For Quick Alerts
  ALLOW NOTIFICATIONS  
  For Daily Alerts

  'ಕಾಸ್ಟಿಂಗ್ ಕೌಚ್' ಶ್ರೀರೆಡ್ಡಿಗೆ ಚಾನ್ಸ್ ಕೊಡ್ತಾರಂತೆ ಖ್ಯಾತ ನಿರ್ದೇಶಕ

  By Bharath Kumar
  |

  'ಕಾಸ್ಟಿಂಗ್ ಕೌಚ್' ಬಗ್ಗೆ ಬೀದಿಗಿಳಿದು ಪ್ರತಿಭಟನೆ ಮಾಡಿ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗುರುವ ತೆಲುಗು ನಟಿ ಶ್ರೀರೆಡ್ಡಿಗೆ ಖ್ಯಾತ ನಿರ್ದೇಶಕರೊಬ್ಬರು ಸಿನಿಮಾ ಮಾಡಲು ಮುಂದಾಗಿದ್ದಾರೆ.

  ಶ್ರೀರೆಡ್ಡಿ ನಿಭಾಯಿಸಬಲ್ಲರು ಎಂಬ ಪಾತ್ರ ಇದ್ದರೇ ಖಂಡಿತಾ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದು ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.

  ಶ್ರೀರೆಡ್ಡಿ-ಅಭಿರಾಮ್ ವಿವಾದ: 5 ಕೋಟಿ ಡೀಲ್ ಬಿಚ್ಚಿಟ್ಟ ವರ್ಮಾ ಶ್ರೀರೆಡ್ಡಿ-ಅಭಿರಾಮ್ ವಿವಾದ: 5 ಕೋಟಿ ಡೀಲ್ ಬಿಚ್ಚಿಟ್ಟ ವರ್ಮಾ

  ಸದ್ಯ, ರಾಮ್ ಗೋಪಾಲ್ ವರ್ಮಾ ನಿರ್ದೇಶನದಲ್ಲಿ, ನಾಗಾರ್ಜುನ ನಟಿಸಿರುವ 'ಆಫೀಸರ್' ಸಿನಿಮಾ ಮೇ ತಿಂಗಳಲ್ಲಿ ತೆರೆಕಾಣುತ್ತಿದೆ. ಕಾಸ್ಟಿಂಗ್ ಕೌಚ್ ಹೆಸರಿನಲ್ಲಿ ಖ್ಯಾತ ನಟರ ಬಗ್ಗೆ ಅವಹೇಳನಕಾರಿಯಾಗಿ ಕಾಮೆಂಟ್ ಮಾಡಿದ್ದ ಆರ್.ಜಿ.ವಿಯ ಈ ಚಿತ್ರವನ್ನ ನಿಷೇಧ ಮಾಡಬೇಕು ಎಂದು ಕೆಲವರು ಆಗ್ರಹಿಸಿದ್ದಾರೆ. ಹೀಗಿರುವಾಗ, ಶ್ರೀರೆಡ್ಡಿಗೆ ಸಾಧ್ಯವಾದರೇ ಸಿನಿಮಾ ಮಾಡುತ್ತೇನೆ ಎಂದು ಮತ್ತಷ್ಟು ಸುದ್ದಿಯಾಗಿದ್ದಾರೆ.

  ಶ್ರೀರೆಡ್ಡಿಗೆ ಕೌಂಟರ್ ಕೊಟ್ಟಿದ್ದಕ್ಕೆ ಕನ್ನಡ ಚಿತ್ರ ನಟಿ ಕವಿತಾಗೆ ಬೆದರಿಕೆ.! ಶ್ರೀರೆಡ್ಡಿಗೆ ಕೌಂಟರ್ ಕೊಟ್ಟಿದ್ದಕ್ಕೆ ಕನ್ನಡ ಚಿತ್ರ ನಟಿ ಕವಿತಾಗೆ ಬೆದರಿಕೆ.!

  ಮೊದಲಿನಿಂದಲೂ ಶ್ರೀರೆಡ್ಡಿ ಹೋರಾಟಕ್ಕೆ ರಾಮ್ ಗೋಪಾಲ್ ವರ್ಮಾ ಬೆಂಬಲ ನೀಡುತ್ತಾ ಬಂದಿದ್ದಾರೆ. ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಮಾತನಾಡಲು ವರ್ಮಾನೇ ಪ್ರಚೋಧನೆ ಮಾಡಿರುವುದು ಎನ್ನಲಾಗಿದೆ.

  ಶ್ರೀರೆಡ್ಡಿಯ ಪ್ರತಿಯೊಂದು ಪ್ರತಿಭಟನೆಯನ್ನ ಫಾಲೋ ಮಾಡುತ್ತಿದ್ದ ಆರ್.ಜಿ.ವಿ ಟ್ವಿಟ್ಟರ್ ನಲ್ಲಿ ಅವರಿಗೆ ಬೆಂಬಲ ನೀಡುತ್ತಲೇ ಇದ್ದರು. ಈ ಹೋರಾಟವನ್ನ ಹಾಡಿಹೊಗಳುತ್ತಿದ್ದರು. ಈಗ ಸಿನಿಮಾ ಮಾಡಲು ಚಿಂತಿಸಿರುವುದು ವಿಶೇಷವೆನಿಸಿಕೊಂಡಿದೆ.

  English summary
  We all know that director Ram Gopal Varma's Officer is going to hit the screens in May. now, RGV shared that he is ready to direct Sri Reddy if there is a suitable role for her

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X