»   » ನಟಿ ನಯನತಾರಾರನ್ನು ಇನ್ನೂ ಕಾಡುತ್ತಿರುವ ಹಚ್ಚೆ

ನಟಿ ನಯನತಾರಾರನ್ನು ಇನ್ನೂ ಕಾಡುತ್ತಿರುವ ಹಚ್ಚೆ

By: ಉದಯರವಿ
Subscribe to Filmibeat Kannada

ಹಚ್ಚೆಗೂ ಮಚ್ಚೆಗೂ ಒಂದಷ್ಟು ವ್ಯತ್ಯಾಸ ಹಾಗೂ ಸಾಮ್ಯತೆಗಳಿವೆ. ಒಂದರ ಬಣ್ಣ ಕಪ್ಪು, ಇನ್ನೊಂದು ಹಸಿರು. ಒಂದು ಹುಟ್ಟಿನಿಂದಲೇ ಬಂದರೆ, ಇನ್ನೊಂದು ಹುಟ್ಟಿದ ಬಳಿಕ ಹಾಕಿಸಿಕೊಳ್ಳುವಂತಹದ್ದು. ಹಚ್ಚೆ ಹಾಗೂ ಮಚ್ಚೆ ಎರಡನ್ನೂ ಅಳಿಸಲಾಗಲ್ಲ ಆದರೆ ತೆಗೆಸಬಹುದು.

ದಕ್ಷಿಣದ ಬೆಡಗಿ ನಯನತಾರಾ ತಮ್ಮ ಪ್ರೇಮದ ನೆನಪಿಗಾಗಿ ಹಾಕಿಸಿಕೊಂಡಿದ್ದ ಹಳೆಯ ಹಚ್ಚೆಯನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಆಕೆಯ ಮಾಜಿ ಪ್ರಿಯತಮ ಪ್ರಭುದೇವಾ ಅವರನ್ನು ತಮ್ಮ ಮನಸ್ಸಿನಿಂದ ಅಳಿಸಿಹಾಕಿದ್ದರೂ ಕೈ ಮೇಲಿನ ಹಚ್ಚೆ ಮಾತ್ರ ಹಾಗೆಯೇ ಉಳಿದುಕೊಂಡಿದೆ.

ಇದು ಒಂಥರಾ ಹಳೆಯ ಗಾಯದ ಗುರುತಿನಂತೆ ಅವರನ್ನು ಆಗಾಗ ಕಾಡುತ್ತಲೇ ಇದೆಯಂತೆ. ತಮ್ಮ ಪ್ರೇಮದ ಸಂಕೇತವಾಗಿ ನಯನತಾರಾ ಈ ಹಚ್ಚೆಯನ್ನು ಹಾಕಿಸಿಕೊಂಡಿದ್ದರು. ಮನಸ್ಸಿನಲ್ಲಿ ಪ್ರಭುದೇವ ಇಲ್ಲದಿದ್ದರೂ ಕೈ ಮೇಲೆ ಮಾತ್ರ ಹಚ್ಚೆ ರೂಪದಲ್ಲಿ ಉಳಿದುಹೋಗಿದೆ.

ಇನ್ನೂ ಕಾಡುತ್ತಿರುವ ಹಳೆಯ ಹಚ್ಚೆ

ಇತ್ತೀಚೆಗೆ ಬಿಡುಗಡೆಯಾದ 'ಅಮರಕಾವ್ಯ' ಎಂಬ ತಮಿಳು ಚಿತ್ರದ ಆಡಿಯೋ ಬಿಡುಗಡೆಗೆ ಅವರು ಹಚ್ಚೆ ಕಾಣಿಸುವಂತೆ ಬಂದಿದ್ದರು. ಎಲ್ಲರ ದೃಷ್ಟಿಯೂ ಅದರ ಮೇಲೆ ಬಿತ್ತು. ಮನಸ್ಸಿನಲ್ಲಿ ಒಂದಷ್ಟು ಪ್ರಶ್ನೆಗಳೂ ಮೂಡಿದರೂ ಯಾರೂ ಪ್ರಶ್ನಿಸುವ ಧೈರ್ಯ ಮಾಡಲಿಲ್ಲ.

ಪ್ರಭುದೇವಗಾಗಿ ಅದೆಷ್ಟೋ ತ್ಯಾಗಗಳನ್ನು ಮಾಡಿದರು

ಪ್ರಭುದೇವ ಅವರನ್ನು ವರಿಸಲು ನಯನತಾರಾ ಹಿಂದೂಧರ್ಮವನ್ನೂ ಅನುಸರಿಸಿದರು. ಇದೆಲ್ಲಕ್ಕಿಂತಲೂ ಹೆಚ್ಚಾಗಿ ಜೀವಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಚಿತ್ರರಂಗವನ್ನೂ ತ್ಯಾಗ ಮಾಡಲು ಸಿದ್ಧವಾಗಿದ್ದರು. ಪ್ರಭುದೇವಗಾಗಿ ಅದೆಷ್ಟೋ ತ್ಯಾಗಗಳನ್ನು ಮಾಡಿದರು ನಯನಿ.

ಇನ್ನೂ ಮನಸ್ಸಿನಲ್ಲಿ ಪ್ರಭುದೇವ ಇದ್ದಾನಾ?

ನಯನತಾರಾ ತನ್ನ ಕೋಮಲವಾದ ಬಲಗೈ ಮೇಲೆ ಹಾಕಿಸಿಕೊಂಡ ಹಚ್ಚೆ ಮಾತ್ರ ಇನ್ನೂ ಹಾಗೇ ಉಳಿದಿದೆ. ಈ ಫೋಟೋಗಳನ್ನು ನೋಡುತ್ತಿದ್ದರೆ ಇನ್ನೂ ಆಕೆಯ ಮನಸ್ಸಿನಲ್ಲಿ ಎಲ್ಲೋ ಪ್ರಭುದೇವ ಇದ್ದಾನಾ ಎಂಬ ಅನುಮಾನ ಕಾಡುತ್ತದೆ.

ಮತ್ತೆ ಒಂದಾದ ಹಳೆಯ ಪ್ರೇಮಿಗಳು

ಪ್ರಭುದೇವಗಿಂತಲೂ ಮೊದಲು ಶಿಂಬು ಜೊತೆ ನಯನಿ ಪ್ರೇಮ ಪ್ರಸಂಗ ನಡೆದಿತ್ತು. ಅದಾದ ಬಳಿಕ ಪ್ರಭುಗೆ ಹತ್ತಿರವಾದರು. ಈಗ ಮತ್ತೆ ಶಿಂಬುಗೆ ಹತ್ತಿರವಾಗಿದ್ದು ಇಬ್ಬರೂ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಹಳೆ ಪ್ರಿಯತಮನೊಂದಿಗೆ ಹೊಸ ಸ್ನೇಹ

ಸದ್ಯಕ್ಕೆ ನಯನತಾರಾ ಹಾಗೂ ಶಿಂಬು ಹಳೆಯದೆಲ್ಲವನ್ನೂ ಮರೆತು ಹೊಸ ಸ್ನೇಹಿತರಾಗಿದ್ದಾರೆ. ಇಬ್ಬರೂ ಸಭೆ ಸಮಾರಂಭದಲ್ಲಿ ಆಗಾಗ ಕಾಣಿಸಿಕೊಂಡು ನೋಡುಗರ ಕಣ್ಣರಳುವಂತೆ ಮಾಡುತ್ತಿದ್ದಾರೆ.

English summary
Lot has been written about Nayantara-Prabhu Deva's affair and their break up. Their relationship was the talk of the town at one point of time and they never tried to hid their relationship. They appeared together in public events and confessed, without any hesitation, that they were in love. But to everybody's surprise, something went wrong in their relationship and they got separated.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada