್ದು, ಮಧ್ಯಮ ವಯಸ್ಸಿಗೆ ಕಾಲಿರಿಸುತ್ತಿದ್ದ, ದೇಹದ ಗಾತ್ರವನ್ನೂ ಸಾಕಷ್ಟು ಹೆಚ್ಚಿಸಿಕೊಂಡಿದ್ದ ನಗ್ಮಾಗೆ ಮುಳುವಾಯಿತು.

ಎಲ್ಲಿಗೆ ಹೋಗಲೂ ನಾ ರೆಡಿ ಎನ್ನುವ ಜಾಯಮಾನದ ನಗ್ಮಾ 'ಕನ್ನಡದ ಕುರುಬನ ರಾಣಿ"ಯಾಗಿ ಶಿವರಾಜ್‌ ಕುಮಾರ್‌ ಜೊತೆ ಅಭಿನಯಿಸಿದರು. 'ರವಿ ಮಾಮ" ಚಿತ್ರಕ್ಕೆ ಕರೆತಂದ ರವಿಚಂದ್ರನ್‌ 'ಕಲರ್‌ ಜೇನೆ" ಅಂತ ಹೊಗಳಿ ಹಾಡಿದರು.

ಇಷ್ಟೆಲ್ಲಾ ಆಗುವ ಹೊತ್ತಿಗೆ ನಗ್ಮಾರ ಪುಟ್ಟ ತಂಗಿ ಜ್ಯೋತಿಕಾ ದೊಡ್ಡವಳಾಗಿದ್ದಳು. 'ಡೋಲಿ ಸಜಾಕೆ ರಖ್‌ನಾ" ಹಿಂದಿ ಚಿತ್ರದಲ್ಲಿ ಅಭಿನಯಿಸಿ ಸೋತಳು. ಆದರೆ ಚಿತ್ರರಂಗದ ಆ ಅರ್ಯಾಂಗೇಟಮ್‌ ಮುಹೂರ್ತ ಚೆನ್ನಿತ್ತು ಅಂತ ಕಾಣುತ್ತದೆ, ತಮಿಳಿಗೆ ಕಾಲಿರಿಸಿ ಎರಡೇ ವರ್ಷದಲ್ಲಿ ಹುಡುಗರ ನಿದ್ದೆಗೆಡಿಸಿದಳು. ಈಗ ತಮಿಳಿನ ನಂಬರ್‌ ಒನ್‌ ನಟಿ ಜ್ಯೋತಿಕಾ !

ಇವತ್ತಿಗೂ ಶರತ್‌ ಕುಮಾರ್‌ ಕೈಲಿ ಸಿನಿಮಾಗಳುಂಟು. ಆದರೆ ನಗ್ಮಾ ಕೈಲಿ ಸಿನಿಮಾಗಳೇ ಇಲ್ಲದೆ ಸರಿ ಸುಮಾರು ಮೂರು ವರ್ಷಗಳಾದವು. 1998ರಿಂದಲೇ ಕ್ರಿಕೆಟಿಗ ಗಂಗೂಲಿ ಜೊತೆ ಅಲ್ಲಲ್ಲಿ ಕಾಣುತ್ತಿದ್ದ ನಗ್ಮಾ ಈಗ ಆತನ ಕೆಟ್ಟ ಆಟಕ್ಕೆ ಸ್ಫೂರ್ತಿ ಎಂಬ ಕುಖ್ಯಾತಿಗೆ ಪಾತ್ರರಾಗುತ್ತಿದ್ದಾರೆ. ಚೆನ್ನೈನ ಸಿದ್ಧತಾ ಶಿಬಿರದ ವೇಳೆ ಕಾಳಹಸ್ತಿ ದೇವಸ್ಥಾನದಲ್ಲಿ ಗಂಗೂಲಿ- ನಗ್ಮಾ ನಾಗಪೂಜೆ ಸಲ್ಲಿಸಿದ ನಂತರ ಚೆನ್ನೈನ ಮಾಧ್ಯಮದ ತುಂಬೆಲ್ಲಾ ನಗ್ಮಾ- ಗಂಗೂಲಿ ಓಡಾಟದ್ದೇ ಸುದ್ದಿ.

ಜ್ಯೋತಿಕಾಗೆ ಅಕ್ಕನ ಮೇಲೆ ಪ್ರೀತಿ ಇದೆ. ಅವಕಾಶ ವಂಚಿತೆ ಅಕ್ಕನಿಗೊಂದು ಕೆಲಸ ಕೊಡಿ ಅಂತ ಸಿಕ್ಕ ಸಿಕ್ಕ ನಿರ್ಮಾಪಕರಲ್ಲಿ ಅಲವತ್ತುಕೊಳ್ಳುತ್ತಿದ್ದಾರೆ. ಇದರ ಪರಿಣಾಮವೇ ಈಗ ಅಜಿತ್‌ ನವಪಾತ್ರದಲ್ಲಿ ಅಭಿನಯಿಸುತ್ತಿರುವ ಚಿತ್ರ 'ಸಿಟಿಜನ್‌"ನ ಒಂದು ಹಾಡಿಗೆ ನಗ್ಮಾ ಕುಣಿಯಲಿದ್ದಾರೆ. ಗೊತ್ತೋ, ಗೊತ್ತಿಲ್ಲದೆಯೋ ಗಂಗೂಲಿ ಕೆರಿಯರ್ರಿಗೆ ಕಂಟಕರಾಗಿರುವ ಅಥವಾ ಅಂಥ ಆರೋಪಕ್ಕೆ ಈಡಾಗುತ್ತಿರುವ ನಗ್ಮಾ ಬೋನಿನಿಂದ ಗಂಗೂಲಿ ಹೊರಬರಲು ಆಕೆಗೆ ಕೈತುಂಬಾ ಅವಕಾಶ ಸಿಗಬೇಕು. ಈಗಿನ ಪರಿಸ್ಥಿತಿಯಲ್ಲಿ ಅದಕ್ಕೊಂದು ಪವಾಡ ಆಗಬೇಕಷ್ಟೆ.

Read more about: ನಗ್ಮಾ nagma
English summary
Know Nagma, actress who is blamed for Gangulys losing grip

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X