For Quick Alerts
  ALLOW NOTIFICATIONS  
  For Daily Alerts

  ರೀಲ್ ಅಲ್ಲ ರಿಯಲ್: 'ಪುಟ್ಟಗೌರಿ' ರಂಜನಿ ಈಗ ಡೈರೆಕ್ಟರ್!

  |

  'ಪುಟ್ಟಗೌರಿ ಮದುವೆ' ಧಾರಾವಾಹಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸೀರಿಯಲ್ ಆಗಿರುವಷ್ಟು ಫೇಮಸ್ ಬೇರೆ ಯಾವ ಸೀರಿಯಲ್ ಆಗಿಲ್ಲವೇನೋ. ಇಂತಹ ಧಾರಾವಾಹಿಯ ಮುಖ್ಯ ಪಾತ್ರಧಾರಿ ರಂಜನಿ ರಾಘವನ್ ಈಗ ಹೊಸ ಯೋಜನೆಗೆ ಮುಂದಾಗಿದ್ದಾರೆ.

  'ಪುಟ್ಟಗೌರಿ' ಧಾರಾವಾಹಿ ಕಳೆದ 6 ವರ್ಷಗಳಿಂದ ನಿರಂತರವಾಗಿ ಪ್ರಸಾರ ಆಗುತ್ತಿದೆ. ಈಗಾಗಲೇ ಬರೋಬ್ಬರಿ 1900 ಸಂಚಿಕೆಗಳನ್ನು ಈ ಧಾರಾವಾಹಿ ಪೂರ್ಣಗೊಳಿಸಿ ಮುನ್ನುಗ್ಗುತ್ತಿದೆ. ಮತ್ತೊಂದು ಕಡೆ ಈ ಧಾರಾವಾಹಿಯಲ್ಲಿ ನಟಿಸಿದ ಅನೇಕರಿಗೆ ಧಾರಾವಾಹಿ ಹೆಸರು ತಂದು ಕೊಟ್ಟಿದೆ.

  ಪುಟ್ಟಗೌರಿಯಾಗಿ ಕಾಣಿಸಿಕೊಂಡಿದ್ದ ನಟಿ ರಂಜನಿ ರಾಘವನ್ ಈಗ ಆ ಸೀರಿಯಲ್ ನಲ್ಲಿ ನಟಿಸುತ್ತಿಲ್ಲ. ಹೀಗಿರುವಾಗ, ರಂಜನಿ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಕೆಲವರಿಗೆ ಇರಬಹುದು. ಆದರೆ, ಇದೀಗ ರಂಜನಿ ಡೈರೆಕ್ಟರ್ ಆಗಲು ಹೊರಟಿದ್ದಾರೆ. ಮುಂದೆ ಓದಿ...

  ಹೊಸ ಧಾರಾವಾಹಿ ನಿರ್ದೇಶನ

  ಹೊಸ ಧಾರಾವಾಹಿ ನಿರ್ದೇಶನ

  ನಟಿ ರಂಜನಿ ರಾಘವನ್ ಈಗ ನಟಿ ಮಾತ್ರವಲ್ಲ ನಿರ್ದೇಶಕಿಯಾಗಿ ಗುರುತಿಸಿಕೊಳ್ಳುವ ತವಕದಲ್ಲಿ ಇದ್ದಾರೆ. ತಮ್ಮ ಸಾರಥ್ಯದಲ್ಲಿ ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡುವ ತಯಾರಿ ನಡೆಸಿದ್ದಾರೆ. ಕಿರುತೆರೆಯ ತನ್ನ ಇಷ್ಟ ವರ್ಷದ ನಟನೆಯ ಅನುಭವದಿಂದ ಹೊಸ ಹೆಜ್ಜೆ ಇಟ್ಟಿದ್ದಾರೆ ರಂಜನಿ.

  ಕಲರ್ಸ್ ಕನ್ನಡ ವಾಹಿನಿಯಲ್ಲಿ

  ಕಲರ್ಸ್ ಕನ್ನಡ ವಾಹಿನಿಯಲ್ಲಿ

  ವಿಶೇಷ ಅಂದರೆ, ನಟಿ ರಂಜನಿ ರಾಘವನ್ ನಿರ್ದೇಶನ ಮಾಡುತ್ತಿರುವುದು ಕಲರ್ಸ್ ಕನ್ನಡ ವಾಹಿನಿಗಾಗಿ. ಈ ವಾಹಿನಿಯಿಂದ ಪ್ರೇಕ್ಷಕರ ಮುಂದೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ರಂಜನಿ ಅದೇ ವಾಹಿನಿಯಿಂದ ನಿರ್ದೇಶಕಿ ಆಗುತ್ತಿದ್ದಾರೆ. ರಂಜನಿ ಅವರ ಹೊಸ ಧಾರಾವಾಹಿಯ ಹೆಸರು ಇನ್ನು ಬಹಿರಂಗವಾಗಿಲ್ಲ.

  ಆಡಿಷನ್ ನಡೆಯುತ್ತಿದೆ

  ಆಡಿಷನ್ ನಡೆಯುತ್ತಿದೆ

  ಸದ್ಯ, ರಂಜನಿ ತಮ್ಮ ಹೊಸ ಧಾರಾವಾಹಿಗೆ ಆಡಿಷನ್ ಮಾಡುತ್ತಿದ್ದಾರೆ. ಆಡಿಷನ್ ಮೂಲಕ ಹೊಸ ಮುಖಗಳನ್ನು ಹುಡುಕುತ್ತಿದ್ದಾರೆ. ಅಂದಹಾಗೆ, ಈ ಧಾರಾವಾಹಿ ಪ್ರಾರಂಭ ಆಗುತ್ತಿರುವ ವಿಷಯವನ್ನು ಇನ್ನೂ ರಂಜನಿ ಅನೌನ್ಸ್ ಮಾಡಿಲ್ಲ.

  ಸಿನಿಮಾಗಳಲ್ಲಿ ಬ್ಯುಸಿ

  ಸಿನಿಮಾಗಳಲ್ಲಿ ಬ್ಯುಸಿ

  ಮತ್ತೊಂದು ಕಡೆ ಸಿನಿಮಾಗಳಲ್ಲಿ ಸಹ ರಂಜನಿ ನಟಿಸುತ್ತಿದ್ದಾರೆ. 'ರಾಜಹಂಸ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ್ದ ರಂಜನಿ ಈಗ ಇನ್ನೊಂದು 'ಟಕ್ಕರ್' ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. 'ಸುಬ್ಬ ಸುಬ್ಬಿ' ಎಂಬ ಚಿತ್ರದಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ.

  English summary
  'Puttagowri Maduve' fame Ranjani Raghavan will be directing a new serial for colors kannada channel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X