»   » ನಟಿ ಪ್ರಣೀತಾ ತುಟಿಗೆ ತುಟಿ ಒತ್ತಿದ ಈ ನಟನ್ಯಾರು?

ನಟಿ ಪ್ರಣೀತಾ ತುಟಿಗೆ ತುಟಿ ಒತ್ತಿದ ಈ ನಟನ್ಯಾರು?

By: ಅನಂತರಾಮು, ಹೈದರಾಬಾದ್
Subscribe to Filmibeat Kannada

ಸ್ಯಾಂಡಲ್ ವುಡ್ ಬ್ರಹ್ಮ, ರಿಯಲ್ ಸ್ಟಾರ್ ಉಪೇಂದ್ರ ಜೊತೆ 'ಬ್ರಹ್ಮ' ಚಿತ್ರದಲ್ಲಿ ಅಭಿನಯಿಸಿರುವ ಕನ್ನಡದ ಮಿಲ್ಕಿ ಬ್ಯೂಟಿ ಪ್ರಣೀತಾ ಈಗ ಟಾಲಿವುಡ್ ನಲ್ಲಿ ಸಖತ್ ಬಿಜಿ ನಟಿ. ಇತ್ತ ಕನ್ನಡದಲ್ಲೂ ಭರ್ಜರಿ ಆಫರ್ ಗಳನ್ನು ಪಡೆಯುತ್ತಾ ಪಕ್ಕದ ರಾಜ್ಯದಲ್ಲೂ ಸದ್ದು ಮಾಡುತ್ತಿರುವ ಬೆಡಗಿ.

ಪವನ್ ಕಲ್ಯಾಣ್ ಜೊತೆಗಿನ 'ಅತ್ತಾರಿಂಟಿಕಿ ದಾರೇದಿ' ಚಿತ್ರದಲ್ಲಿ ಅಭಿನಯಿಸಿದ್ದ ಪ್ರಣೀತಾ ಈಗ ಇನ್ನೊಂದು ತೆಲುಗು ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಆ ಚಿತ್ರದ ಹೆಸರು 'ಪಾಂಡವುಲು ಪಾಂಡವುಲು ತುಮ್ಮೆದ'. ಈ ಚಿತ್ರದ ಹೀರೋ ಮಂಚು ಮನೋಜ್. [ರಿಯಲ್ ಸ್ಟಾರ್ ಉಪ್ಪಿ ಬ್ರಹ್ಮೋತ್ಸವ]


ಈ ಚಿತ್ರದಲ್ಲಿನ ಒಂದು ಕಿಸ್ಸಿಂಗ್ ಸೀನ್ ಈಗ ಚಿತ್ರರಸಿಕರ ನಿದ್ದೆಗೆಡಿಸಿದೆ. ಈ ಚಿತ್ರಕ್ಕೆ ಸಂಬಂಧಿಸಿದ ಒಂದು ಹಾಟ್ ಫೋಟೋ ಬಿಡುಗಡೆಯಾಗಿದ್ದು ಟಾಲಿವುಡ್ ನಲ್ಲಿ ಸಂಚಲನ ಮೂಡಿಸಿದೆ. ನಟ ಮಂಚು ಮನೋಜ್ ಜೊತೆಗಿನ ತುಟಿಗೆ ತುಟಿ ಬೆರೆಸಿರುವ ಫೋಟೋ ಪ್ರಣೀತಾ ಅಭಿಮಾನಿಗಳ ಹೃದಯಕ್ಕೆ ಕೊಳ್ಳಿ ಇಟ್ಟಂತಾಗಿದೆ.

ಅಂದಹಾಗೆ ಇದು ಪ್ರಣೀತಾ ಅವರ ಮೊದಲ ಚುಂಬನ ದೃಶ್ಯವಂತೆ. ಈ ಹಿಂದೆಂದೂ ಪ್ರಣೀತಾ ಈ ರೀತಿಯ ಸನ್ನಿವೇಶಗಳಲ್ಲಿ ಅಭಿನಯಿಸಿರಲಿಲ್ಲ. ಟಾಲಿವುಡ್ ನಲ್ಲಿ ಇದೇ ಮೊದಲ ಬಾರಿಗೆ ಚುಂಬನ ದೃಶ್ಯದಲ್ಲಿ ಕಾಣಿಸಿಕೊಂಡಿರುವುದು ಎಲ್ಲರ ಕಣ್ಣು ಪ್ರಣೀತಾ ಮೇಲೆ ಬೀಳುವಂತೆ ಮಾಡಿದೆ.

ಕೆಲವು ನಿರ್ಮಾಪಕರು ತಮ್ಮ ಚಿತ್ರದಲ್ಲೂ ಆ ರೀತಿಯ ಒಂದು ಹಾಟ್ ಸೀನ್ ಇಡಲು ನಿರ್ಧರಿಸಿದ್ದಾರಂತೆ. ಇದರಿಂದ ಕಂಗಾಲಾಗಿರುವ ಪ್ರಣೀತಾ ಇತ್ತೀಚೆಗೆ ಮಾಧ್ಯಮಗಳ ಜೊತೆ ತಮ್ಮ ಕಷ್ಟಸುಖ ಹೇಳಿಕೊಂಡಿದ್ದಾರೆ. ತಮ್ಮ ಚುಂಬನ ದೃಶ್ಯವನ್ನು ಅನಾವಶ್ಯಕವಾಗಿ ಹೈಲೈಟ್ ಮಾಡಲಾಗಿದೆ ಎಂದಿದ್ದಾರೆ.

"ಚಿತ್ರದ ಹಾಡೊಂದರಲ್ಲಿ ಬರುವ ಒಂದೇ ಒಂದು ಸಣ್ಣ ದೃಶ್ಯವದು. ಒಂದು ಸೆಕೆಂಡ್ ಸಹ ಇರುವುದಿಲ್ಲ. ನನ್ನ ಪ್ರಕಾರ ಅದು ಚುಂಬನ ದೃಶ್ಯ ಅಲ್ಲವೇ ಅಲ್ಲ. ಮುಂದಿನ ಚಿತ್ರಗಳಲ್ಲಿ ತಾನು ಬಿಕಿನಿ ತೊಡುತ್ತಿದ್ದೇನೆ ಎಂಬ ಸುದ್ದಿಗಳೂ ಹರಿದಾಡುತ್ತಿವೆ. ಅವೆಲ್ಲಾ ಕೇವಲ ಗಾಳಿಸುದ್ದಿಗಳಷ್ಟೇ" ಎಂದಿದ್ದಾರೆ ಪ್ರಣೀತಾ.

'ಪಾಂಡವುಲು ಪಾಂಡವುಲು ತುಮ್ಮೆದ ಚಿತ್ರದಲ್ಲಿ ಭಾರಿ ತಾರಾಗಣವೇ ಇದೆ. ಮೋಹನ್ ಬಾಬು, ಅವರ ಪುತ್ರರಾದ ಮನೋಜ್, ವಿಷ್ಣು, ವರುಣ್ ಸಂದೇಶ್ ಇರುವ ಪಾತ್ರವರ್ಗದಲ್ಲಿ ರವೀನಾ ಟಂಡನ್, ಹನ್ಸಿಕಾ ಮೋತ್ವಾನಿ, ಪ್ರಣೀತಾ ನಾಯಕಿಯರು.

English summary
"There’s no lip-lock in the Pandavulu Pandavulu Thummeda. The picture that’s doing rounds on the internet has been taken from a song and it doesn’t even last for more than a second." Actress Pranitha told.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada