»   » ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಲಿರುವ ನಟಿಯರು ಇವರೇ

ವಿಲನ್ ಚಿತ್ರದಲ್ಲಿ ಶಿವಣ್ಣನ ಜೊತೆ ಹೆಜ್ಜೆ ಹಾಕಲಿರುವ ನಟಿಯರು ಇವರೇ

Posted By:
Subscribe to Filmibeat Kannada

'ದಿ ವಿಲನ್' ಚಿತ್ರದಲ್ಲಿ ಕಿಚ್ಚ ಸುದೀಪ್ ಅವರ ಟಾಕೀ ಪೋಷನ್ ಮುಗಿಸಿದ್ದ ನಿರ್ದೇಶಕ ಪ್ರೇಮ್, ಈಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಭಾಗದ ಚಿತ್ರೀಕರಣ ಮಾಡುತ್ತಿದ್ದಾರೆ.

ಈ ಹಿಂದೆ ಹೇಳಿದ್ದಾಗೆ ಶಿವರಾಜ್ ಕುಮಾರ್ ಅವರ ಎಂಟ್ರಿ ಹಾಡಿನಲ್ಲಿ 6 ಜನ ನಟಿಯರು ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿತ್ತು. ಇದೀಗ, ಅವರಲ್ಲಿ ಮೂರು ಜನ ನಟಿಯರ ಹೆಸರು ಅಂತಿಮವಾಗಿದ್ದು, ಸ್ಯಾಂಡಲ್ ವುಡ್ ನ ಬಹುಬೇಡಿಕೆಯ ನಟಿಯರು ಸೆಂಚುರಿ ಸ್ಟಾರ್ ಜೊತೆ ಸ್ಟೆಪ್ ಹಾಕಲಿದ್ದಾರೆ.

ಡಿಂಪಲ್ ಕ್ವೀನ್ ರಚಿತಾ ರಾಮ್, ರಂಗಿತ ರಂಗ ಖ್ಯಾತಿಯ ರಾಧಿಕಾ ಚೇತನ್ ಹಾಗೂ ಯು-ಟರ್ನ್ ಖ್ಯಾತಿಯ ಶ್ರದ್ಧಾ ಶ್ರೀನಾಥ್ 'ದಿ ವಿಲನ್' ಅಡ್ಡಾದಲ್ಲಿ ಸೊಂಟ ಬಳುಕಿಸಲಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

'ದಿ ವಿಲನ್' ಚಿತ್ರದ ಒಂದು ಹಾಡಿನಲ್ಲಿ ಇರ್ತಾರೆ 6 ನಾಯಕಿಯರು

Rachita Ram, Shraddha Srinath and Radhika chetan with Shiva rajkumar

ರಾಮನಗರದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದ್ದು, ಮಾರ್ಚ್ ಅಂತ್ಯಕ್ಕೆ ಕಂಪ್ಲೀಟ್ ಶೂಟಿಂಗ್ ಮುಗಿಸಲು ನಿರ್ಧರಿಸಲಾಗಿದೆ. ಸದ್ಯ ಚಿತ್ರದ ಟ್ರೈಲರ್ ಸಿದ್ದವಾಗುತ್ತಿದ್ದು, ಚಿತ್ರೀಕರಣ ಮುಗಿಯುತ್ತಿದ್ದಂತೆ ಟ್ರೈಲರ್ ರಿಲಿಸ್ ಮಾಡಲಿದ್ದಾರೆ.

ಕೋಟಿ ವೆಚ್ಚದಲ್ಲಿ ಚಿತ್ರೀಕರಣ ಆಗುತ್ತಿದೆ ಕಿಚ್ಚನ ಹಾಡು

ಮತ್ತೊಂದೆಡೆ ಸುದೀಪ್ ಇಂಟ್ರೋ ಸಾಂಗ್ ಗಾಗಿ ಸುಮಾರು 3 ಕೋಟಿ ಖರ್ಚು ಮಾಡಲಾಗುತ್ತಿದೆಯಂತೆ. ಇಬ್ಬರು ದೊಡ್ಡ ನಟರ ಎಂಟ್ರಿ ಅದ್ಧೂರಿಯಾಗಿರಬೇಕು ಎಂದು ಇಷ್ಟೆಲ್ಲಾ ತಯಾರಿ ಮಾಡಿದ್ದಾರೆ ನಿರ್ದೇಶಕ ಪ್ರೇಮ್.

ಇನ್ನು ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ನೀಡುತ್ತಿದ್ದು, ಆಮಿ ಜಾಕ್ಸನ್, ಮಿಥುನ್ ಚಕ್ರವರ್ತಿ, ತೆಲುಗು ನಟ ಶ್ರೀಕಾಂತ್ ಸೇರಿದಂತೆ ಹಲವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಿ.ಆರ್.ಮನೋಹರ್ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.

English summary
Rachita Ram, Shraddha Srinath and Radhika chetan to up the glam quotient in The Villain They will be among the six heroines to shake a leg with Shiva rajkumar in a song sequence to be shot next week .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada