»   » ಮುತ್ತಪ್ಪ 'ರೈ' ಚಿತ್ರ ಏನಾಯ್ತು, ಸದ್ದು ಇಲ್ಲ, ಸುದ್ದಿನೂ ಇಲ್ಲ.!

ಮುತ್ತಪ್ಪ 'ರೈ' ಚಿತ್ರ ಏನಾಯ್ತು, ಸದ್ದು ಇಲ್ಲ, ಸುದ್ದಿನೂ ಇಲ್ಲ.!

Posted By:
Subscribe to Filmibeat Kannada

ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮ ನೈಜ ಕಥೆಗಳನ್ನ ಸಿನಿಮಾ ಮಾಡೋದ್ರಲ್ಲಿ 'ದಿ ಮಾಸ್ಟರ್'. ಇಂತಹ ನಿರ್ದೇಶಕರ ಕಣ್ಣು ಕಳೆದ ವರ್ಷ ಕರ್ನಾಟಕದ ಮುತ್ತಪ್ಪ ರೈ ಅವರ ಮೇಲೆ ಬಿದ್ದಿತ್ತು. ಅದರಂತೆ ಮುತ್ತಪ್ಪ ರೈ ಜೀವನಾಧರಿತ ಸಿನಿಮಾ ಮಾಡಲು ಎಲ್ಲ ಸಿದ್ದತೆಗಳನ್ನ ಮಾಡಿಕೊಂಡರು. ಸಿನಿಮಾ ಕೂಡ ಅದ್ಧೂರಿಯಾಗಿ ಶುರುವಾಗಿ, ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗೋಯ್ತು.

ಇನ್ನೇನೂ ಸಿನಿಮಾ ಚಿತ್ರೀಕರಣ ಶುರು ಮಾಡಿ ಅದೇ ವರ್ಷ ಬಿಡುಗಡೆಯಾಗುತ್ತೆ ಎಂಬ ಲೆಕ್ಕಾಚಾರವನ್ನ ಆಗಲೇ ಹಾಕಲಾಗಿತ್ತು. ಆದ್ರೆ, ಅದೇನ್ ಆಯ್ತೋ ಗೊತ್ತಿಲ್ಲ. ವರ್ಷಗಳೆ ಕಳೆದರೂ 'ರೈ' ಚಿತ್ರದ ಬಗ್ಗೆ ಒಂದೇ ಒಂದು ಸುದ್ದಿ ಇಲ್ಲ. ಹೀಗಂತಾ ಗಾಂಧಿನಗರದಲ್ಲಿ ಕೇಳಿದ್ರೆ, ಅರೇ ಅದ್ಯಾಕ್ ಹೇಳ್ತಿರಾ ಬಿಡಿ ಅಂತಿದ್ದಾರೆ.

ಹಾಗಿದ್ರೆ, ವರ್ಮ ನಿರ್ದೇಶನದ ರೈ ಸಿನಿಮಾ ಏನಾಯ್ತು? ಸಿನಿಮಾ ರಿಲೀಸ್ ಆಗುತ್ತಾ? ಅಥವಾ ಇಲ್ವಾ? ಮುಂದೆ ಓದಿ.....

'ರೈ' ಸಿನಿಮಾ ನಿಂತೋಯ್ತಂತೆ!

ರಾಮ್ ಗೋಪಾಲ್ ವರ್ಮ ನಿರ್ದೇಶನದಲ್ಲಿ ತಯಾರಾಗಬೇಕಿದ್ದ 'ರೈ' ಸಿನಿಮಾ ನಿಂತು ಹೋಗಿದೆ ಎಂಬ ಸುದ್ದಿ ಈಗ ಎಲ್ಲ ಕಡೆ ಹರಿದಾಡುತ್ತಿದೆ.

ಸಿನಿಮಾ ನಿಲ್ಲಲು ಕಾರಣವೇನು?

ಮುತ್ತಪ್ಪ ರೈ ಅವರ ಬಗ್ಗೆ ಮೂಡಿ ಬರಬೇಕಿದ್ದ ಸಿನಿಮಾ ನಿಲ್ಲಲು ಕಾರಣ ಸ್ವತಃ ಮುತ್ತಪ್ಪ ರೈ ಅವರಂತೆ. ಆಪ್ತರೊಬ್ಬರ ಸಲಹ ಮೆರೆಗೆ ಸಿನಿಮಾ ಮಾಡದಿರಲು ನಿರ್ಧರಿಸಿದರಂತೆ. ಹೀಗಾಗಿ, ವರ್ಮ ಅವರಿಗೆ ಮುತ್ತಪ್ಪ ರೈ ಸಿನಿಮಾ ನಿಲ್ಲಿಸುವಂತೆ ಸೂಚಿಸಿದರಂತೆ ಎನ್ನಲಾಗಿದೆ.

ಚಿತ್ರಪುಟ ; ಭೂಗತ ದೊರೆ ಮುತ್ತಪ್ಪ 'ರೈ' ಚಿತ್ರದ ಅದ್ಧೂರಿ ಚಾಲನೆ

ರೈ ಮಾತಿನಿಂದ ಹಿಂದೆ ಸರಿದ ವರ್ಮ

ಮುತ್ತಪ್ಪ ರೈ ಅವರು ಸಿನಿಮಾ ನಿಲ್ಲಿಸುವಂತೆ ಸೂಚಿಸಿರುವ ಹಿನ್ನೆಲೆ ನಿರ್ದೇಶಕ ರಾಮ್ ಗೋಪಾಲ್ ವರ್ಮ ಅವರು ಈ ಚಿತ್ರವನ್ನ ಕೈಬಿಟ್ಟಿದ್ದರಂತೆ.

ಸುದೀಪ್ ಅಲ್ಲ! ಮುತ್ತಪ್ಪ 'ರೈ' ಆಗಿ ವಿವೇಕ್ ಒಬೆರಾಯ್.!

ವಿವೇಕ್ ಒಬೆರಾಯ್ ನಾಯಕನಾಗಿದ್ದರು!

'ರೈ' ಚಿತ್ರವನ್ನ ಮುತ್ತಪ್ಪ ರೈ ಅವರ ಖಾಸಗಿ ಗೆಸ್ಟ್ ಹೌಸ್ ನಲ್ಲಿ ಲಾಂಚ್ ಮಾಡಲಾಗಿತ್ತು. ಈ ಚಿತ್ರದಲ್ಲಿ ಬಾಲಿವುಡ್ ನಟ ವಿವೇಕ್ ಒಬೆರಾಯ್ ನಾಯಕರಾಗಿದ್ದರು. ಚಿತ್ರದ ಫೋಟೋಶೂಟ್ ಕೂಡ ಆಗಿತ್ತು. 1 ನಿಮಿಷದ ಟೀಸರ್ ಕೂಡ ಬಿಡುಗಡೆ ಮಾಡಲಾಗಿತ್ತು.

'ರೈ' ಟೀಸರ್ ಇಲ್ಲಿದೆ ನೋಡಿ

ಶಿವಣ್ಣ ಜೊತೆ 'ಸೌತ್' ಸಿನಿಮಾ

ಇನ್ನು 'ಕಿಲ್ಲಿಂಗ್ ವೀರಪ್ಪನ್' ಚಿತ್ರದ ಮೂಲಕ ಕನ್ನಡದಲ್ಲಿ ಸಿನಿಮಾ ಮಾಡಿದ ರಾಮ್ ಗೋಪಾಲ್ ವರ್ಮ, ಈ ಚಿತ್ರದ ನಂತರ ಹ್ಯಾಟ್ರಿಕ್ ಹೀರೋ ಜೊತೆ 'ಸೌತ್' ಎಂಬ ಸಿನಿಮಾ ಮಾಡುವುದಾಗಿ ಹೇಳಿದ್ದರು. ಬಹುಶಃ 'ಸೌತ್' ಚಿತ್ರವೂ ಶುರುವಾಗುವುದು ಅನುಮಾನ ಎನ್ನುತ್ತಿದ್ದಾರೆ ಗಾಂಧಿನಗರದ ಮಂದಿ.

English summary
According to source ram gopal varma dropped kannada movie 'Rai'. Rai is an upcoming Biographical film written and directed by Ram Gopal Varma, based on the life of former underworld syndicate Muthappa Rai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada