Just In
Don't Miss!
- News
ಹಲ್ವಾ ಸಮಾರಂಭದೊಂದಿಗೆ ಅಂತಿಮ ಹಂತದಲ್ಲಿ ಬಜೆಟ್ 2021
- Finance
ಬಜೆಟ್ 2021: ಐ.ಟಿ. ಫೈಲಿಂಗ್ ನಲ್ಲಿ PAN ಕಾರ್ಡ್ ಗೆ ಏಕಿಷ್ಟು ಮಹತ್ವ, ಏನಿದರ ವಿಶೇಷ?
- Sports
ಐಪಿಎಲ್ 2021: ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸಂಗಕ್ಕರ ಬಲ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ರಾಧಾ ರಮಣ' ರಾಧಾ ಬಿಟ್ಟು ಹೋದ ಪಾತ್ರಕ್ಕೆ ಕಿರುತೆರೆಯ ಸ್ಟಾರ್ ನಟಿ ಎಂಟ್ರಿ.!
ಕಲರ್ಸ್ ಕನ್ನಡ ವಾಹಿನಿ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ರಾಧಾರಮಣ. ಹಿಂದಿನ ಕಾಲದ ಮುದುಕ, ಮುದುಕಿಯರಿಂದ ಹಿಡಿದು ಈಗಿನ ಕಾಲದ ಯುವತಿ, ಯುವಕರ ವರೆಗೂ ರಾತ್ರಿ 9 ಗಂಟೆಯಾದ್ರೆ ಟಿವಿ ಮುಂದೆ ಹಾಜರ್ ಆಗಿ ನೋಡುವ ಧಾರಾವಾಹಿ ಇದು. ಅದಕ್ಕೆ ಟಿ.ಆರ್.ಪಿಯಲ್ಲೂ ಮುಂದಿದೆ.
ರಾಧಾ ಪಾತ್ರದ ಮೂಲಕ ಎಲ್ಲರ ಮನೆಮಾತಾಗಿದ್ದ ರಾಧಾ ಮಿಸ್ ಖ್ಯಾತಿಯ ಶ್ವೇತಾ ಪ್ರಸಾದ್ ಈಗ ಸೀರಿಯಲ್ ನಿಂದ ಹೊರಬಂದಿದ್ದಾರೆ. ಹೆಚ್ಚು ಮಹಿಳಾ ಅಭಿಮಾನಿಗಳನ್ನ ಹೊಂದಿರುವ ಶ್ವೇತಾ ಅವರ ಈ ನಿರ್ಧಾರ ಬಹಿರಂಗವಾಗುತ್ತಿದ್ದ ಅನೇಕರು ಬೇಸರಗೊಂಡಿದ್ದು, ಮುಂದೆ ಈ ಪಾತ್ರವನ್ನ ಯಾರೂ ಮಾಡ್ತಾರೆ ಎಂಬ ಚರ್ಚೆಯಲ್ಲಿ ತೊಡಗಿಕೊಂಡಿದ್ದರು.
'ರಾಧಾ ರಮಣ' ಧಾರಾವಾಹಿಯಿಂದ ಹೊರಬಂದ ಶ್ವೇತಾ ಪ್ರಸಾದ್!
ಇದೀಗ, ಆ ಚರ್ಚೆಗೆ ಆ ಕುತೂಹಲಕ್ಕೆ ಒಂದು ಹಂತದ ಉತ್ತರ ಸಿಕ್ಕಿದೆ. ರಾಧಾ ಮಿಸ್ ಪಾತ್ರ ಮಾಡಲು ಮತ್ತೋರ್ವ ಕಿರುತೆರೆ ನಟಿ ಸಜ್ಜಾಗಿದ್ದು, ಈಕೆಯೂ ಟಿವಿ ಲೋಕದಲ್ಲಿ ಹೆಚ್ಚು ಅಭಿಮಾನಿಗಳನ್ನ ಹೊಂದಿದ್ದಾರೆ. ಅಷ್ಟಕ್ಕೂ ಯಾರದು? ರಾಧಾರಮಣ ಧಾರಾವಾಹಿಯಲ್ಲಿ ಬರಲಿರುವ ಹೊಸ ರಾಧಾ ಯಾರು? ಮುಂದೆ ಓದಿ......

ಅಗ್ರಿಮೆಂಟ್ ಮುಗಿದ ಬೆನ್ನಲ್ಲೆ ಬ್ರೇಕ್.!
ಸುಮಾರು ಎರಡೂವರೆ ವರ್ಷದಿಂದ ರಾಧಾರಮಣ ಧಾರಾವಾಹಿಯಲ್ಲಿ ರಾಧಾ ಪಾತ್ರ ಮಾಡುತ್ತಿರುವ ಶ್ವೇತಾ ಪ್ರಸಾದ್ ಈಗ ಕಿರುತೆರೆಯಿಂದ ಬ್ರೇಕ್ ಪಡೆದುಕೊಳ್ಳಲು ನಿರ್ಧರಿಸಿದ್ದಾರೆ. ಒಂದು ವರ್ಷ ಅಗ್ರಿಮೆಂಟ್ ಹಾಕಿಕೊಂಡಿದ್ದ ಶ್ವೇತಾ ಅದಕ್ಕೂ ಮೇಲೆ ವರ್ಷ ಕಳೆದರೂ ಸುಮ್ಮನಿದ್ದರು. ಆದ್ರೀಗ, ನನಗೆ ಬ್ರೇಕ್ ಬೇಕು ಎಂಬ ಕಾರಣದಿಂದ ಧಾರಾವಾಹಿಯಿಂದ ಹಿಂದೆ ಸರಿಯುತ್ತಿದ್ದಾರೆ ಎನ್ನಲಾಗಿದೆ.

ರಾಧಾ ಇರೋದು ಸ್ವಲ್ಪ ದಿನ ಮಾತ್ರ
ಹಾಗ್ನೋಡಿದ್ರೆ ಇಷ್ಟೋತ್ತಿಗಾಲೇ ರಾಧಾ ಪಾತ್ರಧಾರಿ ಶ್ವೇತಾ ಅವರ ಎಪಿಸೋಡ್ ಮುಗಿಯಬೇಕಿತ್ತು. ಸದ್ಯದ ಮಾಹಿತಿ ಪ್ರಕಾರ ಶ್ವೇತಾ ಅವರ ಶೂಟಿಂಗ್ ಕೊನೆಯ ಹಂತದಲ್ಲಿದೆ. ಕೆಲವೇ ಕೆಲವು ದಿನ ಮಾತ್ರ ಅವರು ಈ ಧಾರಾವಾಹಿಯಲ್ಲಿ ಮುಂದುವರಿಯಲಿದ್ದಾರೆ. ಬಳಿಕ ಆ ಜಾಗಕ್ಕೆ ಮತ್ತೋರ್ವ ನಟಿ ಬರಲಿದ್ದಾರೆ.

ಕಾವ್ಯ ಗೌಡ ಆಗಬಹುದು ಹೊಸ ರಾಧಾ?
ಕಿರುತೆರೆಯ ಧಾರಾವಾಹಿಗಳ ಪೈಕಿ ಅತಿ ಹೆಚ್ಚು ಅಭಿಮಾನಿಗಳನ್ನ ಹೊಂದಿರುವ ರಾಧಾ ಪಾತ್ರಕ್ಕೆ ಕಿರುತೆರೆಯ ಮತ್ತೋರ್ವ ನಟಿ ಕಾವ್ಯ ಗೌಡ ಎಂಟ್ರಿಯಾಗಬಹುದು ಎಂಬ ಮಾತಿದೆ. ಆದ್ರೆ, ಎಷ್ಟರ ಮಟ್ಟಿಗೆ ನಿಜ ಎಂಬುದು ಸದ್ಯಕ್ಕೆ ಗೊತ್ತಿಲ್ಲ. ಬಟ್, ಕಾವ್ಯ ಗೌಡ ಈ ಪಾತ್ರ ಮಾಡೋದು ಪಕ್ಕಾ ಎನ್ನಲಾಗುತ್ತಿದೆ.

'ಗಾಂಧಾರಿ' ಫೇಮು ಕಾವ್ಯಗೆ ಪ್ಲಸ್.!
ಅಂದ್ಹಾಗೆ, ಕಾವ್ಯ ಗೌಡ ಕೂಡ ಕಿರುತೆರೆ ನಟಿ. ಪ್ಯಾಟೇ ಮಂದಿ ಕಾಡಿಗ್ ಬಂದ್ರು ರಿಯಾಲಿಟಿ ಶೋ ಮೂಲಕ ಟಿವಿ ಲೋಕಕ್ಕೆ ಎಂಟ್ರಿಯಾದ ಕಾವ್ಯ ಗೌಡ, ಶುಭವಿವಾಹ, ಮೀರಾ ಮಾಧವ ಹಾಗೂ ಗಾಂಧಾರಿ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಆರ್.ಜೆ ರೋಹಿತ್ ಅಭಿನಯಿಸಿದ್ದ 'ಬಕಾಸುರ' ಸಿನಿಮಾದಲ್ಲೂ ನಟಿಸಿದ್ದಾರೆ.

ಶ್ವೇತಾ ಪ್ರಸಾದ್ ಮುಂದಿನ ಆಯ್ಕೆ ಏನು?
ಸದ್ಯಕ್ಕೆ ಕಿರುತೆರೆಯಿಂದ ಬ್ರೇಕ್ ಪಡೆದುಕೊಳ್ಳುತ್ತಿರುವ ಶ್ವೇತಾ ಪ್ರಸಾದ್ ಮುಂದಿನ ಆಯ್ಕೆ ಏನು ಎಂಬುದನ್ನ ಹೇಳಿಕೊಂಡಿಲ್ಲ. ಈ ಹಿಂದೆ 'ಕಳ್ಬೆಟ್ಟದ ದರೋಡೆಕೋರರು' ಸಿನಿಮಾದಲ್ಲಿ ನಟಿಸಿದ್ದ ಶ್ವೇತಾ ಮುಂದೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ರಾಧಾ ಪ್ರಿಯರನ ಮನ ಗೆಲ್ಲುತ್ತಾರಾ ಕಾವ್ಯ.!
ರಾಧಾ ರಮಣ ಧಾರಾವಾಹಿ ಮೂಲಕ ಶ್ವೇತಾ ಪ್ರಸಾದ್ ಅವರ ಪಾತ್ರವನ್ನ ಇಷ್ಟಪಡುವ ಅನೇಕರಿದ್ದಾರೆ. ಈಗ ದಿಢೀರ್ ಅಂತ ಪಾತ್ರಧಾರಿ ಬದಲಾದಾಗ ಆ ಆಡಿಯೆನ್ಸ್ ಹಿಡಿದುಡುವುದು ಸವಾಲಿನ ಕೆಲಸ. ಹಳೇ ರಾಧಾ ಮಿಸ್ ಗೆ ಇದ್ದ ಪ್ರೇಕ್ಷಕರ ಬಳಗವನ್ನ ಕಾವ್ಯ ಗೌಡ ಹಿಡಿದಿಡುತ್ತಾರಾ ಎಂಬ ಪ್ರಶ್ನೆ ಈಗ ಎಲ್ಲರನ್ನ ಕಾಡುತ್ತಿದೆ. ಅದಕ್ಕೆ ಉತ್ತರ ಮುಂದಿನ ದಿನದಲ್ಲಿ ಸಿಗಲಿದೆ.