»   » ನಯನತಾರಾ ಮದುವೆ? ಯಾರಪ್ಪಾ ಆ ಅದೃಷ್ಟವಂತ

ನಯನತಾರಾ ಮದುವೆ? ಯಾರಪ್ಪಾ ಆ ಅದೃಷ್ಟವಂತ

By: ರವಿಕಿಶೋರ್
Subscribe to Filmibeat Kannada

ಕೇರಳ ಕುಟ್ಟಿ ನಯನತಾರಾ ಮದುವೆಗೆ ಸಂಬಂಧಿಸಿದ ಸುದ್ದಿಗಳು ಆಗಾಗ ಕಿವಿಗೆ ಬೀಳುತ್ತಲೇ ಇರುತ್ತವೆ. ಇದೀಗ ಮತ್ತೊಮ್ಮೆ ಅವರ ಮದುವೆಗೆ ಸಂಬಂಧಿಸಿದ ತಾಜಾ ಸುದ್ದಿಯೊಂದು ಹರಿದಾಡುತ್ತಿದೆ. ತಮಿಳು ನಟಿಯೊಬ್ಬರ ಸೊಸೆಯಾಗುತ್ತಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿಬರುತ್ತಿವೆ.

ಇಷ್ಟಕ್ಕೂ ಆ ತಮಿಳು ನಟಿ ಯಾರು, ನಯನತಾರಾ ಕೈಹಿಡಿಯಲಿರುವ ಹುಡುಗ ಯಾರು ಎಂಬ ಬಗ್ಗೆ ಸಾಕಷ್ಟು ಊಹಾಪೋಹಗಳು ರೆಕ್ಕೆ ಕಟ್ಟಿಕೊಂಡು ಹಾರಾಡುತ್ತಿವೆ. ಎರಡು ಬಾರಿ ಪ್ರೇಮ ವೈಫಲ್ಯಕ್ಕೆ ಒಳಗಾಗಿರುವ ನಯನತಾರಾ ತಮ್ಮ ಜೀವನವನ್ನು ಹಾಯಾಗಿ ಕಳೆಯುತ್ತಿದ್ದಾರೆ. [ಯಾರಾಗುವರು ನಯನತಾರಾ ಕನಸಿನ ರಾಜಕುಮಾರ?]

Nayantara to marry a Tamil actress son

ಜೀವನದಲ್ಲಿ ಎರಡು ಬಾರಿ ಎಡವಿದರೂ ಅವರ ವೃತ್ತಿ ಬದುಕು ಮಾತ್ರ ಹಳಿ ತಪ್ಪದಂತೆ ಸಾಗುತ್ತಿದೆ. ಸೂರ್ಯ, ಕಾರ್ತಿಯಂತಹ ಸೀನಿಯರ್ ನಟರ ಜೊತೆಗೆ ವಿಜಯ್ ಸೇತುಪತಿಯವರೆಗೂ ಪ್ರಮುಖ, ಯುವ ನಟರ ಜೊತೆಗೆ ಅಭಿನಯಿಸುತ್ತಿದ್ದಾರೆ.

ನಟಿ ಖುಷ್ಬು ಅವರಂತೆ ನಯನತಾರಾ ಸಹ ನಟಿಯೊಬ್ಬರ ಸೊಸೆಯಾಗಲಿದ್ದಾರೆ ಎನ್ನುತ್ತವೆ ಮೂಲಗಳು. ಆದರೆ ಆ ನಟಿ ಯಾರು, ಅವರು ಕೈಹಿಡಿಯಲಿರುವ ಹುಡುಗ ಯಾರು ಎಂಬುದು ಮಾತ್ರ ಇನ್ನೂ ಗುಟ್ಟಾಗಿದೆ.

ಇತ್ತೀಚಿನ ದಿನಗಳಲ್ಲಿ ನಯನತಾರಾ ಶೂಟಿಂಗ್ ಮುಗಿಯುತ್ತಿದ್ದಂತೆ ತನ್ನ ರೂಮಿಗೆ ಹೋಗಿ "ಹಮ್ ತುಮ್ ಏಕ್ ಕಮರೇಮೆ ಬಂದ್ ಹೋ" ಎಂದು ಹಾಡಿಕೊಳ್ಳುತ್ತಿದ್ದಾರಂತೆ. ಇಷ್ಟು ದಿನ ಮೂಡಿಯಾಗಿರುತ್ತಿದ್ದ ನಯನಿ ಚಿತ್ರತಂಡದ ಜೊತೆಗೂ ಖುಷಿ ಖುಷಿಯಾಗಿರುತ್ತಾರಂತೆ. ಬಹುಶಃ ಅವರ ಈ ಸಂತೋಷಕ್ಕೆ ಕಾರಣ ಹೊಸ 'ಸಂಬಂಧ' ಎಂಬುದು ವಿಶೇಷ.

English summary
Tamil film industry buz is that actress Nayantara is going to marry a Tamil actress son.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada